ಬಡತನವನ್ನು ಪುಸ್ತಕದಿಂದ ಕಲಿತಿಲ್ಲ: ಪ್ರಧಾನಿ ಮೋದಿ
Team Udayavani, Oct 31, 2019, 6:30 AM IST
ರಿಯಾದ್: “ನಾನು ಬಡತನ ವನ್ನು ಪುಸ್ತಕ ಓದಿ ತಿಳಿದುಕೊಂಡಿದ್ದಲ್ಲ. ಬಡತನದಿಂದಲೇ ಬೆಳೆದುಬಂದವನು. ರೈಲು ನಿಲ್ದಾಣದಲ್ಲಿ ಟೀ ಮಾರಿ ಬದುಕಿ ದವನು’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸೌದಿ ಅರೇಬಿಯಾದಲ್ಲಿ ನಡೆದ ಫ್ಯೂಚರ್ ಇನ್‌ವೆಸ್ಟ್ ಮೆಂಟ್ ಇನೀಷಿಯೇಟಿವ್ (ಎಫ್ಐಐ) ಕಾರ್ಯಕ್ರಮದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ದೊಡ್ಡ ರಾಜಕೀಯ ಕುಟುಂಬದ ಹಿನ್ನೆಲೆ ಯವನಲ್ಲ. ಬಡತನದ ಬಗ್ಗೆ ಪುಸ್ತಕ ಗಳಿಂದ ತಿಳಿದುಕೊಂಡವನಲ್ಲ. ಬಡತನ ದಲ್ಲೇ ಬದುಕಿದವನು. ಚಹಾ ಮಾರಿ ಈಗ ಇಲ್ಲಿಯವರೆಗೆ ತಲುಪಿದ್ದೇನೆ ಎಂದಿದ್ದಾರೆ.
ಮುಂದಿನ ಕೆಲವೇ ವರ್ಷಗಳಲ್ಲಿ ಭಾರತವು ಬಡತನ ನಿರ್ಮೂಲನೆಯಲ್ಲಿ ಯಶಸ್ವಿಯಾಗುತ್ತದೆ. ನಾವು ಬಡವರ ಸಬಲೀಕರಣ ಮಾಡುವ ಮೂಲಕ ಬಡತನದ ವಿರುದ್ಧ ಹೋರಾಡುತ್ತಿದ್ದೇವೆ. ಬಡವರಿಗೂ ಘನತೆ ಎಂಬುದಿರುತ್ತದೆ. ನಾನೇ ಸ್ವತಃ ಬಡತನವನ್ನು ಕೊನೆಗಾಣಿ ಸುತ್ತೇನೆ ಎಂದು ಬಡವನೊಬ್ಬ ಹೇಳಿಕೊಂಡರೆ ಅದಕ್ಕಿಂತ ತೃಪ್ತಿಯ ವಿಚಾರ ಬೇರೊಂದಿಲ್ಲ. ನಾವೆಲ್ಲರೂ ಆತನಿಗೆ ಘನತೆಯನ್ನು ಒದಗಿಸಿ, ಸಬಲೀಕರಣಕ್ಕೆ ಸಹಾಯ ಮಾಡಬೇಕು ಎಂದು ಮೋದಿ ಹೇಳಿದ್ದಾರೆ.
ಸ್ವದೇಶಕ್ಕೆ ವಾಪಸ್: ತಮ್ಮ ಒಂದು ದಿನದ ಸೌದಿ ಅರೇಬಿಯಾ ಭೇಟಿ ಮುಗಿಸಿ ಪ್ರಧಾನಿ ಮೋದಿ ಬುಧವಾರ ಸ್ವದೇಶಕ್ಕೆ ವಾಪಸಾಗಿದ್ದಾರೆ. ಸೌದಿ ದೊರೆ ಸೇರಿದಂತೆ ಅಲ್ಲಿನ ಪ್ರಮುಖ ನಾಯಕತ್ವದೊಂದಿಗೆ ಮಾತುಕತೆ ನಡೆಸಿರುವ ಮೋದಿ ಪ್ರಮುಖ ಆರ್ಥಿಕ ವೇದಿಕೆಯಲ್ಲೂ ಮಾತನಾಡುವ ಮೂಲಕ ರಿಯಾದ್ ಭೇಟಿಯನ್ನು ಯಶಸ್ವಿಯಾಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.