Narendra Modi: ಪುತಿನ್‌ಗೆ ಮತ್ತೆ ಶಾಂತಿ ಮಂತ್ರ ಬೋಧಿಸಿದ ಪ್ರಧಾನಿ ಮೋದಿ!
Team Udayavani, Oct 23, 2024, 6:24 AM IST
ಕಜಾನ್: ರಷ್ಯಾ-ಉಕ್ರೇನ್ ಯುದ್ಧ ಶಾಂತಿಯುತ ವಾಗಿ ಬಗೆಹರಿಯಬೇಕು ಇದಕ್ಕಾಗಿ ಸಾಧ್ಯವಾಗುವ ಎಲ್ಲ ರೀತಿಯ ಸಹಕಾರ ನೀಡಲು ನಾವು ಬದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್‌ಗೆ ಮತ್ತೆ ಪ್ರಧಾನಿ ಮೋದಿ ಮಂಗಳವಾರ ಶಾಂತಿ ಮಂತ್ರ ಬೋಧಿಸಿದ್ದಾರೆ.
ಬ್ರಿಕ್ಸ್ 16ನೇ ಶೃಂಗಸಭೆ ಹಿನ್ನೆಲೆಯಲ್ಲಿ ರಷ್ಯಾದ ಕಜಾನ್‌ಗೆ ಭೇಟಿ ನೀಡಿರುವ ಅವರು, ಪುತಿನ್ ಜತೆಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿ “ಕಳೆದ 3 ತಿಂಗಳಲ್ಲಿ 2ನೇ ಬಾರಿ ರಷ್ಯಾಗೆ ಭೇಟಿ ನೀಡಿದ್ದೇನೆ. ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಬೇಕೆಂಬ ನಮ್ಮ ನಿಲುವನ್ನು ಮತ್ತೆ ಪ್ರತಿಪಾದಿಸುತ್ತೇನೆ’ ಎಂದರು. ರಷ್ಯಾ-ಉಕ್ರೇನ್ ನಡುವೆ ಶಾಂತಿ, ಸ್ಥಿರತೆ ತರಲು ಅಗತ್ಯವಿರುವ ಸಹಕಾರ ನೀಡಲು ನಾವು ಬದ್ಧ. ನಮ್ಮ ಪ್ರಯತ್ನ ಮಾನವೀಯತೆಯ ಪರವಾಗಿ ಇರಲಿದೆ’ ಎಂದಿದ್ದಾರೆ. ಇದೇ ವೇಳೆ ರಷ್ಯಾಗೆ ಆಗಮಿಸಿದ್ದಕ್ಕೆ ಮೋದಿಗೆ ಪುಟಿನ್ ಧನ್ಯವಾದ ಹೇಳಿದ್ದಾರೆ. ಕಜಾನ್‌ನಲ್ಲಿ ಭಾರತದ ರಾಯಭಾರಿ ಕಚೇರಿ ತೆರೆಯುವ ಪ್ರಸ್ತಾವ ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಡಿ.12ರಂದು ದಿಲ್ಲಿಯಲ್ಲಿ ಉಭಯ ಸರಕಾರಗಳ ಸಹಕಾರ ವೃದ್ಧಿ ಸಭೆ ಯು 2 ರಾಷ್ಟ್ರಕ್ಕೆ ಸಹಕಾರಿ ಎಂದು ಪುತಿನ್ ಹೇಳಿದ್ದಾರೆ.
ಹರೇ ರಾಮ, ಹರೇ ಕೃಷ್ಣ ಘೋಷಣೆ
ಕಜಾನ್‌ಗೆ ಪ್ರಧಾನಿ ಆಗಮಿಸುತ್ತಿದ್ದಂತೆಯೇ ರಷ್ಯಾದಲ್ಲಿ ಭಾರತೀಯ ಸಮುದಾಯದ ಸದಸ್ಯರು ಹಾಗೂ ಇಸ್ಕಾನ್ ಅನುಯಾಯಿಗಳು “ಹರೇ ರಾಮ, ಹರೇ ಕೃಷ್ಣ ಎಂಬ ಘೋಷಣೆ ಗಳನ್ನು ಕೂಗುವ ಮೂಲಕ ಅವರನ್ನು ಸ್ವಾಗತಿಸಿದ್ದಾರೆ.
ಇಂದು ಚೀನ ಅಧ್ಯಕ್ಷ ,ಪ್ರಧಾನಿ ಮೋದಿ ಭೇಟಿ
ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ 16 ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಗಲ್ವಾನ್‌ನಲ್ಲಿ ಪರಿಸ್ಥಿತಿ ತಿಳಿಗೊಳಿಸಲು 2 ರಾಷ್ಟ್ರಗಳು ಒಪ್ಪಿಕೊಂಡು, ಜಂಟಿ ಗಸ್ತು ತಿರುಗಲು ಸಮ್ಮತಿ ಸೂಚಿಸಿರು ವಂತೆಯೇ ಈ ಸಭೆ ಮಹತ್ವ ಪಡೆದಿದೆ.
ಇರಾನ್ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಭೇಟಿ
ಪ್ರಧಾನಿ ಮೋದಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜತೆ ಕಜಾನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಇಸ್ರೇಲ್ ಜತೆಗಿನ ಜಗಳ ತಾರಕಕ್ಕೆ ಏರಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಭಾರತ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಉಭಯ ನಾಯಕರ ಈ ಸಭೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.