ಭಾರತಕ್ಕೆ ಸಾಲಕ್ಕಿಂತ ಗಡಿಪಾರೇ ಆದ್ಯತೆ
Team Udayavani, Dec 16, 2018, 6:00 AM IST
ಲಂಡನ್: ಬ್ಯಾಂಕ್‌ಗಳಿಗೆ ಮರುಪಾವತಿ ಆಗಬೇಕಿರುವ 9 ಸಾವಿರ ಕೋಟಿ ರೂ. ವಸೂಲು ಮಾಡಿಕೊಳ್ಳುವ ಬದಲು ತಮ್ಮನ್ನು ಗಡಿಪಾರು ಮಾಡಿಸಿಕೊಳ್ಳುವುದಕ್ಕೇ ಭಾರತ ಹೆಚ್ಚಿನ ಆಸಕ್ತಿ ವಹಿಸಿದೆ ಎಂದು ಉದ್ಯಮಿ ವಿಜಯ ಮಲ್ಯ ಆರೋಪಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಇಮೇಲ್ ಮೂಲಕ ಸಂದರ್ಶನ ನೀಡಿದ ಅವರು, ಗಡಿಪಾರು ಬಗ್ಗೆ ವೆಸ್ಟ್‌ಮಿನ್‌ಸ್ಟರ್ ಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಕೋರ್ಟ್‌ನ ಹೊರಗೆ ಸಾಲ ಮರು ಪಾವತಿ ಬಗ್ಗೆ 2016ರಿಂದಲೇ ಪ್ರಸ್ತಾಪ ಮಾಡುತ್ತಿರುವುದಾಗಿ ಹೇಳಿದ ಮಲ್ಯ, ಅದನ್ನು ತಿರಸ್ಕರಿಸುವಂತೆ ಬ್ಯಾಂಕ್‌ಗೆ ಸೂಚನೆ ನೀಡಲಾಗಿದೆ ಎಂದು ಟೀಕಿಸಿದ್ದಾರೆ. ಇ.ಡಿ. ಮತ್ತು ಬ್ಯಾಂಕ್‌ಗಳು ನನ್ನ ಆಸ್ತಿ ವಶಪಡಿಸಿಕೊಳ್ಳುವುದಕ್ಕೆ ಹೋರಾಟ ನಡೆಸುತ್ತಿವೆ. ಹೀಗಾಗಿಯೇ ಕರ್ನಾಟಕ ಹೈಕೋರ್ಟ್‌ನ ಮುಂದೆ ನ್ಯಾಯಾಲಯದಿಂದ ಹೊರತಾಗಿ ಸಾಲ ಪಾವತಿ ಮಾಡುವ ಸೂತ್ರಗಳನ್ನು ಸಲ್ಲಿಸಿದ್ದೆ ಎಂದು ಹೇಳಿದ್ದಾರೆ.
ನಿಮ್ಮಿಂದ ಹಣ ವಾಪಸ್ ಪಡೆಯುವ ಪ್ರಕ್ರಿಯೆ ಶುರುವಾಗಿಲ್ಲವೇ ಎಂಬ ಪ್ರಶ್ನೆಗೆ, “ಭಾರತದಲ್ಲಿ ಈಗ ನನ್ನನ್ನು ಗಡಿಪಾರು ಮಾಡಿಸಿಕೊಳ್ಳುವುದೇ ಪ್ರಮುಖ ಆದ್ಯತೆಯಾಗಿದೆ. ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ಬರಬೇಕಾಗಿರುವುದನ್ನು ವಸೂಲು ಮಾಡುವುದರ ಬಗ್ಗೆ ಕ್ರಮಗಳು ಆರಂಭವಾಗಿಲ್ಲ’ ಎಂದು ಹೇಳಿದ್ದಾರೆ. ಗಡಿಪಾರು ವಿಚಾರವನ್ನು ಸಮರ್ಥವಾಗಿ ಎದುರಿಸುವುದಾಗಿಯೂ ಮಲ್ಯ ಹೇಳಿಕೊಂಡಿದ್ದಾರೆ.
1988ರಿಂದ ಅನಿವಾಸಿ ಭಾರತೀಯನಾಗಿರುವ ನಾನು 1992ರಿಂದ ಯು.ಕೆ.ಪೌರತ್ವ ಪಡೆದಿದ್ದೇನೆ. 2002ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆ ಯಾದಾಗ ಕರ್ನಾಟಕ ಹೈಕೋರ್ಟ್‌ಗೆ, ಭಾರತದ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು. ಎರಡೂ ಪ್ರಕರಣಗಳಲ್ಲಿ ನಾನು ಜಯ ಗಳಿಸಿದ್ದೆ ಎಂದಿದ್ದಾರೆ ಮಲ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.