ಬಿಕ್ಕಟ್ಟಿಗೆ ನಿಂದನೆ ಕಾರಣ? : ಇನ್ನೂ ಮುಗಿಯದ ಬ್ರಿಟನ್ ಅರಮನೆ ಬಿಕ್ಕಟ್ಟು
Team Udayavani, Jan 14, 2020, 8:38 AM IST
ಲಂಡನ್: ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮರ್ಕೆಲ್‌ರನ್ನು ಪ್ರಿನ್ಸ್ ವಿಲಿಯಮ್ ಅವರು ಪದೇ ಪದೆ ಲೇವಡಿ ಮಾಡುತ್ತಿದ್ದರೇ? ಮೇಘನ್ ವಿರುದ್ಧ ಜನಾಂಗೀಯ ನಿಂದನೆ ಮಾಡಲಾಗುತ್ತಿತ್ತೇ?
ಯುಕೆ ಮಾಧ್ಯಮಗಳ ವರದಿಗಳು ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿವ. ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮರ್ಕೆಲ್ ಅವರು ಬ್ರಿಟನ್ ಅರಸೊತ್ತಿಗೆಯ ಸ್ಥಾನಮಾನ ತ್ಯಜಿಸುವ ನಿರ್ಧಾರ ಘೋಷಿಸಿದ ಹಿನ್ನೆಲೆಯಲ್ಲಿ ಸೋಮವಾರ ರಾಣಿ 2ನೇ ಎಲಿಜಬೆತ್ ಅವರು, ಹ್ಯಾರಿ ದಂಪತಿ ಹಾಗೂ ವಿಲಿಯಮ್ಸ್ ದಂಪತಿಯನ್ನು ಕರೆಸಿಕೊಂಡು ಮುಖಾಮುಖಿ ಮಾತುಕತೆ ನಡೆಸಿದ್ದಾರೆ. ಅವರ ನಡುವಿನ ಸಮಸ್ಯೆಗಳ ಬಗ್ಗೆ ಅರಿತು, ಮುಂದಿನ ಕ್ರಮದ ಬಗ್ಗೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈ ಸಭೆಯಲ್ಲಿ ಏನೇನಾಯಿತು ಎಂಬ ಮಾಹಿತಿ ಬಹಿರಂಗಗೊಂಡಿಲ್ಲ.
ಆದರೆ, ಬ್ರಿಟನ್‌ನ ಮಾಧ್ಯಮಗಳು ಮೇಘನ್ ವಿರುದ್ಧ ವಿಲಿಯಮ್ಸ್ ಮಾಡುತ್ತಿದ್ದ ಜನಾಂಗೀಯ ನಿಂದನೆಯೇ ಈ ಎಲ್ಲ ಗೊಂದಲಗಳಿಗೆ ಕಾರಣ ಎಂದು ವರದಿ ಮಾಡಿವೆ. ಆದರೆ, ಇದನ್ನು ಸೋಮವಾರ ಸಂಪೂರ್ಣವಾಗಿ ಅಲ್ಲಗಳೆದು ಜಂಟಿ ಪ್ರಕಟನೆ ಹೊರಡಿಸಿರುವ ಹ್ಯಾರಿ ಮತ್ತು ವಿಲಿಯಮ್, ಇಂಥ ವರದಿಗಳು ಅವಹೇಳನಕಾರಿ ಎಂದಿದ್ದಾರೆ. ಇನ್ನು, ಯುಕೆ ಗೃಹ ಸಚಿವೆ ಪ್ರೀತಿ ಪಟೇಲ್ ಕೂಡ ಈ ವರದಿ ತಳ್ಳಿಹಾಕಿದ್ದಾರೆ.
ನಮ್ಮಿಬ್ಬರ ದಾರಿ ಬೇರೆ: ಈ ನಡುವೆ, ‘ಬದುಕಿನುದ್ದಕ್ಕೂ ಸೋದರನ ಹೆಗಲ ಮೇಲೆ ಕೈಹಾಕಿಕೊಂಡು ನಡೆದವನು ನಾನು. ಆದರೆ ಈಗ ನನ್ನ ದಾರಿ ಬೇರೆ, ಅವನದ್ದೇ ಬೇರೆ’ ಎಂದು ವಿಲಿಯಂ ತಮ್ಮ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದರು ಎಂದೂ ಮಾಧ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
China; ಬೌದ್ಧ ಪಠ್ಯಗಳಿಂದ ರಾಮಾಯಣ ನೆಲೆ: ಸಂಶೋಧನೆ
MUST WATCH
ಹೊಸ ಸೇರ್ಪಡೆ
Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.