ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಜನರಿಂದ ಬೃಹತ್ ಪ್ರತಿಭಟನೆ
Team Udayavani, Dec 3, 2019, 5:39 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ರಾವಲ್ಪಿಂಡಿ: ಕಾಶ್ಮೀರ ಪಾಕಿಸ್ಥಾನಕ್ಕೇ ಸೇರಬೇಕು ಎಂದು ಪಾಕಿಸ್ಥಾನೀಯರು ಊರಿಡೀ ಹೇಳಿಕೊಂಡೇನೋ ತಿರುಗುತ್ತಿದ್ದಾರೆ. ಆದರೆ ಅವರು ಪಾಕ್ ಆಕ್ರಮಿತ ಪ್ರದೇಶದ ಕಾಶ್ಮೀರಿಗಳನ್ನು ಚೆನ್ನಾಗಿ ನೋಡುತ್ತಿದ್ದಾರಾ? ಇಲ್ಲವೇ ಇಲ್ಲ.
ಈ ಕಾರಣಕ್ಕೇ ಪಾಕ್ ಆಕ್ರಮಿತ ಕಾಶ್ಮೀರ ವಲಯದಲ್ಲಿರುವ ಮಂದಿ ಇದೀಗ ರಾವಲ್ಪಿಂಡಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದಾರೆ. ನಮ್ಮನ್ನು ತಾರತಮ್ಯ ಭಾವದಿಂದ ನೋಡಲಾಗುತ್ತಿದೆ. ಕಾಶ್ಮೀರಿಗಳಿಗೆ ಹೊಡೆದು, ಬಡಿದು ಮಾಡುತ್ತಿದ್ದಾರೆ. ವಾಹನಗಳು ಕಂಡರೆ ಅವುಗಳನ್ನು ಧ್ವಂಸಗೊಳಿಸಿ, ಬೆಂಕಿ ಇಡುತ್ತಿದ್ದಾರೆ ಎಂದು ದೂರಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಿಂದ ಬಹಳಷ್ಟು ಮಂದಿ ಕೆಲಸ ಹುಡುಕಿಕೊಂಡು, ವ್ಯಾಪಾರ, ಉದ್ದಿಮೆ ನಡೆಸುವುದಕ್ಕಾಗಿ ರಾವಲ್ಪಿಂಡಿ ಮತ್ತು ಪಾಕಿಸ್ಥಾನದ ಇತರ ಭಾಗಗಳಿಗೆ ಹೋಗುತ್ತಾರೆ. ಆದರೆ ಎಲ್ಲೂ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ಇಲ್ಲವಂತೆ. ಪಾಕ್ ಆಕ್ರಮಿತ ಕಾಶ್ಮೀರದ ವಾಹನ ನೋಡಿದರೆ ಹಾಳುಗೆಡವುತ್ತಾರೆ. ಮನುಷ್ಯರನ್ನು ಕಂಡರೆ ಸ್ಥಳೀಯ ಯುವಕರು ಅವರಿಗೆ ಇಲ್ಲದ ಕಿರುಕುಳ ನೀಡುತ್ತಾರೆ ಎಂದು ಹೇಳುತ್ತಾರೆ.
ರಾವಲ್ಪಿಂಡಿಯ ಪ್ರತಿಭಟನೆಯಲ್ಲಿ ಭಾಗವಹಿಸಿದ ನಾಸಿಮ್ ಅಹ್ಮದ್ ಎಂಬವರ ಪ್ರಕಾರ ಅವರು ಮುಜಫರಾಬಾದ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು ವಾಹನ ಕಂಡರೆ ಸುಮ್ಮನೆ ಇಲ್ಲಸಲ್ಲದ ತಕರಾರು ತೆಗೆದು ಹಾನಿ ಮಾಡುತ್ತಾರೆ. ವ್ಯಾಪಾರಕ್ಕೆಂದು, ಉದ್ಯೋಗ ಹುಡುಕಿಕೊಂಡು ಈ ಭಾಗಕ್ಕೆ ಬಂದವರು ಸದಾ ಭಯದಲ್ಲೇ ಬದುಕುವಂತಾಗಿದೆ ಎನ್ನುತ್ತಾರೆ.
ರಾವಲ್ಪಿಂಡಿ ಭಾಗದ ಗಿಲ್ಗಿಟ್, ಬಾಲ್ಟಿಸ್ಥಾನ್‌ನಿಂದ ಬಂದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಒಂದು ಬಾರಿ ಅವರು ಆಕ್ರಮಿತ ಕಾಶ್ಮೀರ ಬಿಟ್ಟು ಬಂದ ಬಳಿಕ ಅತ್ತ ಹೋಗಿಲ್ಲ. ಆಕ್ರಮಿತ ಕಾಶ್ಮೀರ ಇನ್ನೂ ಅಭಿವೃದ್ಧಿ ಹೊಂದದೇ ಇರುವುದರಿಂದ ಯಾವುದೇ ಉದ್ಯೋಗಾವಕಾಶಗಳು ಲಭ್ಯವಾಗುತ್ತಿಲ್ಲ.
ಈ ಮೊದಲು ಆಕ್ರಮಿತ ಕಾಶ್ಮಿರಿಗಳಿಗೆ ಪಾಕ್ ಸೇನೆ ಮತ್ತು ಇತರ ರಕ್ಷಣಾ ಪಡೆಗಳ ಕಾಟ ಜೋರಾಗಿತ್ತು. ಅವುಗಳು ನಿರಂತರ ಟಾರ್ಗೆಟ್ ಮಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಾಶ್ಮೀರಿ ರಾಜಕೀಯ ಕಾರ್ಯಕರ್ತರು, ಜನರು ಪಾಕ್‌ನ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯಲ್ಲಿ ಭಾಗಿಯಾದ ಸಾಮಾಜಿಕ ಕಾರ್ಯಕರ್ತ ಅಝರ್ ರಶೀದ್ ಅವರು ಈಗಿನ ಇಮ್ರಾನ್ ಖಾನ್ ಸರಕಾರ ಒಂದು ಕೊಲೆಗಾರ ಸರಕಾರ. ಅದು ನಮ್ಮೆಲ್ಲ ಹಕ್ಕುಗಳನ್ನು ಕಿತ್ತುಕೊಂಡಿದೆ ಎಂದು ಆರೋಪಿಸಿದ್ದಾರೆ. ಜತೆಗೆ ಹಲವು ಹತ್ಯೆಗಳನ್ನು ನೆನಪಿಸಿಕೊಂಡಿದ್ದು, ಇದಕ್ಕೆ ಸೇಡು ತೀರಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.