ನ್ಯೂಯಾರ್ಕ್: ಶಾಲೆಗಳಿಗೆ ದೀಪಾವಳಿಗೆ ಸಾರ್ವಜನಿಕ ರಜೆ; ಪ್ರಿಯಾಂಕಾ ಚೋಪ್ರಾ ಭಾವುಕ
Team Udayavani, Oct 23, 2022, 3:13 PM IST
ನ್ಯೂಯಾರ್ಕ್ : ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಮತ್ತು ರಾಜ್ಯ ಅಸೆಂಬ್ಲಿ ಮಹಿಳಾ ಪ್ರತಿನಿಧಿ ಜೆನಿಫರ್ ರಾಜ್‌ಕುಮಾರ್ ಅವರು ‘ದೀಪಾವಳಿಗೆ 2023 ರಿಂದ ಶಾಲೆಗಳಿಗೆ ಸಾರ್ವಜನಿಕ ರಜೆ’ ಎಂದು ಘೋಷಿಸಿದಾಗ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಭಾವುಕರಾಗಿದ್ದಾರೆ.
ಕ್ವೀನ್ಸ್‌ನಲ್ಲಿ ಹದಿಹರೆಯದ ವರ್ಷಗಳನ್ನು ಕಳೆದ ಪ್ರಿಯಾಂಕಾ ಚೋಪ್ರಾ ಅವರು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದು, “ಇಷ್ಟು ವರ್ಷಗಳ ನಂತರ! ಕ್ವೀನ್ಸ್‌ನಲ್ಲಿ ವಾಸಿಸುತ್ತಿದ್ದ ನನ್ನ ಹದಿಹರೆಯದ ಸ್ವಯಂ ಸಂತೋಷ, ಪ್ರಾತಿನಿಧ್ಯದ ವಿಷಯಗಳು ನೆನೆದು ಕಣ್ಣೀರು ಬರುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಜೆನಿಫರ್ ರಾಜ್‌ಕುಮಾರ್ ಅವರು ವಿಡಿಯೋದಲ್ಲಿ, “ಇಂದು ನಮ್ಮ ಸಮಯ ಬಂದಿದೆ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ. ದೀಪಗಳ ಹಬ್ಬವಾದ ದೀಪಾವಳಿಯನ್ನು ಆಚರಿಸುವ ಹಿಂದೂ, ಬೌದ್ಧ, ಸಿಖ್ ಮತ್ತು ಜೈನ ಧರ್ಮಗಳ 200,000 ಕ್ಕೂ ಹೆಚ್ಚು ನ್ಯೂಯಾರ್ಕ್ ಪ್ರಜೆಗಳನ್ನು ಗುರುತಿಸುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.ಅಕ್ಟೋಬರ್ 24 ರಂದು ಆಚರಿಸಲಾಗುವ ಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ಈ ಘೋಷಣೆಯಾಗಿದೆ.
“ನಾವು ದೀಪಾವಳಿ ಎಂದರೇನು ಎಂಬುದರ ಕುರಿತು ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸಲಿದ್ದೇವೆ. ಬೆಳಕಿನ ಹಬ್ಬವನ್ನು ಆಚರಿಸುವ ಅರ್ಥ ಏನು ಎಂಬುದರ ಕುರಿತು ನಾವು ಮಾತನಾಡಲು ಪ್ರಾರಂಭಿಸುತ್ತೇವೆ” ಎಂದು ಎರಿಕ್ ಆಡಮ್ಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.