ಪುಲ್ವಾಮಾ ದಾಳಿ ಅತ್ಯಂತ ಘೋರ ಪರಿಸ್ಥಿತಿ: ಡೊನಾಲ್ಡ್ ಟ್ರಂಪ್ ಕಿಡಿ
Team Udayavani, Feb 20, 2019, 5:28 AM IST
ಹೊಸದಿಲ್ಲಿ : ಕನಿಷ್ಠ 40 ಭಾರತೀಯ ಯೋಧರನ್ನು ಬಲಿಪಡೆದಿರುವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಪುಲ್ವಾಮಾ ದಾಳಿಯನ್ನು ಅತ್ಯಂತ ಘೋರ ಪರಿಸ್ಥಿತಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
“ನಾನು ಆ ದಾಳಿಯ ಚಿತ್ರಿಕೆಗಳನ್ನು ಕಂಡಿದ್ದೇನೆ; ಆ ಬಗ್ಗೆ ಸಾಕಷ್ಟು ವರದಿಗಳನ್ನು ಪಡೆದಿದ್ದೇನೆ; ಸರಿಯಾದ ಹೊತ್ತಿನಲ್ಲಿ ನಾವು ಅದಕ್ಕೆ ಸರಿಯಾದ ಉತ್ತರವನ್ನು ನೀಡುತ್ತೇವೆ; ಹಾಗಿದ್ದರೂ ಭಾರತ ಮತ್ತು ಪಾಕಿಸ್ಥಾನ ಈ ಘೋರ ಸನ್ನಿವೇಶವನ್ನು ದಾಟಿ ಮುನ್ನಡೆಯಲು ಸಾಧ್ಯವಾದರೆ ಅದೊಂದು ನಿಜಕ್ಕೂ ದೊಡ್ಡ ಅದ್ಭುತ’ ಎಂದು ಟ್ರಂಪ್ ತಮ್ಮ ಪತ್ರಿಕಾ ಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದರಕ್ಕೆ ಉತ್ತರವಾಗಿ ಹೇಳಿದರು.
ಪುಲ್ವಾಮಾ ದಾಳಿಯನ್ನು ಅನುಸರಿಸಿ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು ಭಾರತಕ್ಕೆ ಸ್ವಯಂ ರಕ್ಷಣೆಯ ಹಕ್ಕು ಇದೆ ಎಂದು ಸಾರುವ ಮೂಲಕ ಪಾಕ್ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಳ್ಳುವ ಭಾರತದ ಒಂದು ಆಯ್ಕೆಯನ್ನು ಸಮರ್ಥಿಸಿದ್ದರು.
ಇದೇ ವೇಳೆ ಅಮೆರಿಕದ ವಿದೇಶ ಸಚಿವ ಮೈಕ್ ಪಾಂಪಿಯೋ, ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಮತ್ತು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಅವರು ಪತ್ಯೇಕ ಹೇಳಿಕೆಗಳನ್ನು ಹೊರಡಿಸಿ ಪಾಕಿಸ್ಥಾನ ಕೂಡಲೇ ಪುಲ್ವಾಮಾ ದಾಳಿ ನಡೆಸಿದ ಜೈಶ್ ಎ ಮೊಹಮ್ಮದ್ ಮತ್ತು ಅದರ ನಾಯಕರ ವಿರುದ್ಧ ಕಠಿನ ಕ್ರಮ ತೆಗೆದಕೊಳ್ಳಬೇಕು ಮತ್ತು ಭಯೋತ್ಪಾಕರ ಸುರಕ್ಷಿತ ತಾಣಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ
ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ
H-1B ನವೀಕರಣ ಇನ್ನು ಅಮೆರಿಕದಲ್ಲಿದ್ದೇ ಸಾಧ್ಯ: ದೂತವಾಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.