ರಾಣಿ ಅಂತ್ಯಕ್ರಿಯೆಗೆ ಯುನಿಕಾರ್ನ್ ಹೆಸರು; ಮುಂದಿನ ವಾರ ಲಂಡನ್‌ಗೆ ಪಾರ್ಥಿವ ಶರೀರ ಸ್ಥಳಾಂತರ

ಸ್ಕಾಟ್ಲೆಂಡ್‌ ಅರಮನೆಯಲ್ಲಿ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ನಿರ್ಧಾರ

Team Udayavani, Sep 10, 2022, 6:55 AM IST

ರಾಣಿ ಅಂತ್ಯಕ್ರಿಯೆಗೆ ಯುನಿಕಾರ್ನ್ ಹೆಸರು; ಮುಂದಿನ ವಾರ ಲಂಡನ್‌ಗೆ ಪಾರ್ಥಿವ ಶರೀರ ಸ್ಥಳಾಂತರ

ರಾಣಿ 2ನೇ ಎಲಿಜಬೆತ್‌ ನಿಧನಕ್ಕೆ ಸಂತಾಪ ಸೂಚಕ ಸಂದೇಶಗಳನ್ನು ಬ್ರಿಟನ್‌ ರಾಜ ಚಾರ್ಲ್ಸ್‌ 3 ವೀಕ್ಷಿಸಿದರು.

ಲಂಡನ್‌: ಎಪ್ಪತ್ತು ವರ್ಷಗಳ ದೀರ್ಘಾವಧಿಗೆ ಬ್ರಿಟನ್‌ ರಾಣಿಯಾಗಿದ್ದ 2ನೇ ಎಲಿಜಬೆತ್‌ ಅವರ ಅಂತ್ಯಸಂಸ್ಕಾರ ಸೆ. 19ರಂದು ನಡೆಯುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಅಂತ್ಯಸಂಸ್ಕಾರ ಪ್ರಕ್ರಿಯೆಗೆ “ಆಪರೇಷನ್‌ ಯುನಿಕಾರ್ನ್’ ಎಂಬ ಹೆಸರನ್ನು ಇರಿಸಲು ನಿರ್ಧರಿಸಲಾಗಿದೆ. ಬ್ರಿಟನ್‌ ರಾಜಮನೆತನ ಮತ್ತು ಯುನೈಟೆಡ್‌ ಕಿಂಗ್‌ಡಮ್‌ ಸರಕಾರ ಅಂತ್ಯಸಂಸ್ಕಾರ ನಡೆಸುವ ಬಗ್ಗೆ ಈಗಾಗಲೇ ಸಮಾ­ಲೋಚನೆ ನಡೆಸಿದ್ದಾರೆ. ಆರಂಭದಲ್ಲಿ ಅದರ ಸಂಕೇತ ಹೆಸರನ್ನು “ಲಂಡನ್‌ ಬ್ರಿಡ್ಜ್’ ಎಂದು ಹೆಸರಿಸಲು ನಿರ್ಧರಿಸಲಾಗಿತ್ತು.ಬ್ರಿಟನ್‌ ರಾಣಿ,2ನೇ ಎಲಿಜಬೆತ್‌

ಆದರೆ ಅವರು ಸ್ಕಾಟ್ಲೆಂಡ್‌ನ‌ಲ್ಲಿ ಅಸುನೀಗಿರುವ ಹಿನ್ನೆಲೆ ರಾಣಿಯ ಅಂತ್ಯಕ್ರಿಯೆಯ ಪ್ರಕ್ರಿಯೆಗೆ “ಆಪರೇಶನ್‌ ಯುನಿ ಕಾರ್ನ್’ ಹೆಸರು ನೀಡಲು ಸರಕಾರ ನಿರ್ಧರಿಸಿದೆ. ಸೆ.8ರಂದು ರಾಣಿ ನಿಧನ ಹೊಂದಿರುವ ದಿನವನ್ನು ಅತ್ಯಂತ ಪ್ರಮುಖ ದಿನ (ಡಿ ಡೇ) ಎಂದು ಪರಿಗಣಿಸಲಾಗಿದೆ. ಅಂತ್ಯಕ್ರಿಯೆ ಮುಕ್ತಾಯ ವಾಗುವ ವರೆಗೆ ಪ್ರತೀ ದಿನವನ್ನೂ ಡಿ 1, 2, ಈ ರೀತಿಯಲ್ಲಿ ಮುಕ್ತಾಯದ ವರೆಗೆ ಪರಿಗಣಿಸಲು ತೀರ್ಮಾನಿಸಲಾಗಿದೆ.

“ಯುನಿಕಾರ್ನ್’ ಎಂದರೆ ಸ್ಕಾಟ್ಲೆಂಡ್‌ನ‌ ರಾಷ್ಟ್ರೀಯ ಪ್ರಾಣಿ. ಹಣೆಯ ನಡುವೆ ಒಂದು ಕೊಂಬು ಇರುವ ಕುದುರೆಯನ್ನು ಹೋಲುವ ಕಾಲ್ಪನಿಕ ಪ್ರಾಣಿ ಇದಾಗಿದೆ. ಅದು ರಾಜಮನೆ­ತನಕ್ಕೂ ಸೇರಿದೆ ಎಂದು ನಂಬಲಾಗುತ್ತಿದೆ. ಲಂಡನ್‌ನಲ್ಲಿ ರಾಣಿ ನಿಧನ ಹೊಂದಿದ್ದರೆ “ಲಂಡನ್‌ ಬ್ರಿಡ್ಜ್ ಈಸ್‌ ಡೌನ್‌’ ಎಂಬ ಕೋಡ್‌ ನೇಮ್‌ ಸಹಿತ 2ನೇ ಎಲಿಜಬೆತ್‌ ಅವರ ಸಾವಿನ ಸುದ್ದಿಯನ್ನು ಪ್ರಕಟಿಸುವ ಬಗ್ಗೆ ಸಿದ್ಧತೆಯನ್ನೂ ನಡೆಸಲಾಗಿತ್ತು.

ಪಾರ್ಥಿವ ಶರೀರ ಲಂಡನ್‌ಗೆ: “ಆಪರೇಶನ್‌ ಯನಿಕಾರ್ನ್’ ಅನ್ವಯ ಮುಂದಿನ ವಾರ ರಾಣಿಯ ಪಾರ್ಥಿವ ಶರೀರವನ್ನು ಲಂಡನ್‌ಗೆ ತರುವ ವ್ಯವಸ್ಥೆ ಮಾಡಲಾಗುತ್ತದೆ. ಅದರ ಪ್ರಕಾರ ಸ್ಕಾಟ್ಲೆಂಡ್‌ನ‌ ಬಾಲ್ಮೋರ್‌ ಅರಮನೆಯಿಂದ ಎಡಿನ್‌ಬರ್ಗ್‌ನಲ್ಲಿ­ರುವ ರಾಣಿಯ ನಿವಾಸಕ್ಕೆ ತಂದು ಅಲ್ಪಾವಧಿಗೆ ಇರಿಸಲಾಗು­ತ್ತದೆ. ಲಂಡನ್‌ಗೆ ಪಾರ್ಥಿವ ಶರೀರ ತಲುಪಿದ ಬಳಿಕ ಪ್ರಧಾನಿ ಲಿಜ್‌ ಟ್ರಸ್‌ ಅದನ್ನು ಸ್ವೀಕರಿಸಲಿದ್ದಾರೆ ಮತ್ತು ಬಕಿಂಗ್‌ಹ್ಯಾಮ್‌ ಅರಮನೆಗೆ ಅದರ ಜತೆಗೆ ಆಗಮಿಸಲಿದ್ದಾರೆ. ಹತ್ತನೇ ದಿನ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ಇರುವ 6ನೇ ಕಿಂಗ್‌ ಜಾರ್ಜ್‌ ಮೆಮೋರಿಯಲ್‌ ಚಾಪೆಲ್‌ನಲ್ಲಿ ಅಂತ್ಯಸಂಸ್ಕಾರ ನಡೆಯ­ಲಿದೆ. ಇದೇ ವೇಳೆ ಯು.ಕೆ.ಯಾದ್ಯಂತ ಜನರು ಶೋಕತಪ್ತ­ರಾಗಿ­ದ್ದಾರೆ. ಬಕಿಂಗ್‌ಹ್ಯಾಮ್‌ ಅರಮನೆಯ ಮುಂಭಾಗದಲ್ಲಿ ಪುಷ್ಪಗುತ್ಛಗಳನ್ನು ಇರಿಸಿ ಗೌರವ ಅರ್ಪಿಸುತ್ತಿದ್ದಾರೆ.ಆಸ್ಟ್ರೇಲಿಯಾದಲ್ಲಿ 96 ಸುತ್ತು (ರಾಣಿಯ ವಯಸ್ಸಿನಷ್ಟೇ) ಗುಂಡು ಹಾರಿಸಿ, ನಿಧನವಾದ ರಾಣಿಗೆ ಗೌರವ ಸಲ್ಲಿಸಲಾಗಿದೆ.

50 ವರ್ಷಗಳ ಬಳಿಕ ಮೊದಲ ಸರಕಾರಿ ಗೌರವದ ಅಂತ್ಯಕ್ರಿಯೆ
1965ರಲ್ಲಿ ವಿನ್‌ಸ್ಟನ್‌ ಚರ್ಚಿಲ್‌ ಅವರಿಗೆ ಸರಕಾರಿ ಗೌರವದ ಅಂತ್ಯಸಂಸ್ಕಾರ ನಡೆದು ಐವತ್ತು ವರ್ಷಗಳು ಕಳೆದ ಬಳಿಕ 2ನೇ ಎಲಿಜಬೆತ್‌ ಅವರ ಅಂತ್ಯಸಂಸ್ಕಾರವನ್ನು ಸರಕಾರಿ ಗೌರವದೊಂದಿಗೆ ನಡೆಸಲಾಗು­ತ್ತಿದೆ. ಅದಕ್ಕೆ ಅನುಗುಣವಾಗಿ ಅರಮನೆಯಿಂದ ಬ್ರಿಟನ್‌ ಸಂಸತ್‌ನ ವೆಸ್ಟ್‌ಮಿನಿಸ್ಟರ್‌ ಹಾಲ್‌ಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತದೆ ಮತ್ತು ನಾಲ್ಕು ದಿನಗಳ ಕಾಲ ಗೌರವ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ರಾಣಿಯ ತಂದೆ ಆರನೇ ಜಾರ್ಜ್‌ ಅವರು 1952ರಲ್ಲಿ ನಿಧನರಾಗಿದ್ದ ಸಂದರ್ಭದಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿತ್ತು. ಅವರು ಇಂಥ ಗೌರವಕ್ಕೆ ಪಾತ್ರರಾದ ರಾಜಮನೆತನದ ಕೊನೆಯ ವ್ಯಕ್ತಿಯಾಗಿದ್ದರು.

ರಾಣಿ ಭೇಟಿ ಕ್ಷಮೆಗಿಂತ ದೊಡ್ಡದು
ರಾಣಿ ಎರಡನೇ ಎಲಿಜಬೆತ್‌ 1997ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ಜಲಿಯನ್‌ವಾಲಾಬಾಗ್‌ಗೆ ಭೇಟಿ ನೀಡಿದ್ದರು ಮತ್ತು 1919ರಲ್ಲಿ ನಡೆದಿದ್ದ ಗುಂಡು ಹಾರಾಟದಲ್ಲಿ ಅಸುನೀಗಿದ್ದವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿದ್ದರು. ಈ ಅಂಶ ರಾಣಿ ಕ್ಷಮೆ ಕೋರಿದ್ದಕ್ಕಿಂತ ಹೆಚ್ಚಿನ ಮಹತ್ವ ಪಡೆದಿದೆ ಎಂದು ಜಲಿಯನ್‌ವಾಲಾಬಾಗ್‌ ಸ್ಮಾರಕ ಟ್ರಸ್ಟ್‌ನ ಕಾರ್ಯದರ್ಶಿ ಸುಕುಮಾರ್‌ ಮುಖರ್ಜಿ ಹೇಳಿದ್ದಾರೆ. ಬ್ರಿಟನ್‌ನ ರಾಣಿ ಜಲಿಯನ್‌ವಾಲಾ ಬಾಗ್‌ಗೆ ಬಂದದ್ದು ಸಣ್ಣ ಸಂಗತಿ ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. 1997ರಲ್ಲಿ ರಾಣಿ ಭೇಟಿ ನೀಡಿದ ಬಳಿಕ ಘಟನೆಯ ಬಗ್ಗೆ ಕ್ಷಮೆ ಕೋರಬಹುದು ಎಂಬ ನಿರೀಕ್ಷೆ ಆ ಸಂದರ್ಭದಲ್ಲಿ ಉಂಟಾಗಿತ್ತು. ಆದರೆ ಪ್ರಿನ್ಸ್‌ ಚಾರ್ಲ್ಸ್‌ ಅವರು 1919ರ ಘಟನೆ ಬಗ್ಗೆ ನೀಡಿದ್ದರು ಎನ್ನಲಾಗಿದ್ದ ಹೇಳಿಕೆ ಭಾರತೀಯರಿಗೆ ಬೇಸರ ತಂದಿತ್ತು.

ಮುಂಬಯಿ ಡಬ್ಟಾವಾಲ ಕಂಬನಿ
ಮಹಾರಾಷ್ಟ್ರದ ರಾಜಧಾನಿ ಮುಂಬಯಿಯ ಪ್ರಸಿದ್ಧ ಡಬ್ಟಾವಾಲಗಳು ರಾಣಿ ಎಲಿಜಬೆತ್‌ ಸಾವಿಗೆ ಕಂಬನಿ ಸುರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನೂತನ್‌ ಮುಂಬಯಿ ಟಿಫಿನ್‌ ಬಾಕ್ಸ್‌ ವಿತರಕರ ಸಂಘದ ಪದಾಧಿಕಾರಿ ರಘುನಾಥ್‌ ಮೇದೆY, “ಡಬ್ಟಾವಾಲಗಳು ಯಾರಿಗೂ ಗೊತ್ತಿಲ್ಲದ್ದಂತೆ ಕೆಲಸ ಮಾಡುತ್ತಿದ್ದೆವು. ಆದರೆ ರಾಣಿ ಎಲಿಜಬೆತ್‌ ಅವರಿಂದ ಹಾಗೂ ಅವರ ಕುಟುಂಬದಿಂದಾಗಿ ಇಂದು ನಾವು ಎಲ್ಲರಿಗೂ ಪರಿಚಿತರಾಗಿದ್ದೇವೆ. 2005ರಲ್ಲಿ ರಾಜಕುಮಾರ ಚಾರ್ಲ್ಸ್‌ ಮತ್ತು ಕಮಿಲ್ಲಾ ಪಾರ್ಕರ್‌ ಅವರ ವಿವಾಹಕ್ಕೆ ನಾವು ಲಂಡನ್‌ಗೆ ತೆರಳಿದ್ದೆವು. ಅಲ್ಲಿ ರಾಣಿ ಅವರೊಂದಿಗೆ ಕುಳಿತು ಉಪಾಹಾರ ಸೇವಿಸಿದ್ದೆವು. ಅವರು ನಮಗೆ ಪ್ರೀತಿಯಿಂದ ಆತಿಥ್ಯ ನೀಡಿದ್ದರು. 2008ರ ನವೆಂಬರ್‌ನಲ್ಲಿ ನಮ್ಮ ನಗರದ ಮೇಲೆ ಉಗ್ರರು ದಾಳಿ ಮಾಡಿದ್ದರ ಬಗ್ಗೆ ನಮ್ಮೊಂದಿಗೆ ಚರ್ಚಿಸಿದ್ದರು’ ಎಂದು ಅವರು ಹೇಳಿದ್ದಾರೆ.

ಏನೇನು ಕಾರ್ಯಕ್ರಮ?
ಸೆ.10
ಆ್ಯಕ್ಸೆಷನ್‌ ಕೌನ್ಸಿಲ್‌ ಸಭೆ ಸೇರಿ ಅಧಿಕೃತವಾಗಿ ಚಾರ್ಲ್ಸ್ ರನ್ನು ರಾಜ ಎಂದು ಘೋಷಿಸಲಿದೆ.
ಪ್ರಧಾನಿ ಮತ್ತು ಸಂಪುಟದೊಂದಿಗೆ ಚಾರ್ಲ್ಸ್ ಅವರ ಸಭೆ
ರಾಜನಿಗೆ ನಿಷ್ಠರಾಗಿರುತ್ತೇವೆ ಎಂದು ಸಂಸತ್‌ನಲ್ಲಿ ಹಿರಿಯ ಸಂಸದರ ಪ್ರಮಾಣವಚನ

ಸೆ.11
ಎಡಿನ್‌ಬರ್ಗ್‌ನ ಹಾಲಿರುಡ್‌ಹೌಸ್‌ ಅರಮನೆಗೆ ರಾಣಿಯ ಪಾರ್ಥಿವ ಶರೀರ ರವಾನೆ

ಸೆ.12
ರಾಯಲ್‌ಮೈಲ್‌ನಿಂದ ಸೈಂಟ್‌ ಗೈಲ್ಸ್‌ ಕ್ಯಾಥಡ್ರಲ್‌ವರೆಗೆ ಮೆರವಣಿಗೆ
ರಾಜಮನೆತನದ ಸದಸ್ಯರಿಂದ ರಾಣಿಗಾಗಿ ಪ್ರಾರ್ಥನೆ
ರಾಣಿಯ ಪಾರ್ಥಿವ ಶರೀರದ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಸಾಧ್ಯತೆ

ಸೆ.13
ಲಂಡನ್‌ನ ಬಕಿಂಗ್‌ಹ್ಯಾಂ ಅರಮನೆಗೆ ಪಾರ್ಥಿವ ಶರೀರ ರವಾನೆ

ಸೆ.14
4 ದಿನಗಳ ಕಾಲ ವೆಸ್ಟ್‌ಮಿನ್‌ಸ್ಟರ್‌ ಹಾಲ್‌ನಲ್ಲೇ ರಾಣಿಯ ಪಾರ್ಥಿವ ಶರೀರ ಇರಲಿದೆ
ಕ್ಯಾಂಟರ್‌ಬರಿ ಆರ್ಚ್‌ಬಿಷಪ್‌ರಿಂದ ಧಾರ್ಮಿಕ ವಿಧಿವಿಧಾನ

ಸೆ.15
ಪಾರ್ಥಿವ ಶರೀರ ಅಲ್ಲೇ ಇರಲಿದೆ. ಅಂತ್ಯಸಂಸ್ಕಾರದ ಮೆರವಣಿಗೆಯ ರಿಹರ್ಸಲ್‌ ನಡೆಯಲಿದೆ.

ಸೆ.16
ವಿಶ್ವನಾಯಕರ ಆಗಮನ. ರಾಣಿಯ ಅಂತಿಮ ದರ್ಶನಕ್ಕೆ ಅವಕಾಶ

ಸೆ.19
ಟಿವಿ ಮೂಲಕ ಅಂತಿಮ ವಿಧಿವಿಧಾನಗಳ ನೇರಪ್ರಸಾರ. ದೇಶಾದ್ಯಂತ 2 ನಿಮಿಷ ಮೌನಾಚರಣೆ
ಸೈಂಟ್‌ ಜಾರ್ಜ್‌ ಚಾಪೆಲ್‌ಗೆ ರಾಣಿಯ ಪಾರ್ಥಿವ ಶರೀರ ಮೆರವಣಿಗೆ
ಸಂಜೆಯ ಬಳಿಕ ರಾಜಮನೆತನದ ಹಿರಿಯರಿಂದ ಅಂತಿಮ ಪ್ರಾರ್ಥನೆ
ಕಿಂಗ್‌ ಜಾರ್ಜ್‌ 6 ಮೆಮೋರಿಯಲ್‌ ಚಾಪೆಲ್‌ನಲ್ಲಿ ಅಂತ್ಯಸಂಸ್ಕಾರ

ಪಾಸ್‌ಪೋರ್ಟ್‌, ಲೈಸನ್ಸ್‌ ಬೇಡ…
– ರಾಜ ಚಾರ್ಲ್ಸ್‌ ಅವರಿಗೆ ಯಾವುದೇ ವಾಹನ ಚಾಲನೆಗೆ ಪರವಾನಿಗೆ ಬೇಕಿಲ್ಲ. ಹಾಗೆಯೇ ಯಾವುದೇ ರಾಷ್ಟ್ರಕ್ಕೆ ತೆರಳಬೇಕೆಂದಾದರೆ ಪರವಾನಿಗೆಯೂ ಬೇಕಿಲ್ಲ. ಬ್ರಿಟನ್‌ನಲ್ಲಿ ಈ ಸೌಲಭ್ಯವಿರುವ ಏಕೈಕ ವ್ಯಕ್ತಿ ಅವರಾಗಲಿದ್ದಾರೆ.
– ರಾಣಿ 2ನೇ ಎಲಿಜಬೆತ್‌ ಅವರ ನಿಜವಾದ ಜನ್ಮದಿನ ಎ. 21. ಆ ದಿನ ಅವರು ವೈಯಕ್ತಿಕ­ವಾಗಿ ಜನ್ಮದಿನ ಆಚರಿಸಿ­ಕೊಳ್ಳುತ್ತಿದ್ದರು. ಅದರ ಜತೆಯಲ್ಲಿ ಜೂನ್‌ ತಿಂಗಳ 2ನೇ ಮಂಗಳ­ವಾರ­ದಂದು ಸಾರ್ವಜನಿಕವಾಗಿ ಅವರ ಜನ್ಮದಿನಾ­ಚರಣೆ ನಡೆಯುತ್ತಿತ್ತು.
ಚಾರ್ಲ್ಸ್‌ ಅವರ ಜನ್ಮದಿನ ಚಳಿಗಾಲ­ವಾದ ನ. 14ರಂದು ಇದೆ. ಹಾಗಾಗಿ ಅವರು ಬೇಸಗೆಯ ದಿನದಲ್ಲಿ ಮತ್ತೂಮ್ಮೆ ಸಾರ್ವಜನಿಕವಾಗಿ ಜನ್ಮದಿನ ಆಚರಿಸಿಕೊಳ್ಳುವ ಸಾಧ್ಯತೆಯಿದೆ.
-ರಾಜರಾಗುವ ಚಾರ್ಲ್ಸ್‌ ಅವರು ಬ್ರಿಟನ್‌ ಅಥವಾ ಬೇರಾ­ವುದೇ ರಾಷ್ಟ್ರದ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಹಾಗೂ ಮತ ಹಾಕುವಂತಿಲ್ಲ. ಅವರ ಎಲ್ಲ ಪಕ್ಷಗಳನ್ನು ಸಮಾನವಾಗಿ ಪರಿಗಣಿಸಬೇಕು. ಸಂಸತ್ತಿನ ಅಧಿವೇ­ಶನದ ಉದ್ಘಾಟನೆಯಲ್ಲಿ, ಪ್ರಧಾನಿ­ಯವರೊಂದಿಗೆ ಸಾಪ್ತಾಹಿಕ ಸಭೆಯಲ್ಲಿ ಭಾಗವಹಿ­ಸಲು ಅವರಿಗೆ ಆಮಂತ್ರಣವಿರುತ್ತದೆ.
– ಬ್ರಿಟನ್‌ನ ಜಲ ಪ್ರದೇಶದಲ್ಲಿ­ರುವ ಕೊಕ್ಕರೆ, ಡಾಲ್ಫಿನ್‌, ವೇಲ್‌ಗ‌ಳು ರಾಜಮನೆತನದ ಆಸ್ತಿಯಾಗಿರುತ್ತದೆ.
– ಪ್ರತೀ 10 ವರ್ಷಗಳಿಗೊಮ್ಮೆ ರಾಜ/ರಾಣಿಗೆಂದು ಪ್ರಶಸ್ತಿ ಪುರಸ್ಕೃತ ಕವಿಯನ್ನು ನೇಮಿಸಲಾಗುತ್ತದೆ. ಅವರು ರಾಜಮನೆ ತನದ ವಿಶೇಷ ದಿನಗಳ ಕುರಿತು ಕವಿತೆಗಳನ್ನು ರಚಿಸುತ್ತಾರೆ.

ಹ್ಯಾರಿ- ಮೇಘನ್‌ ಮಕ್ಕಳಿಗೂ ಪಟ್ಟ
ರಾಜಮನೆತನದ ಗೌರವ ನಮಗೆ ಬೇಡ ಎಂದು ಹೊರಬಂದಿದ್ದ ಮಾಜಿ ರಾಜಕುಮಾರ ಹ್ಯಾರಿ ಹಾಗೂ ಅವರ ಪತ್ನಿ ಮೇಘನ್‌ ಅವರ ಮಕ್ಕಳಾಗಿರುವ ಆರ್ಚಿ ಮೌಂಟ್‌ಬ್ಯಾಟನ್‌ ವಿಂಡ್ಸರ್‌ ಹಾಗೂ ಲಿಲಿಬೆಟ್‌ ಡಿಯಾನಾಗೆ ರಾಜಕುಮಾರ-ರಾಜಕುಮಾರಿ ಪಟ್ಟ ಈಗ ಸಿಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಾಜ 5ನೇ ಜಾರ್ಜ್‌ ಅವರು 1917 ರಲ್ಲಿ ರೂಪಿಸಿದ ನಿಯಮದ ಪ್ರಕಾರ ರಾಜ/ರಾಣಿಯ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ರಾಜಕುಮಾರ ಮತ್ತು ರಾಜಕುಮಾರಿ ಪಟ್ಟ ಸಿಗುತ್ತದೆ.

ಮೂರು ಬಾರಿ ಭಾರತಕ್ಕೆ ಭೇಟಿ
ರಾಣಿ 2ನೇ ಎಲಿಜಬೆತ್‌ ಭಾರತಕ್ಕೆ 3 ಬಾರಿ ಭೇಟಿ ನೀಡಿದ್ದರು. 1961ರಲ್ಲಿ ಮೊದಲ ಬಾರಿ ಹೊಸದಿಲ್ಲಿಗೆ ಆಗಮಿಸಿದ್ದಾಗ ರಾಮಲೀಲಾ ಮೈದಾನದಲ್ಲಿ ಅದ್ದೂರಿ ಸ್ವಾಗತ ನೀಡಲಾಗಿತ್ತು. ದೇಶದ ಮೊದಲ ಪ್ರಧಾನಿ­ ಜವಾಹರ್‌ಲಾಲ್‌ ನೆಹರೂ ಅವರ ಸಮ್ಮುಖದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. 2ನೇ ಎಲಿಜಬೆತ್‌ ಅವರ ಅಜ್ಜ 5ನೇ ಕಿಂಗ್‌ ಜಾರ್ಜ್‌ ಮತ್ತು ರಾಣಿ ಮೇರಿ 1911ರಲ್ಲಿ ದೇಶಕ್ಕೆ ಭೇಟಿ ನೀಡಿದ್ದರು. ಸರಿಯಾಗಿ 50 ವರ್ಷಗಳ ಬಳಿಕ ರಾಣಿ 2ನೇ ಎಲಿಜಬೆತ್‌ 1961ರಲ್ಲಿ ದೇಶಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮಾ ಗಾಂಧಿಯ­ವರಿಗೆ ಗೌರವ ಸಲ್ಲಿಸಿದ್ದರು.

ಹೊಸದಿಲ್ಲಿ ಏಮ್ಸ್‌ ಉದ್ಘಾಟನೆ: ದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು 1961ರ ಜ. 27ರಂದು ಅವರು ಉದ್ಘಾಟಿಸಿದ್ದರು. ಇದೇ ಅವಧಿಯಲ್ಲಿ ಅವರು, ಆಗ್ರಾ, ಮುಂಬಯಿ, ವಾರಾಣಸಿ, ಉದಯಪುರ, ಜೈಪುರ, ಬೆಂಗಳೂರು, ಚೆನ್ನೈ, ಕೋಲ್ಕತಾಗೆ ಭೇಟಿ ನೀಡಿದ್ದರು.

1983ರಲ್ಲಿ ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್‌ ಸಿಂಗ್‌ ಆಹ್ವಾನದ ಮೇರೆಗೆ ರಾಣಿ, ಅವರ ಪತಿ ಫಿಲಿಪ್‌ ಭಾರತ ಪ್ರವಾಸ ಕೈಗೊಂಡಿದ್ದರು. ಆ ಅವಧಿಯಲ್ಲಿ ಬ್ರಿಟನ್‌ ರಾಜದಂಪತಿ ರಾಷ್ಟ್ರಪತಿ ಭವನದಲ್ಲಿ ವಾಸ್ತವ್ಯ ಹೂಡಿದ್ದರು.
1997ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಐವತ್ತು ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಜಲಿಯನ್‌ವಾಲಾ ಬಾಗ್‌ಗೆ ಭೇಟಿ ನೀಡಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Indian-origin Anita in Canada’s Prime Ministerial race

Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?

Pakistan; 6 brothers marry 6 sisters to save expenses!

Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

Earthquakes: ಎವರೆಸ್ಟ್‌ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.