ಮಾನವಸಹಿತ ಚಂದ್ರಯಾನಕ್ಕೆ ಭಾರತ ಮೂಲದ ಗಗನ ಯಾತ್ರಿ
Team Udayavani, Dec 12, 2020, 12:51 AM IST
ವಾಷಿಂಗ್ಟನ್: ನಾಸಾದ ಮಹತ್ವಾಕಾಂಕ್ಷಿ “ಮಾನವಸಹಿತ ಚಂದ್ರಯಾನ’ಕ್ಕೆ 18 ಮಂದಿ ಗಗನಯಾತ್ರಿಗಳು ಆಯ್ಕೆಯಾಗಿದ್ದು, ಅಮೆರಿಕದ ವಾಯುಪಡೆಯ ಕರ್ನಲ್, ಭಾರತೀಯ-ಅಮೆರಿಕನ್ ರಾಜಾ ಜಾನ್ ವುರ್ಪುತೂರ್ ಚರಿ ಕೂಡ ಚಂದ್ರಯಾನದ ಸುವರ್ಣಾವಕಾಶವನ್ನು ಪಡೆದಿದ್ದಾರೆ. ವಿಶೇಷವೆಂದರೆ, 18 ಗಗನಯಾತ್ರಿಗಳ ಪೈಕಿ ಅರ್ಧದಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಚಂದ್ರನ ಅಧ್ಯಯನ ಯೋಜನೆಯನ್ವಯ ಮೊದಲ ಮಹಿಳೆ 2024ರಲ್ಲಿ ಚಂದ್ರನನ್ನು ಸ್ಪರ್ಶಿಸಲಿದ್ದಾರೆ. ಇವರೊಂದಿಗೆ ಒಬ್ಬ ಪುರುಷ ಗಗನಯಾತ್ರಿಯೂ ಇರಲಿದ್ದಾರೆ. ಈ ದಶಕದ ಕೊನೆಯ ವೇಳೆಗೆ ಚಂದ್ರನಲ್ಲಿ ಸುಸ್ಥಿರ ಮಾನವ ಅಸ್ತಿತ್ವ ಸ್ಥಾಪನೆಯಾಗಲಿದೆ ಎಂದು ನಾಸಾ ಹೇಳಿದೆ. “ಆರ್ಟೆಮಿಸ್ ಮೂನ್ ಲ್ಯಾಂಡಿಂಗ್ ಪ್ರೋಗ್ರಾಂ’ಗಾಗಿ 18 ಮಂದಿಯೂ ತರಬೇತಿ ಪಡೆಯಲಿದ್ದಾರೆ.
ಅಮೆರಿಕದ ವಾಯುಪಡೆ ಅಕಾಡೆಮಿ, ಮಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುಎಸ್ ನೇವಲ್ ಟೆಸ್ಟ್ ಪೈಲಟ್ ಸ್ಕೂಲ್‌ನ ಪದವೀಧರರಾದ 43 ವರ್ಷದ ಚರಿ ಅವರು ಚಂದ್ರಯಾನಕ್ಕೆ ಆಯ್ಕೆಯಾದ ಏಕೈಕ ಭಾರತೀಯ ಎನಿಸಿದ್ದಾರೆ. ಆಗಸ್ಟ್ 2017ರಿಂದಲೂ ಅವರು ಗಗನಯಾತ್ರಿ ಅಭ್ಯರ್ಥಿ ತರಬೇತಿಯನ್ನು ಪಡೆದಿದ್ದು, ಈಗ ಚಂದ್ರಯಾನಕ್ಕೆ ಅರ್ಹತೆ ಪಡೆದಿದ್ದಾರೆ. ಈಗ ಆಯ್ಕೆಯಾಗಿರುವ 18 ಮಂದಿಯ ಪೈಕಿ ಬಹುತೇಕ ಮಂದಿ 30-40ರ ವಯೋಮಾನದವರು ಎಂದು ನಾಸಾ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ