ಕ್ಯಾಮರಾ ಕಣ್ಣಲ್ಲಿ ವಿಮಾನ ಪತನ; ಸಾವಿರಾರು ಜನ ಪ್ರತ್ಯಕ್ಷ ಸಾಕ್ಷಿ!
Team Udayavani, Jan 27, 2017, 4:53 PM IST
ಸಿಡ್ನಿ: ಲಘು ವಿಮಾನವೊಂದು ನೋಡ, ನೋಡುತ್ತಿದ್ದಂತೆಯೇ ಪರ್ತ್ ನ ಸ್ವಾನ್ ನದಿಗೆ ಬಿದ್ದು ದಂಪತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಇಲ್ಲಿನ ಪರ್ತ್ ನಗರದಲ್ಲಿ ಆಸ್ಟ್ರೇಲಿಯನ್ ಡೇ ಅಂಗವಾಗಿ ಗುರುವಾರ ಮಧ್ಯಾಹ್ನದಿಂದ ಸಿಡಿಮದ್ದು ಪ್ರದರ್ಶನ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಸಾವಿರಾರು ಜನರು ನೆರದಿದ್ದರು. ಆಸ್ಟ್ರೇಲಿಯನ್ ಡೇ ಅಂಗವಾಗಿ ನಡೆದ ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಪೀಟರ್ ಲೈಂಚ್(52ವರ್ಷ) ಹಾಗೂ ಇಂಡಾ ಕ್ಯಾಕ್ರಾವಾಟಿ(30) ಲಘು ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದಾಗ ವಿಮಾನ ಪರ್ತ್ ನದಿಯಲ್ಲಿ ಪತನಗೊಂಡಿತ್ತು! ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನದಿ ಮೇಲೆ ಹಾರಾಟ ನಡೆಸುತ್ತಿದ್ದಾಗಲೇ ವಿಮಾನ ಪತನಗೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ, ಆದರೆ ವಿಮಾನ ಯಾವ ಕಾರಣದಿಂದ ಪತನಗೊಂಡಿದೆ ಎಂಬುದು ಖಚಿತವಾಗಿ ತಿಳಿದು ಬಂದಿಲ್ಲ. ವಿಮಾನದ ಮುಂಭಾಗ ನೀರಿನೊಳಗೆ ಮುಳಗಿ, ಒಂದು ರೆಕ್ಕೆಯ ಭಾಗ ಮಾತ್ರ ನೀರಿನ ಮೇಲ್ಭಾಗದಲ್ಲಿ ಕಾಣಿಸುತ್ತಿತ್ತು ಎಂದು ವರದಿ ವಿವರಿಸಿದೆ.
ವಿಮಾನ ನೀರಿನಲ್ಲಿ ಪತನಗೊಳ್ಳುವಾಗ ಸಾವಿರಾರು ಮಂದಿ ವೀಕ್ಷಿಸುತ್ತಲೇ ಇದ್ದರು. ಆದರೆ ವಿಮಾನ ಪತನಗೊಳ್ಳುತ್ತಿದೆ ಎಂದು ಯಾರೂ ಭಾವಿಸಿಲ್ಲವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಘಟನೆಯಿಂದಾಗಿ 33 ವರ್ಷಗಳ ಇತಿಹಾಸ ಹೊಂದಿರುವ ಆಸ್ಟ್ರೇಲಿಯನ್ ಡೇ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.