ಸಮರ ವೀರರಿಗೆ ನಮನ, ಯುದ್ಧ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ

Team Udayavani, Jul 7, 2017, 3:45 AM IST

namana.jpg

ಟೆಲ್‌ ಅವೀವ್‌: ಇಸ್ರೇಲ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಪ್ರವಾಸದ ಕೊನೆಯ ದಿನವಾದ ಗುರುವಾರ ಹೈಫಾದಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮರಿಗೆ ಗೌರವ ಸಲ್ಲಿಸಿದ್ದಾರೆ.

1918ರ ಹೈಫಾ ವಿಮೋಚನಾ ಸಮರದಲ್ಲಿ ಒಟ್ಟೋಮನ್‌ ಟರ್ಕ್‌Õ ವಿರುದ್ಧ ಹೋರಾಡಿ ಮೈಸೂರು ಯೋಧರೂ ಸೇರಿದಂತೆ 44 ಮಂದಿ ಭಾರತೀಯ ಸೈನಿಕರು ಮಡಿದಿದ್ದರು. ಇವರ ಸ್ಮಾರಕವನ್ನು ಹೈಫಾದಲ್ಲಿ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, 2012ರಲ್ಲಿ ಹೈಫಾ ನಗರಪಾಲಿಕೆಯು ಭಾರತೀಯ ಯೋಧರ ಕಥೆಗಳನ್ನು ಅಲ್ಲಿನ ಶಾಲಾ ಪಠ್ಯದಲ್ಲಿ ಸೇರಿಸುವ ಮೂಲಕ ಅವರ ಬಲಿದಾನವನ್ನು ಸ್ಮರಣೀಯವಾಗಿ ಸಿದೆ. ಇಲ್ಲಿಗೆ ಭೇಟಿ ನೀಡಿದ ಮೋದಿ ಅವರು, ಯುದ್ಧ ಸ್ಮಾರಕಕ್ಕೆ ಪುಷ್ಪಾಂಜಲಿ ಸಲ್ಲಿಸಿ ಯೋಧರಿಗೆ ನಮಿಸಿದರು.

ಇದಕ್ಕೂ ಮುನ್ನ, ಅವರು ಓಲ್ಗಾ ಸಮುದ್ರ ತೀರದಲ್ಲಿರುವ ಅತ್ಯಾಧುನಿಕ “ಗಾಲ್‌ ಮೊಬೈಲ್‌’ ಸಮುದ್ರ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದರು. ಈ ವೇಳೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತಾನ್ಯಾಹು ಅವರೂ ಮೋದಿ ಅವರಿಗೆ ಸಾಥ್‌ ನೀಡಿದ್ದು, ಇಬ್ಬರೂ ಒಂದಷ್ಟು ಹೊತ್ತು ಸಮುದ್ರ ತೀರದಲ್ಲಿ ಮಾತುಕತೆಯನ್ನೂ ನಡೆಸಿದರು. 
ಗಾಲ್‌ ಮೊಬೈಲ್‌ ಎನ್ನುವುದು ಪುಟ್ಟ ವಾಹನದಲ್ಲಿರುವ ಒಂದು ಶುದ್ಧೀಕರಣ ಘಟಕವಾಗಿದ್ದು, ಸಮುದ್ರ ನೀರನ್ನು ಶುದ್ಧೀಕರಿಸುತ್ತದೆ. ಮಿಲಿಟರಿ ಬಳಕೆಗೆ, ಪ್ರಕೃತಿ ವಿಕೋಪ ಇತ್ಯಾದಿಗಳ ಸಂದರ್ಭದಲ್ಲಿ ಇದ್ದು ಸ್ಥಳದಲ್ಲೇ ಕುಡಿವ ಶುದ್ಧ ನೀರು ಪೂರೈಕೆ ಮಾಡುತ್ತದೆ. ದಿನದಲ್ಲಿ 20 ಸಾವಿರ ಲೀ. ಸಮುದ್ರ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಇದು ಹೊಂದಿದ್ದು, ಮಣ್ಣು ಮಿಶ್ರಿತ ನೀರಾದರೆ ದಿನಕ್ಕೆ 80 ಸಾವಿರ ಲೀ.ವರೆಗೆ ನೀರು ಶುದ್ಧೀಕರಣ ಮಾಡಬಲ್ಲದು. 

ಕಳೆದ ವರ್ಷ ಇಸ್ರೇಲ್‌ ರಾಷ್ಟ್ರಪತಿ ರುವೆನ್‌ ರಿವಿÉನ್‌ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಈ ಸಮುದ್ರ ನೀರು ಶುದ್ಧೀಕರಣ ಘಟಕ ಸ್ಥಾಪನೆ ಕುರಿತಂತೆ ಭಾರತದೊಂದಿಗೆ ಸಹಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಘಟಕ ಕಾರ್ಯನಿರ್ವಹಣೆಯ ಪ್ರಾತ್ಯಕ್ಷಿಕೆ ವೀಕ್ಷಿಸಿದ್ದಾರೆ. ಭಾರತ-ಇಸ್ರೇಲ್‌ ಒಪ್ಪಂದಗಳಲ್ಲಿ ಜಲಸಂರಕ್ಷಣೆ, ಶುದ್ಧೀಕರಣ, ಅತ್ಯಾಧುನಿಕ ನೀರಾವರಿ, ನದಿಯ ಉಪಯುಕ್ತ ಬಳಕೆ, ಗಂಗಾ ನದಿ ಶುದ್ಧೀಕರಣ ವಿಚಾರಗಳೂ ಅಡಕವಾಗಿವೆ. 

ಅನಿವಾಸಿ ಭಾರತೀಯರಿಗೆ ಹರ್ಷ: ಯಹೂದಿ ಸಮುದಾಯದ ಅನಿವಾಸಿ ಭಾರತೀಯರಿಗೆ ಪ್ರಧಾನಿ ಮೋದಿ ಅವರ ಇಸ್ರೇಲ್‌ ಭೇಟಿ ಮತ್ತು ಅನಿವಾಸಿಯರನ್ನು ದ್ದೇಶಿಸಿ ಭಾಷಣ ಹರ್ಷದ ಹೊನಲು ಹರಿಸಿದೆ. ತಮ್ಮ ಕೆಲವೊಂದು ಸಮಸ್ಯೆಗಳ ಬಗ್ಗೆಯೂ ಅವರು ಮಾತುಕತೆಯಲ್ಲಿ ಪ್ರಸ್ತಾವಿಸಿರುವುದು ಹರ್ಷಕ್ಕೆ ಕಾರಣವಾಗಿದೆ. “ನನಗೆ ಅಕ್ಷರಶಃ ಕಣ್ಣೀರು ಬಂತು. ಪ್ರಧಾನಿ ಮೋದಿ ಅವರು ಹೋದೆಡೆಯೆಲ್ಲ ಅನಿವಾಸಿ ಭಾರತೀಯರನ್ನು ಭೇಟಿ ಮಾಡಲು, ಬೆಂಬಲಿಸಲು, ಅವರ ಮೂಲ ಹೆಮ್ಮೆ ಪಡುವಂತೆ ಮಾಡಲು ಯತ್ನಿಸುತ್ತಾರೆ. ಯಾರನ್ನೇ ಆದರೂ ಅವರು ಮರೆಯು ವುದಿಲ್ಲ. ಇದು ನಮಗೆ ಖುಷಿ ತಂದಿತು ಎಂದು ನಾಗ್ಪುರ ಸನಿಹದ ಸಿಯೋನಿಯಿಂದ ಇಸ್ರೇಲ್‌ಗೆ ವಲಸೆ ಹೋದ ಯೋನಾ ಮಲಿಕೆರ್‌ ಹೇಳಿದ್ದಾರೆ. ಇದರೊಂದಿಗೆ ಇಸ್ರೇಲ್‌ನಲ್ಲಿ ಕಡ್ಡಾಯ ಮಿಲಿಟರಿ ಸೇವೆ ಸಲ್ಲಿಸಿದ್ದರೂ, ಅಂತಹವರಿಗೆ ಅನಿವಾಸಿ ಭಾರತೀಯ ಕಾರ್ಡ್‌ ನೀಡುವ ಭರವಸೆ ಯನ್ನು ಪ್ರಧಾನಿ ಮೋದಿ ನೀಡಿದ್ದು ಹರ್ಷಕ್ಕೆ ಕಾರಣವಾಗಿದೆ. ಇನ್ನೊಂದು ದೇಶದ ಮಿಲಿ ಟರಿಯಲ್ಲಿ ಸೇವೆ ಸಲ್ಲಿಸಿದರೆ, ಅಂತಹವರಿಗೆ ಈ ಕಾರ್ಡ್‌ ನೀಡಲಾಗುತ್ತಿರಲಿಲ್ಲ.

ಇಂದು ಜಿ20 ಶೃಂಗದಲ್ಲಿ ಕೆನಡಾ, ಜಪಾನ್‌ ನಾಯಕರ ಜತೆ ಮಾತುಕತೆ
ಇಸ್ರೇಲ್‌ನಿಂದ ನೇರವಾಗಿ ಜರ್ಮನಿಯ ಹ್ಯಾಂಬರ್ಗ್‌ಗೆ ತೆರಳಿರುವ ಪ್ರಧಾನಿ ಮೋದಿ ಶುಕ್ರವಾರದಿಂದ ನಡೆಯಲಿರುವ 2 ದಿನಗಳ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಕೆನಡಾ, ಜಪಾನ್‌, ಇಟಲಿ, ಯುಕೆ ಸೇರಿದಂತೆ ಹಲವು ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಬ್ರಿಕ್ಸ್‌ ರಾಷ್ಟ್ರಗಳ ಸಭೆಯಲ್ಲೂ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಜಿ20 ಸಭೆಯಲ್ಲಿ ಉಗ್ರ ನಿಗ್ರಹ, ಹವಾಮಾನ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.

ಟಾಪ್ ನ್ಯೂಸ್

Siddaramaiah

Cast Census: ಜಾತಿ ಗಣತಿ ವರದಿ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

DK-Shivakuamar

Cast Census: ಮಕರ ಸಂಕ್ರಾಂತಿ ಬಳಿಕ ಒಕ್ಕಲಿಗರ ಸಭೆ; ಸಂಘ ಒಮ್ಮತದ ತೀರ್ಮಾನ

ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?

ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?

Horoscope: ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಕೆಲಸದ ಹೊರೆ

Horoscope: ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಕೆಲಸದ ಹೊರೆ

ಚೀನದಲ್ಲಿ ಡೇಟಿಂಗ್‌ ಭರಾಟೆ: ಪುರುಷರಿಗೆ ಭಾರೀ ಬೇಡಿಕೆ

ಚೀನದಲ್ಲಿ ಡೇಟಿಂಗ್‌ ಭರಾಟೆ: ಪುರುಷರಿಗೆ ಭಾರೀ ಬೇಡಿಕೆ

Congress-Symbol

Congress: ಸಿದ್ದರಾಮಯ್ಯ, ಡಿಕೆಶಿ ಬಣ ಸಮರ ಮಧ್ಯೆ ಇಂದು 3 ಹೈವೋಲ್ಟೇಜ್‌ ಸಭೆ

JDS-Meet

JDS: ಜೆಡಿಎಸ್‌ ರಾಜ್ಯಾಧ್ಯಕ್ಷರ ಆಯ್ಕೆ ಈಗಿಲ್ಲ, ಎಪ್ರಿಲ್‌ನಲ್ಲಿ: ಎಚ್‌.ಡಿ.ಕುಮಾರಸ್ವಾಮಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೀನದಲ್ಲಿ ಡೇಟಿಂಗ್‌ ಭರಾಟೆ: ಪುರುಷರಿಗೆ ಭಾರೀ ಬೇಡಿಕೆ

ಚೀನದಲ್ಲಿ ಡೇಟಿಂಗ್‌ ಭರಾಟೆ: ಪುರುಷರಿಗೆ ಭಾರೀ ಬೇಡಿಕೆ

Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ

Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ

HMPV ವೈರಸ್‌ ಪ್ರಕರಣ ಕಡಿಮೆಯಾಗಿದೆ: ಚೀನ ಸರಕಾರ

HMPV ವೈರಸ್‌ ಪ್ರಕರಣ ಕಡಿಮೆಯಾಗಿದೆ: ಚೀನ ಸರಕಾರ

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

1-elon

Neuralink; ಮತ್ತೊಬ್ಬನ ಮೆದುಳಿಗೆ ಚಿಪ್‌ : ಏನಿದು ತಂತ್ರಜ್ಞಾನ?

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Siddaramaiah

Cast Census: ಜಾತಿ ಗಣತಿ ವರದಿ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

DK-Shivakuamar

Cast Census: ಮಕರ ಸಂಕ್ರಾಂತಿ ಬಳಿಕ ಒಕ್ಕಲಿಗರ ಸಭೆ; ಸಂಘ ಒಮ್ಮತದ ತೀರ್ಮಾನ

ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?

ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?

Horoscope: ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಕೆಲಸದ ಹೊರೆ

Horoscope: ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಕೆಲಸದ ಹೊರೆ

ಚೀನದಲ್ಲಿ ಡೇಟಿಂಗ್‌ ಭರಾಟೆ: ಪುರುಷರಿಗೆ ಭಾರೀ ಬೇಡಿಕೆ

ಚೀನದಲ್ಲಿ ಡೇಟಿಂಗ್‌ ಭರಾಟೆ: ಪುರುಷರಿಗೆ ಭಾರೀ ಬೇಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.