
ಅಮೆರಿಕದಲ್ಲಿ ನೂತನ ಪೌರತ್ವ ವಿಧೇಯಕ ಮಂಡನೆ ; ಎಚ್-1ಬಿ ವೀಸಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆ
Team Udayavani, May 12, 2023, 3:55 PM IST

ವಾಷಿಂಗ್ಟನ್: ಅಮೆರಿಕದಲ್ಲಿ ಆಡಳಿತಾರೂಢ ಡೆಮೊಕ್ರಾಟಿಕ್ ಪಕ್ಷವು ಅಲ್ಲಿನ ಸಂಸತ್‌ನಲ್ಲಿ ಪೌರತ್ವ ವಿಧೇಯಕ ವನ್ನು ಮಂಡಿಸಿದೆ. ಈ ಕಾಯಿದೆ ಜಾರಿಗೆ ಬಂದರೆ ಪ್ರತಿ ದೇಶಕ್ಕೆ ವಿತರಿಸುವ ಗ್ರೀನ್ ಕಾರ್ಡ್ ಗಳ ಮೇಲಿನ ಮಿತಿಯನ್ನು ತೆಗೆದುಹಾಕಲಾಗುತ್ತದೆ. ಅಲ್ಲದೇ ಎಚ್-1ಬಿ ವೀಸಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಲಿದೆ. ಡೆಮೊಕ್ರಾಟಿಕ್ ಪಕ್ಷದ ಸಂಸದೆ ಲಿಂಡಾ ಸಾಚೆಜ್ “ಅಮೆರಿಕ ಪೌರತ್ವ ವಿಧೇಯಕ 2023′ ಅನ್ನು ಮಂಡಿಸಿದರು. ಈ ಕಾಯಿದೆಯಿಂದ ದಾಖಲೆರಹಿತ 1.1 ಕೋಟಿ ವಲಸಿಗರಿಗೆ ಪೌರತ್ವ ಸಿಗಲಿದೆ.
ಗಡಿಪಾರಿನ ಭಯವಿಲ್ಲದೇ ಐದು ವರ್ಷಗಳ ಕಾಲ ದೇಶದಲ್ಲಿ ನೆಲೆಸಿ, ತೆರಿಗೆ ಪಾವತಿಸಲು ಅವಕಾಶ ನೀಡಲಾಗುತ್ತದೆ.
ಪೌರತ್ವ ನೀಡುವ ಮುನ್ನ ಅವರ ಹಿನ್ನೆಲೆಯನ್ನು ತಪಾಸಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಕಾಯಿದೆಯು ಉದ್ಯೋಗ ಆಧಾರಿತ ವಲಸೆ ವ್ಯವಸ್ಥೆಯಲ್ಲಿ ಬದಲಾವಣೆ ತರಲಿದೆ. ಪ್ರತಿ ದೇಶಕ್ಕೆ ವೀಸಾ ವಿತರಣೆ ಮೇಲಿನ ಮಿತಿಯನ್ನು ತೆಗೆದುಹಾಕಲಾಗುತ್ತದೆ. ಅಮೆರಿಕದಲ್ಲಿ ಪದವಿ ಪಡೆದವರಿಗೆ ಅಲ್ಲಿಯೇ ಕೆಲಸ ಮಾಡಲು ಹಾಗೂ ಕಡಿಮೆ ವೇತನದ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಗ್ರೀನ್ ಕಾರ್ಡ್ ಪಡೆಯಲು ಹೆಚ್ಚಿನ ಅವಕಾಶ ಒದಗಿಸುತ್ತದೆ. ಅಲ್ಲದೇ ಉದ್ಯೋಗದಲ್ಲಿರುವವರ ಅವಲಂಬಿ ತರಿಗೆ ಹಾಗೂ ಅವರ ಮಕ್ಕಳಿಗೆ
ಸುಲಭವಾಗಿ ಎಚ್-1ಬಿ ವೀಸಾ ಸಿಗಲಿದೆ. ಒಮ್ಮೆ ಎಚ್-1ಬಿ ವೀಸಾ ವಿತರಿಸಿದರೆ, ಅದರ ಸಿಂಧುತ್ವವು
ಮೂರು ವರ್ಷಗಳವರೆಗೆ ಇರಲಿದೆ.
ಈ ವಿಧೇಯಕವು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಪ್ರಾಯೋಗಿಕ ಕಾರ್ಯಕ್ರಮವನ್ನು
ರೂಪಿಸುತ್ತದೆ. ಅಲ್ಲದೇ ಅಮೆರಿಕನ್ ಉದ್ಯೋಗಿಗಳೊಂದಿಗಿನ ಸ್ಪರ್ಧೆಯಿಂದ ವಲಸಿಗರನ್ನು ರಕ್ಷಿಸಲು, ಉನ್ನತ
ಕುಶಲತೆಯ ವಲಸೆ ಉದ್ಯೋಗಿಗಳಿಗೆ ಹೆಚ್ಚಿನ ವೇತನವನ್ನು ಪ್ರೋತ್ಸಾಹಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ

Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.