Canada; ಖಲಿಸ್ಥಾನಿಗಳ ಇರುವಿಕೆ ಒಪ್ಪಿಕೊಂಡ ಪ್ರಧಾನಿ ಜಸ್ಟಿನ್ ಟ್ರಾಡೋ
ಕೆನಡಾ: ವಿದ್ಯಾರ್ಥಿಗಳ ತ್ವರಿತ ವೀಸಾ ಯೋಜನೆ ಅಂತ್ಯ!, ಭಾರತ ಸೇರಿ 14 ದೇಶಗಳ ವಿದ್ಯಾರ್ಥಿಗಳಿಗೆ ಸಂಕಷ್ಟ
Team Udayavani, Nov 10, 2024, 6:52 AM IST
ಹೊಸದಿಲ್ಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿರುವ ನಡುವೆಯೇ ಕೆನಡಾದಲ್ಲಿ ಖಲಿಸ್ಥಾನಿಗಳಿರುವುದನ್ನು ಇದೇ ಮೊದಲ ಬಾರಿಗೆ ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರಾಡೋ ಒಪ್ಪಿಕೊಂಡಿದ್ದಾರೆ.
ಒಟ್ಟಾವಾದ ಪಾರ್ಲಿಮೆಂಟ್ ಹಿಲ್‌ನಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಟ್ರಾಡೋ ಈ ವಿಷಯ ಒಪ್ಪಿಕೊಂಡಿದ್ದಾರೆ. ಹದೀìಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಸಿತ್ತು. “ಕೆನಡಾದಲ್ಲಿ ಖಲಿಸ್ಥಾನಿಗಳಿದ್ದಾರೆ ಆದರೆ ಅವರೆಲ್ಲರೂ ಸಿಕ್ಖರಲ್ಲ’ ಎಂದು ಅವರು ಹೇಳಿರುವ ವೀಡಿಯೋ ಇದೀಗ ವೈರಲ್ ಆಗಿದೆ.
ವಿದ್ಯಾರ್ಥಿಗಳ ತ್ವರಿತ ವೀಸಾ ಯೋಜನೆ ಅಂತ್ಯ!
ಭಾರತ ಸೇರಿ 14 ದೇಶಗಳ ವಿದ್ಯಾರ್ಥಿಗಳಿಗೆ ಸಂಕಷ್ಟ
ಒಟ್ಟಾವ: ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ಬೆನ್ನಲ್ಲೇ ವಿದ್ಯಾರ್ಥಿಗಳಿಗಾಗಿ ನೀಡಲಾಗುತ್ತಿದ್ದ “ಜನಪ್ರಿಯ ವೀಸಾ ಯೋಜನೆ’ಯನ್ನು ಕೆನಡಾ ಅಂತ್ಯಗೊಳಿಸಿದೆ. ವಿದ್ಯಾಭ್ಯಾಸಕ್ಕಾಗಿ ಕೆನಡಾಕ್ಕೆ ತೆರಳುತ್ತಿದ್ದ ಭಾರತದ ವಿದ್ಯಾರ್ಥಿಗಳಿಗೆ ಇದರಿಂದ ಸಂಕಷ್ಟ ಎದುರಾಗಿದೆ.
ವಿದ್ಯಾರ್ಥಿಗಳಿಗೆ ವೇಗವಾಗಿ ವೀಸಾ ದೊರಕಿಸಿಕೊಡುವುದಕ್ಕಾಗಿ 2018ರಲ್ಲಿ ಈ ಯೋಜನೆಯನ್ನು ಕೆನಡಾ ಜಾರಿ ಮಾಡಿತ್ತು. ಈ ಯೋಜನೆಯಡಿ ಅರ್ಜಿ ಸಲ್ಲಿಸಿದರೆ, ಹೆಚ್ಚಿನ ಪ್ರಮಾಣದ ವೀಸಾಗಳಿಗೆ ಅನುಮತಿ ದೊರಕುತ್ತಿತ್ತು. ಅಲ್ಲದೇ ಶೀಘ್ರವಾಗಿ ವೀಸಾ ವಿತರಣೆ ಪ್ರಕ್ರಿಯೆ ನಡೆಯು ತ್ತಿತ್ತು. ಈಗ ಇದನ್ನು ರದ್ದು ಮಾಡಿರುವುದರಿಂದ ಭಾರತ ಸೇರಿದಂತೆ 14 ರಾಷ್ಟ್ರಗಳ ವಿದ್ಯಾರ್ಥಿಗಳು ಸುದೀರ್ಘ ವೀಸಾ ಪ್ರಕ್ರಿಯೆಗೆ ಒಳಗಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗ ಇದರ ರದ್ದು ಏಕೆ?: ಕೆನಡಾದಲ್ಲಿ ವಲಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಮನೆ ಮತ್ತು ಸಂಪನ್ಮೂಲಗಳ ಕೊರತೆ ಎದುರಾಗಿದೆ. ಇದನ್ನು ತಡೆಗಟ್ಟಲು ಈ ಕ್ರಮ ಕೈಗೊಂಡಿರುವುದಾಗಿ ಕೆನಡಾ ಹೇಳಿದೆ. ಹೊರದೇಶದವರ ಸಂಖ್ಯೆ ಹೆಚ್ಚಿದ್ದರಿಂದ , ಜೀವನ ನಿರ್ವಹಣ ವೆಚ್ಚ ಮತ್ತು ಆರೋಗ್ಯ ಸೇವೆಗಳು ತುಟ್ಟಿಯಾಗಿವೆ ಎಂದು ಜನ ಆರೋಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.