ಕೋವಿಡ್ 19 ಮಹಾಮಾರಿಗೆ ಸ್ಪೇನ್ ರಾಣಿ ಮಾರಿಯಾ ಟೆರೇಸಾ ಸಾವು
ಕೋವಿಡ್ ಗೆ ಸಂಬಂಧಿಸಿದಂತೆ ರಾಜಮನೆತನದ ಮೊದಲ ಸಾವು ಸಂಭವಿಸಿದಂತಾಗಿದೆ.
Team Udayavani, Mar 29, 2020, 11:25 AM IST
Princess Maria Teresa of Spain
ಮ್ಯಾಡ್ರಿಡ್: ಕೋವಿಡ್ 19 ಮಹಾಮಾರಿ ಸೋಂಕಿಗೆ ಸ್ಪೇನ್ ರಾಣಿ ಮಾರಿಯಾ ಟೆರೇಸಾ (86ವರ್ಷ) ಸಾವನ್ನಪ್ಪಿರುವುದಾಗಿ ಫೋಕ್ಸ್ ನ್ಯೂಸ್ ವರದಿ ಮಾಡಿದೆ. ಇದರೊಂದಿಗೆ ಕೋವಿಡ್ ಗೆ ಸಂಬಂಧಿಸಿದಂತೆ ರಾಜಮನೆತನದ ಮೊದಲ ಸಾವು ಸಂಭವಿಸಿದಂತಾಗಿದೆ.
ರಾಣಿ ಮಾರಿಯಾ ನಿಧನದ ಸುದ್ದಿಯನ್ನು ಸಹೋದರ ಪ್ರಿನ್ಸ್ ಸಿಕ್ಸ್ ಟೋ ಎನ್ರಿಕ್ ಡೇ ಬೋರ್ಬೊನ್ ಫೇಸ್ ಬುಕ್ ನಲ್ಲಿ ಖಚಿತಪಡಿಸಿದ್ದಾರೆ. ರಾಣಿ ಟೆರೇಸಾ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿರುವುದಾಗಿ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ರಾಣಿಯ ಅಂತ್ಯಸಂಸ್ಕಾರ ಶುಕ್ರವಾರ ಸ್ಪೇನ್ ರಾಜಧಾನಿ ಮ್ಯಾಡ್ರಿಡ್ ನಲ್ಲಿ ನೆರವೇರಿಸಲಾಗಿತ್ತು ಎಂದು ವರದಿ ತಿಳಿಸಿದೆ. ಸಹೋದರಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಹೋದರ ಡಾನ್ ಸಿಕ್ಟೋ ಎನ್ರಿಕ್ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
1933ರಲ್ಲಿ ಪ್ರಿನ್ಸೆಸ್ ಮಾರಿಯಾ ಟೆರೇಸಾ ಪ್ಯಾರೀಸ್ ನಲ್ಲಿ ಜನಿಸಿದ್ದರು. ಶಿಕ್ಷಣಾಭ್ಯಾಸವನ್ನು ಫ್ರಾನ್ಸ್ ನಲ್ಲಿ ಪೂರ್ಣಗೊಳಿಸಿದ್ದ ಮಾರಿಯಾ ನಂತರ ಪ್ಯಾರೀಸ್ ನ ಸೋರ್ ಬೋನ್ನೆ ಹಾಗೂ ಮ್ಯಾಡ್ರಿಡ್ ಯೂನಿರ್ವಸಿಟಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು ಎಂದು ಪೀಪಲ್ ದೈನಿಕ ವರದಿ ಮಾಡಿದೆ.
ವಿದೇಶಿ ಮಾಧ್ಯಮಗಳ ಪ್ರಕಾರ, ರಾಣಿ ಮಾರಿಯಾ ಟೆರೇಸಾ ಅವರು “ರೆಡ್ ಪ್ರಿನ್ಸೆಸ್” ಎಂದೇ ಖ್ಯಾತರಾಗಿದ್ದರು. ಯಾಕೆಂದರೆ ಯಾವುದನ್ನೂ ಮುಚ್ಚುಮರೆ ಇಲ್ಲದೇ ನೇರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ರಾಣಿ ಮಾರಿಯಾಗೆ ಮಾಧ್ಯಮಗಳು ಈ ಬಿರುದನ್ನು ನೀಡಿದ್ದವು.
ರಾಣಿ ಅವರು ಹಲವಾರು ಸಂಬಂಧಿಗಳನ್ನು, ಸಹೋದರನನ್ನು ಅಗಲಿರುವುದಾಗಿ ದ ಸನ್ ಪತ್ರಿಕೆ ವರದಿ ಮಾಡಿದೆ. ಮಾರಣಾಂತಿಕ ಕೋವಿಡ್ ವೈರಸ್ ಗೆ ಈಗಾಗಲೇ ಸ್ಪೇನ್ ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 3,400ಕ್ಕೆ ಏರಿದೆ. ಅಲ್ಲದೇ ಸ್ಪೇನ್ ನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.