“ಪರಮಾಣು ಬಾಂಬ್’ ಭೀತಿ ಹುಟ್ಟಿಸಿರುವ ರಷ್ಯಾದ ತಾಕತ್ತೇನು?
Team Udayavani, Mar 1, 2022, 8:00 AM IST
ಉಕ್ರೇನ್ ಮೇಲಿನ ತನ್ನ ದಾಳಿಯನ್ನು ತೀವ್ರಗೊಳಿಸಿದ ಬೆನ್ನಲ್ಲೇ ರಷ್ಯಾ, ತನ್ನ ಸೇನೆಯಲ್ಲಿನ ಪರಮಾಣು ಪಡೆಗೆ ಅಲರ್ಟ್ ಆಗಿರುವಂತೆ ಸೂಚನೆ ನೀಡಿದೆ. ಇದು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಒಟ್ಟು 6,257 ಅಣುಬಾಂಬ್‌ಗಳನ್ನು ರಷ್ಯಾ ಹೊಂದಿದೆ. ಇದರಲ್ಲಿ ಒಂದನ್ನು ಪ್ರಯೋಗಿಸಿದರೂ ಸಾಕು, ಒಂದಿಡೀ ಖಂಡವೇ ನಾಶ ಮಾಡಬಹುದು.
ಒಂದೊಂದು 550 ಕಿ.ಟನ್!
ರಷ್ಯಾದ ಒಂದೊಂದು ಪರಮಾಣು ಶಸ್ತ್ರಾಸ್ತ್ರ 550 ಕಿಲೋಟನ್ ಗಾತ್ರವಿದೆ. 1945ರಲ್ಲಿ ಜಪಾನ್‌ನ ಹಿರೋಶಿಮಾ ನಗರದ ಮೇಲೆ ಹಾಕಲಾಗಿದ್ದ ಅಣುಬಾಂಬ್ ಕೇವಲ 15 ಕಿಲೋಟನ್ ಇತ್ತು. ಆ ಒಂದು ಬಾಂಬ್ ಇಡೀ ನಗರವನ್ನೇ ಆಪೋಶನ ತೆಗೆದುಕೊಂಡಿತ್ತು. 550 ಕಿಲೋಟನ್ ಇರುವ ಅಣುಬಾಂಬ್ ಬಹುಶಃ ಒಂದು ಭೂಖಂಡವನ್ನೇ ನಾಶ ಮಾಡಬಹುದು.
ಪರಮಾಣು ಕೊಂಡೊಯ್ಯಲಿರುವ ಕ್ಷಿಪಣಿ
– “ಸರ್ಮಾಟ್ ಆರ್‌ಎಸ್-28′ (ಅಥವಾ) “ಸತಾನ್ 2′
ವಿಶೇಷತೆ:
- ಇದೊಂದು ಶಕ್ತಿಶಾಲಿ ಖಂಡಾಂತರ ಕ್ಷಿಪಣಿ
– ರಷ್ಯಾದ ಸಮರಕಲೆ ಹೊಂದಿದ್ದ ಬುಡಕಟ್ಟು ಜನಾಂಗದ ಹೆಸರು
– ಉದ್ದ: 116 ಅಡಿ
– ಅಗಲ: 208 ಟನ್
– ವ್ಯಾಸ: 10 ಅಡಿ
ಉಡಾವಣಾ ಇಂಜಿನ್
– ಅತ್ಯಂತ ಶಕ್ತಿಶಾಲಿಯಾದ, ರಷ್ಯಾ ನಿರ್ಮಿತ ಆರ್‌ಡಿ-274.
ಕ್ಷಿಪಣಿಯ ಭಾಗಗಳು
ಮೊದಲ ಹಂತ, ಎರಡನೇ ಹಂತ, ಮೂರನೇ ಹಂತ
ಪರಮಾಣು ಸಿಡಿತಲೆ
– ಇಂಥ ಒಂದು ಸಿಡಿತಲೆಯಲ್ಲಿ 16 ಪರಮಾಣು ಶಸ್ತ್ರಾಸ್ತ್ರಗಳನ್ನಿಟ್ಟು ಕಳಿಸಬಹುದು.
ಒಂದೊಂದೇ ಹೊರಕ್ಕೆ
– ರಷ್ಯಾದಲ್ಲಿರುವ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಒಂದೊಂದೇ ಬಟನ್ ಅಮುಕಿದರೆ ಸಿಡಿತಲೆಯಿಂದ ಒಂದೊಂದು ಪರಮಾಣು ಶಸ್ತ್ರ ಹೊರಹೊಮ್ಮುತ್ತದೆ.
ಅಂಕಿ-ಅಂಶ:
37 ಪಟ್ಟು
– ಹಿರೋಶಿಮಾ ಅಣುಬಾಂಬ್‌ಗಿಂತ ರಷ್ಯಾ ಅಣು ಬಾಂಬ್ ಮೂವತ್ತಾರು ಪಟ್ಟು ದೊಡ್ಡದು.
11,200 ಮೈಲು
ಇಷ್ಟು ದೂರದವರೆಗೆ ರಷ್ಯಾ ನಿರ್ಮಿತ ಅಣುಬಾಂಬ್ ಸಾಗಬಲ್ಲದು. ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ಯಾವ ಕಡೆಯಾದರೂ ಸಾಗಬಲ್ಲ ಕ್ಷಿಪಣಿ. ಯಾವುದೇ ಕ್ಷಿಪಣಿ ನಿಗ್ರಹ ವ್ಯವಸ್ಥೆಯಿಂದ ನಾಶಪಡಿಸುವುದು ಅಸಾಧ್ಯ.
2.50 ಲಕ್ಷ ಚದರ ಮೈಲು
– ರಷ್ಯಾದ ಒಂದು ಅಣುಬಾಂಬ್ ನಾಶಪಡಿಸಬಹುದಾದ ನೆಲ. ಇದು, ಫ್ರಾನ್ಸ್ ದೇಶದ ವಿಸ್ತೀರ್ಣಕ್ಕೆ ಸರಿಸಮ.
ರುದ್ರಗಾಯತ್ರೀ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್ …. ಇದು ರುದ್ರ ಗಾಯತ್ರೀ ಮಂತ್ರ. ಆ ಮಹಾಪುರುಷನನ್ನು (ಭಗವಂತ) ತಿಳಿದುಕೋ, ಮಹಾದೇವನನ್ನು ಧ್ಯಾನಿಸು, ಆ ರುದ್ರನು ನಮ್ಮನ್ನು ಪ್ರಚೋದಿಸಲಿ ಎನ್ನುವುದು ಇದರರ್ಥ.
ಸಮರಾಂಗಣದಲ್ಲಿ?
-ರಷ್ಯಾಗೆ ರಕ್ಷಣ ಸಾಮಗ್ರಿ ರಫ್ತಿಗೆ ನಿಷೇಧ ಹೇರಿದ ಉತ್ತರ ಕೊರಿಯಾ. ಸ್ವಿಫ್ಟ್ ನಿರ್ಬಂಧಕ್ಕೂ ಸೇರ್ಪಡೆ
– ರಷ್ಯಾದ ಸುದ್ದಿಸಂಸ್ಥೆ ಟಿಎಎಸ್‌ಎಸ್ ಹ್ಯಾಕ್. ಪುತಿನ್ ವಿರೋಧಿ ಸಂದೇಶ ಪ್ರಕಟ
-ಉಕ್ರೇನ್ ಮೇಲೆ ರಷ್ಯಾದ ಆಕ್ರಮಣಕ್ಕೆ ಸಾಥ್ ನೀಡಲು ಬೆಲಾರಸ್ ಸಿದ್ಧತೆ
– 5 ಲಕ್ಷ ಉಕ್ರೇನಿಯನ್ನರು ದೇಶ ತೊರೆದಿದ್ದಾರೆ ಎಂದ ವಿಶ್ವಸಂಸ್ಥೆ
– ಖಾರ್ಕಿವ್‌ನಲ್ಲಿ ರಷ್ಯಾದಿಂದ ರಾಕೆಟ್ ದಾಳಿ- 12ಕ್ಕೂ ಅಧಿಕ ಮಂದಿ ಸಾವು
– ಉಕ್ರೇನ್‌ಗೆ ರಕ್ಷಣಾತ್ಮಕ ಶಸ್ತ್ರಾಸ್ತ್ರಗಳನ್ನು ರವಾನಿಸುವುದಾಗಿ ಐರೋಪ್ಯ ಒಕ್ಕೂಟ ಘೋಷಣೆ
-ಉಕ್ರೇನ್‌ನ ಉತ್ತರದ ಚೆರ್ನಿಹಿವ್ ನಗರದ ಮೇಲೆ ಕ್ಷಿಪಣಿ ದಾಳಿ
-ಡಾಲರ್ ಎದುರು ರಷ್ಯಾ ಕರೆನ್ಸಿ ಪತನ. ಬಡ್ಡಿ ದರವನ್ನು ಶೇ.20ಕ್ಕೇರಿಸಿದ ರಷ್ಯಾ ಕೇಂದ್ರ ಬ್ಯಾಂಕ್
-ವಿಶೇಷ ಪ್ರಕ್ರಿಯೆ ಮೂಲಕ ಉಕ್ರೇನ್‌ಗೆ ತತ್‌ಕ್ಷಣವೇ ಐರೋಪ್ಯ ಒಕ್ಕೂಟದ ಸದಸ್ಯತ್ವ ನೀಡುವಂತೆ ಅಧ್ಯಕ್ಷ ಮನವಿ
– ಬೆಲಾರಸ್‌ನಲ್ಲಿ ರಷ್ಯಾ-ಉಕ್ರೇನ್ ಸಂಧಾನ ಮಾತುಕತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.