![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Apr 11, 2020, 4:45 PM IST
ಪೋರ್ಚುಗಲ್ : ಪೋರ್ಚುಗಲ್‌ನಲ್ಲೂ ಕೋವಿಡ್ 19 ಕ್ಷಿಪ್ರಗತಿಯಲ್ಲಿ ವ್ಯಾಪಿಸಿಕೊಳ್ಳುತ್ತಿದೆ.
ಸ್ವಲ್ಪಗತಿಯಲ್ಲಿ ಮಂದ ಎನಿಸಿದ್ದರೂ ಇನ್ನೂ ಸ್ಪಷ್ಟವಾಗಿ ಹೇಳಲಾಗದ ಸ್ಥಿತಿ ಇಲ್ಲಿದೆ. ಪ್ರಸ್ತುತ ಸುಮಾರು 15 ಸಾವಿರ ಪ್ರಕರಣಗಳು ಪತ್ತೆಯಾಗಿದ್ದು ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಪೋರ್ಚುಗಲ್‌ನ ಅಧ್ಯಕ್ಷ ಮಾರ್ಸೆಲೊ ರೆಬೆಲೊ, ಈ ಹಿಂದೆ ಘೋಷಿಸಿದ್ದ ಎಪ್ರಿಲ್ 17 ರವರೆಗಿನ ಲಾಕ್‌ಡೌನ್ ಮೇ 1 ರವರೆಗೂ ಮುಂದುವರಿಯಲಿದೆ ಎಂದು ಪ್ರಕಟಿಸಿದ್ದಾರೆ.ಪೋರ್ಚುಗಲ್‌ನಲ್ಲಿ ಮಾ. 18 ರಂದು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಜತೆಗೆ ಕಳೆದ ವಾರ ಎಪ್ರಿಲ್ 17 ರವರೆಗೂ ಲಾಕ್‌ಡೌನ್ ನ್ನು ಮುಂದುವರಿಸಿತ್ತು.
ನಾವಿನ್ನೂ ಯುದ್ಧವನ್ನು ಗೆದ್ದಿಲ್ಲ ಎಂದು ಹೇಳಿರುವ ಅಧ್ಯಕ್ಷ, ನಮ್ಮ ಹೋರಾಟ ಇನ್ನಷ್ಟು ಸ್ಪಷ್ಟ ಹಾಗೂ ನಿಖರವಾಗಿ ನಡೆಯಬೇಕಿದೆ. ಹಾಗಾಗಿ ನಮ್ಮ ಶಸ್ತ್ರಗಳನ್ನು ಕೆಳಗಿಳಿಸಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.ರೆಬೆಲೋ ಸಹ ಎರಡು ವಾರಗಳ ಕಾಲ ಕ್ವಾರಂಟೇನ್‌ನಲ್ಲಿದ್ದು, ಆ ಬಳಿಕ ಕೋವಿಡ್ 19 ನೆಗೆಟಿವ್ ಫಲಿತಾಂಶ ಬಂದಿತ್ತು. ಇದುವರೆಗೂ ಪೋರ್ಚುಗಲ್‌ನಲ್ಲಿ 15, 472 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 435 ಮಂದಿ ಸತ್ತಿದ್ದಾರೆ. ನೆರೆಯ ರಾಷ್ಟ್ರವಾದ ಸ್ಪೇನ್‌ನಲ್ಲಿ ಆಗಿರುವ ಅನಾಹುತಗಳನ್ನು ಕಂಡರೆ ಇಲ್ಲಿಯ ಸಾವು ನೋವು ತೀರಾ ಕಡಿಮೆ ಎನ್ನಲಾಗುತ್ತಿದೆ. ಸ್ಪೇನ್ ನಲ್ಲಿ ಸಮಾರು 15, 843 ಮಂದಿ ಸತ್ತಿದ್ದಾರೆ. ಇಟಲಿಯ ಬಳಿಕ ಅತಿ ಹೆಚ್ಚು ಮಂದಿ ಸ್ಪೇನ್‌ನಲ್ಲಿ ಸೋಂಕಿನಿಂದ ಸತ್ತಿದ್ದಾರೆ.
ರೆಬೆಲೋ ಸಹ ಎರಡು ವಾರಗಳ ಕಾಲ ಕ್ವಾರಂಟೇನ್‌ನಲ್ಲಿದ್ದು, ಆ ಬಳಿಕ ಕೋವಿಡ್ 19 ನೆಗೆಟಿವ್ ಫಲಿತಾಂಶ ಬಂದಿತ್ತು. ಇದುವರೆಗೂ ಪೋರ್ಚುಗಲ್‌ನಲ್ಲಿ 15, 472 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 435 ಮಂದಿ ಸತ್ತಿದ್ದಾರೆ. ನೆರೆಯ ರಾಷ್ಟ್ರವಾದ ಸ್ಪೇನ್‌ನಲ್ಲಿ ಆಗಿರುವ ಅನಾಹುತಗಳನ್ನು ಕಂಡರೆ ಇಲ್ಲಿಯ ಸಾವು ನೋವು ತೀರಾ ಕಡಿಮೆ ಎನ್ನಲಾಗುತ್ತಿದೆ. ಸ್ಪೇನ್ ನಲ್ಲಿ ಸಮಾರು 15, 843 ಮಂದಿ ಸತ್ತಿದ್ದಾರೆ. ಇಟಲಿಯ ಬಳಿಕ ಅತಿ ಹೆಚ್ಚು ಮಂದಿ ಸ್ಪೇನ್‌ನಲ್ಲಿ ಸೋಂಕಿನಿಂದ ಸತ್ತಿದ್ದಾರೆ.ಇದೇ ಸಂದರ್ಭದಲ್ಲಿ ಟಿವಿ ವಾಹಿನಿಗಳಿಗೆ ಮಾತನಾಡಿರುವ ಪೋರ್ಚುಗಲ್ ಪ್ರಧಾನಿ ಆಂಟೊನಿಯೊ ಕೋಸ್ಟಾ, ಈಗಿನ ತುರ್ತುಸ್ಥಿತಿಯನ್ನು ವಾಪಸು ಪಡೆದರೆ ಬೇರೆ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಎಚ್ಚರಿಸಿದ್ದಾರೆ.
ಅಧ್ಯಕ್ಷ ಮತ್ತು ಪ್ರಧಾನಿ ಇಬ್ಬರೂ. “ನಾವಿನ್ನೂ ಅಪಾಯದ ಗಡಿಯಲ್ಲೇ ಇದ್ದೇವೆ. ಕ್ಲಿಷ್ಟಕರ ಪರಿಸ್ಥಿತಿಯಿದು. ಇದನ್ನು ದಾಟಿ ಬರುವುದು ತೀರಾ ಅಗತ್ಯವಿದೆ. ಹಾಗಾಗಿ ಇನ್ನಷ್ಟು ಸಂಯಮವನ್ನು ತಾಳಬೇಕು ಎಂದಿದ್ದಾರೆ.
ಈಸ್ಟರ್ ರಜಾ ದಿನ ಮುಗಿಯುತ್ತಿದ್ದಂತೆಯೇ ಮತ್ತೆ ಸರಕಾರವು ಲಾಕ್‌ಡೌನ್ ನಿಯಮಗಳನ್ನು ಕಠಿನಗೊಳಿಸಿದೆ. ವಿದೇಶಿ ಹಾಗೂ ದೇಶಿ ವಿಮಾನಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.
ಸ್ಪೇನ್‌ನಲ್ಲಿ ನಿಧಾನವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರುಳುತ್ತಿದ್ದು, ಸೋಂಕಿನ ಹರಡುವಿಕೆ ನಿಧಾನಗೊಂಡಿದೆ. ಸಾವಿನ ಸಂಖ್ಯೆಯಲ್ಲೂ ಕೊಂಚ ಇಳಿಕೆಯಾಗಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.