ವಿಕಿರಣಶೀಲ ಜಲ: ಸಮುದ್ರಕ್ಕೆ ಹರಿಸುವುದೇ ಜಪಾನ್?
Team Udayavani, Nov 19, 2020, 5:15 AM IST
ಟೋಕಿಯೋ: ಈ ಹಿಂದೆ ಅವಘಡಕ್ಕೆ ತುತ್ತಾಗಿದ್ದ ತನ್ನ ಫುಕುಶಿಮಾ ಪರಮಾಣು ಸ್ಥಾವರದಲ್ಲಿನ ಬಳಸಿದ ನೀರನ್ನು ಜಪಾನ್ ಸರಕಾರ ಸಮುದ್ರಕ್ಕೆ ಹರಿಯಬಿಡಲು ಸಿದ್ಧವಾಗಿದೆ ಎನ್ನಲಾಗುತ್ತಿದೆ. ಜಪಾನ್ ಹೀಗೇನಾದರೂ ಮಾಡಿಬಿಟ್ಟರೆ ಸಾಗರದ ಜಲಜೀವಗಳಿಗೆ ಹಾಗೂ ಪ್ರಪಂಚದ ವಿವಿಧ ಕರಾವಳಿ ಭಾಗಗಳಲ್ಲಿ ವಾಸಿಸುವ ಜನರಿಗೆ ಮಾರಕವಾಗಲಿದೆ ಎಂದು ಭಾರತೀಯ ಹಾಗೂ ಜಾಗತಿಕ ಪರಿಣತರು ಎಚ್ಚರಿಸಲಾರಂಭಿಸಿದ್ದಾರೆ.
ಜಪಾನ್ ಈ ನಿರ್ಧಾರಕ್ಕೆ ಬಂದರೆ, ಈ ಪ್ರಮಾಣದಲ್ಲಿ ದೇಶವೊಂದು ವಿಕಿರಣಶೀಲ ಜಲವನ್ನು ಸಮುದ್ರಕ್ಕೆ ಹರಿಸಲಿರುವುದು ಇದೇ ಮೊದಲಾಗುತ್ತದೆ. ಇದು ಜಾಗತಿಕವಾಗಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ಜಪಾನ್ ಈ ಕಲುಷಿತ ಜಲವನ್ನು ನಿಷ್ಕ್ರಿಯಗೊಳಿಸಲು ಅನ್ಯಮಾರ್ಗ ಹುಡುಕಬೇಕು ಎಂದು ಡಿಆರ್‌ಡಿಒದ ಆರೋಗ್ಯ ವಿಜ್ಞಾನ ವಿಭಾಗದ ಮಹಾನಿರ್ದೇಶಕ ಎ.ಕೆ.ಸಿಂಗ್ ಹೇಳಿದ್ದಾರೆ.
ಫುಕುಶಿಮಾ ಸ್ಥಾವರಗಳಲ್ಲಿನ ನೀರಿನಲ್ಲಿ ಸೆಸಿಯಂ, ಟ್ರೈಟಿಯಂ, ಕೋಬಾಲ್ಟ್ ಮತ್ತು ಕಾರ್ಬನ್-12ನಂಥ ವಿಕಿರಣಶೀಲ ಅಂಶಗಳಿದ್ದು ಅವು ನಾಶವಾಗಲು 12-30 ವರ್ಷ ಗಳು ಹಿಡಿಯುತ್ತವೆ. ಅಲ್ಲಿಯವರೆಗೂ ಅವು ತಮಗೆದುರಾಗುವ ಜೀವರಾಶಿಯನ್ನೆಲ್ಲ ನಾಶಮಾಡುತ್ತಾ ಹೋಗುತ್ತವೆ.
ಪರಿಣಾಮವಾಗಿ ಜಾಗತಿಕ ಮೀನುಗಾರಿಕೆ ಉದ್ಯಮಕ್ಕೆ ಬಹುದೊಡ್ಡ ಪೆಟ್ಟು ಬೀಳಲಿದ್ದು, ಈ ನೀರಿನ ಸಂಪರ್ಕಕ್ಕೆ ಬರುವವರಿಗೆ ಕ್ಯಾನ್ಸರ್‌ನಂಥ ರೋಗಗಳೂ ಎದುರಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.