ವಿದ್ಯುತ್ ಕೊರತೆ: ಬಾಂಗ್ಲಾದೇಶದಲ್ಲಿ ಶಾಲೆ, ಕಚೇರಿಗಳಿಗೆ ರಜೆ ಹೆಚ್ಚಳ
Team Udayavani, Aug 25, 2022, 7:05 AM IST
ಢಾಕಾ: ಬಾಂಗ್ಲಾದೇಶದಲ್ಲಿ ವಿದ್ಯುತ್ ಕೊರತೆ ಹೆಚ್ಚಾಗಿರುವುದರಿಂದ ಶಾಲೆಗಳಿಗೆ ಮತ್ತು ಕಚೇರಿಗಳಿಗೆ ಕರ್ತವ್ಯದ ಮಿತಿ ಹಾಕಲಾಗಿದೆ. ಶಾಲೆಗಳಿಗೆ ವಾರಕ್ಕೆ ಒಂದು ದಿನವಿದ್ದ ರಜೆಯನ್ನು ಬುಧವಾರದಿಂದ ಎರಡು ದಿನಗಳಿಗೆ ಏರಿಸಲಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಪ್ರತಿದಿನ 8 ಗಂಟೆಗಳಿದ್ದ ಕೆಲಸದ ಅವಧಿಯನ್ನು 7 ಗಂಟೆಗೆ ಇಳಿಸಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ.
ಇಂಧನದ ವಿಚಾರದಲ್ಲಿ ಬಾಂಗ್ಲಾದೇಶ ಉಕ್ರೇನ್‌ನ್ನು ಅವಲಂಬಿಸಿದೆ. ಆದರೆ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಇಂಧನ ಆಮದು ಮಾಡಿಕೊಳ್ಳಲಾಗುತ್ತಿಲ್ಲ. ಜತೆಗೆ ವಿದ್ಯುತ್ ಉತ್ಪಾದನೆಯೂ ಗಣನೀಯವಾಗಿ ಕುಸಿದಿದೆ. ಅದರಿಂದಾಗಿ ವಿದ್ಯುತ್ ಬಳಕೆ ಕಡಿಮೆ ಮಾಡಲು ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ.
ಶಾಲೆಗಳಿಗೆ ಶುಕ್ರವಾರ ಮಾತ್ರವೇ ರಜೆ ನೀಡಲಾಗುತ್ತಿದ್ದು, ಈಗ ಶನಿವಾರವೂ ರಜೆ ಘೋಷಿಸಲಾಗಿದೆ. ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನಗಳ ಬೆಲೆಯನ್ನು ಬರೋಬ್ಬರಿ ಶೇ.50ರಷ್ಟು ಏರಿಕೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.