ದಾಳಿಗೆ “ಸರ್ವಾಧಿಕಾರಿ’ ಬೆಲೆ ತೆರಲೇಬೇಕು! ಅಮೆರಿಕ ಸಂಸತ್‌ನಲ್ಲಿ ಬೈಡೆನ್ ಭಾಷಣ
Team Udayavani, Mar 3, 2022, 7:45 AM IST
ವಾಷಿಂಗ್ಟನ್: “ವೀ ವೆರ್ ರೆಡಿ…’ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ 7ನೇ ದಿನವಾದ ಬುಧವಾರ ಅಮೆರಿಕದ ಸಂಸತ್ ಅನ್ನು ಉದ್ದೇಶಿಸಿ ಮಾಡಿದ ಚೊಚ್ಚಲ ಭಾಷಣದ ವೇಳೆ ಅಧ್ಯಕ್ಷ ಜೋ ಬೈಡೆನ್ ಹೇಳಿದ ಮಾತಿದು.
“ಪುಟಿನ್ ಸಾರಿರುವ ಯುದ್ಧವು ಅಪ್ರಚೋದಿತವಾಗಿದೆ. ರಾಜತಾಂತ್ರಿಕತೆಯ ಎಲ್ಲ ಪ್ರಯತ್ನಗಳನ್ನೂ ಅವರು ತಿರಸ್ಕರಿಸಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ನ್ಯಾಟೋ ಏನೂ ಮಾಡುವುದಿಲ್ಲ ಎಂದು ಪುಟಿನ್ ಭಾವಿಸಿದ್ದರು. ಆದರೆ, ಪುಟಿನ್ ಲೆಕ್ಕಾಚಾರ ತಪ್ಪಾಗಿದೆ. ನಾವು ರೆಡಿಯಾಗಿಯೇ ಇದ್ದೆವು’ ಎಂದು ಹೇಳುವ ಮೂಲಕ ಬೈಡೆನ್, ರಷ್ಯಾ ವಿರುದ್ಧ ಮತ್ತಷ್ಟು ಕ್ರಮ ಕೈಗೊಳ್ಳುವ ಸುಳಿವು ನೀಡಿದ್ದಾರೆ. ಅಲ್ಲದೇ, ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಕುಕೃತ್ಯಕ್ಕೆ ಬೆಲೆ ತೆರಲೇಬೇಕು ಎಂದಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವಿನ ಜಾಗತಿಕ ಯುದ್ಧದಲ್ಲಿ ಉಕ್ರೇನ್ ಈಗ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದೆ. ಈ ಸಮರದಲ್ಲಿ ಪ್ರಜಾಪ್ರಭುತ್ವಕ್ಕೇ ಗೆಲುವು. ಇತಿಹಾಸದ ಪುಟವನ್ನೊಮ್ಮೆ ತಿರುವಿಹಾಕಿ ನೋಡಿ, ಅದರಿಂದ ನಾವು ಅನೇಕ ಪಾಠಗಳನ್ನು ಕಲಿತಿದ್ದೇವೆ. ಯಾವಾಗ ಸರ್ವಾಧಿಕಾರಿಗಳು ತಮ್ಮ ಆಕ್ರಮಣಕ್ಕೆ ತಕ್ಕ ಬೆಲೆ ತೆರಲಿಲ್ಲವೋ, ಅಂಥ ಸಂದರ್ಭದಲ್ಲೆಲ್ಲ ಅವರು ಇನ್ನಷ್ಟು ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಾರೆ. ಅದರಿಂದಾದ ಪರಿಣಾಮವನ್ನು ಅಮೆರಿಕ ಮತ್ತು ಇಡೀ ಜಗತ್ತೇ ಎದುರಿಸಿದೆ. ಇದೇ ಕಾರಣಕ್ಕಾಗಿ 2ನೇ ವಿಶ್ವಯುದ್ಧದ ನಂತರ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸಲೆಂದೇ ನ್ಯಾಟೋವನ್ನು ರಚಿಸಲಾಯಿತು. ಈಗ ದುಸ್ಸಾಹಸವೆಸಗಿದ ರಷ್ಯಾದ ವಿರುದ್ಧ ಈಗಾಗಲೇ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಸದ್ಯ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಏನೇನು ಪ್ರತಿಕೂಲ ಪರಿಣಾಮಗಳು ಉಂಟಾಗಲಿದೆ ಎಂಬುದನ್ನು ರಷ್ಯಾ ಅಧ್ಯಕ್ಷ ಮರೆತಿದ್ದಾರೆ ಎಂದೂ ತಮ್ಮ 62 ನಿಮಿಷಗಳ ಭಾಷಣದಲ್ಲಿ ಬೈಡೆನ್ ಹೇಳಿದ್ದಾರೆ. ಇದೇ ವೇಳೆ, ರಷ್ಯಾ ಸೇನೆಯ ವಿರುದ್ಧ ಉಕ್ರೇನ್ ಸೇನೆ ಮತ್ತು ನಾಗರಿಕರು ಪ್ರದರ್ಶಿಸುತ್ತಿರುವ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಚ್ಚಾ ತೈಲ ಬಿಡುಗಡೆ:
ಯುದ್ಧದ ಪರಿಣಾಮವಾಗಿ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿ 30 ಶತಕೋಟಿ ಬ್ಯಾರೆಲ್ ಕಚ್ಚಾ ತೈಲವನ್ನು ವ್ಯೂಹಾತ್ಮಕ ಸಂಗ್ರಹದಿಂದ ಬಿಡುಗಡೆ ಮಾಡುವುದಾಗಿ ಬೈಡೆನ್ ಘೋಷಿಸಿದ್ದಾರೆ. ಜತೆಗೆ, ರಷ್ಯಾದ ವಿಮಾನಗಳಿಗೆ ಅಮೆರಿಕ ವಾಯುಪ್ರದೇಶದಲ್ಲಿ ಹಾರಾಟ ನಿಷೇಧದ ಘೋಷಣೆಯನ್ನೂ ಮಾಡಿದ್ದಾರೆ. ಆದರೆ, ಭಾರತಕ್ಕೆ ಆಗಮಿಸುವ ಕೆಲವು ವಿಮಾನಗಳು ರಷ್ಯಾದ ವಾಯು ಪ್ರದೇಶವನ್ನು ಬಳಸಿಕೊಂಡು ಸಾಗುತ್ತಿವೆ. ಹೊಸ ನಿರ್ಧಾರದಿಂದಾಗಿ, ಅಮೆರಿಕ ಮತ್ತು ಭಾರತ ನಡುವಿನ ವಿಮಾನ ಯಾನದ ಅವಧಿ ಇನ್ನೂ ಹೆಚ್ಚಾಗಲಿದೆ.
ಬೈಡೆನ್ ಎಡವಟ್ಟು:
ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರ ಭಾಷಣದ ವೇಳೆ ಇಬ್ಬರು ಪ್ರಭಾವಿ ಮಹಿಳೆಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಮತ್ತು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಬೈಡೆನ್ ಹಿಂದೆಯೇ ನಿಂತಿದ್ದರು. ತಮ್ಮ ಚೊಚ್ಚಲ ಭಾಷಣದ ವೇಳೆ ಬೈಡೆನ್ ಅವರು ಎಡವಟ್ಟು ಮಾಡಿಕೊಂಡ ಸನ್ನಿವೇಶವೂ ನಡೆಯಿತು. “ರಷ್ಯಾ ಆಕ್ರಮಣದ ವಿರುದ್ಧ ಎಲ್ಲ ಉಕ್ರೇನಿಯನ್ನರೂ ಒಗ್ಗಟ್ಟಾಗಿ ನಿಲ್ಲಬೇಕು’ ಎಂದು ಹೇಳುವಾಗ “ಉಕ್ರೇನಿಯನ್ನರು’ ಎಂಬ ಪದದ ಬದಲಿಗೆ “ಇರಾನಿಯನ್ನರು’ ಎಂದು ಬಳಸಿದರು. ಈ ವೇಳೆ, ಹಿಂದೆ ನಿಂತಿದ್ದ ಕಮಲಾ, “ಉಕ್ರೇನಿಯನ್ನರು’ ಎಂದು ಸರಿಪಡಿಸಲು ಯತ್ನಿಸಿದರಾದರೂ, ಅದು ಬೈಡೆನ್ ಕಿವಿಗೆ ಬೀಳಲೇ ಇಲ್ಲ.
“ಬೆಂಬಲ’ ಸೂಚಕ ಉಡುಗೆ!
ಅಧ್ಯಕ್ಷರ ಭಾಷಣದ ವೇಳೆ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರು ತಮ್ಮ ಉಡುಗೆ-ತೊಡುಗೆಯ ಮೂಲಕವೇ “ಉಕ್ರೇನ್‌ಗೆ ಬೆಂಬಲ’ ವ್ಯಕ್ತಪಡಿಸಿದ್ದು ಕಂಡುಬಂತು. ಉಕ್ರೇನ್‌ನ ಧ್ವಜದ ಬಣ್ಣವಾದ “ನೀಲಿ’ ಬಣ್ಣದ ತುಂಬುತೋಳಿನ ಉಡುಪನ್ನು ಜಿಲ್ ಧರಿಸಿದ್ದರು. ಅಷ್ಟೇ ಅಲ್ಲ, ಬಲ ತೋಳಿನ ಅಂಗೈಯ ಭಾಗದಲ್ಲಿ “ಸೂರ್ಯಕಾಂತಿ’ ಹೂವಿನ ಪುಟ್ಟದಾದ ಎಂಬ್ರಾಯಿಡರಿ ವರ್ಕ್ ಕೂಡ ಎದ್ದುಕಾಣುತ್ತಿತ್ತು. ವಿಶೇಷವೆಂದರೆ, ಸೂರ್ಯಕಾಂತಿಯು ಉಕ್ರೇನ್‌ನ ರಾಷ್ಟ್ರೀಯ ಪುಷ್ಪವಾಗಿದೆ. ಜಿಲ್ ಮಾತ್ರವಲ್ಲದೇ, ಹೌಸ್ ಮತ್ತು ಸೆನೇಟ್‌ನಲ್ಲಿ ಹಲವರು ನೀಲಿ ಮತ್ತು ಹಳದಿ ಬಣ್ಣದ ರಿಬ್ಬನ್‌ಗಳನ್ನು ಧರಿಸುವ ಮೂಲಕ “ಉಕ್ರೇನ್ ಜತೆಗೆ ನಾವಿದ್ದೇವೆ’ ಎಂಬುದನ್ನು ತೋರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.