ಲಂಕಾ: ಗುಂಡೆಸೆತಕ್ಕೆ 1 ಬಲಿ; ಸಚಿವ ಅರ್ಜುನ ರಣತುಂಗ ಅರೆಸ್ಟ್
Team Udayavani, Oct 29, 2018, 5:41 PM IST
ಕೊಲಂಬೋ : ಶ್ರೀಲಂಕೆಯಲ್ಲಿ ಪ್ರಕೃತ ಸಾಗುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ನಡೆದಿರುವ ಮೊದಲ ಹಿಂಸಾತ್ಮಕ ಘಟನೆಯಲ್ಲಿ ವ್ಯಕ್ತಿಯೊಬ್ಬ ಗುಂಡಿಗೆ ಬಲಿಯಾಗಿರುವುದನ್ನು ಅನುಸರಿಸಿ ಲಂಕೆಯ ಪೆಟ್ರೋಲಿಯಂ ಸಚಿವ ಮತ್ತು ಕ್ರಿಕೆಟ್ ದಂತಕಥೆ, ಅರ್ಜುನ ರಣತುಂಗ ಅವರನ್ನು ಬಂಧಿಸಲಾಗಿದೆ.
ಲಂಕೆಯ ಪ್ರಧಾನಿ ರಣಿಲ್ ವಿಕ್ರಮಸಿಂಘ ಅವರಿಗೆ ನಿಷ್ಠರಾಗಿರುವ 54ರ ಹರೆಯದ ಸಚಿವ ರಣತುಂಗ ಅವರ ಅಂಗರಕ್ಷಕರು ಹೊಸ ಪ್ರಧಾನಿ ಮಹಿಂದ ರಾಜಪಕ್ಷ ಅವರ ಬೆಂಬಲಿಗರ ಮೇಲೆ ನಿನ್ನೆ ಭಾನುವಾರ ನಡೆಸಿದ್ದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದ.
ಈ ಗುಂಡಿನ ದಾಳಿಯಲ್ಲಿ ಇನ್ನಿಬ್ಬರು ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. ಘಟನೆಗೆ ಸಂಬಂಧಿಸಿ ಉಂಟಾದ ಉದ್ರಿಕ್ತ ಸನ್ನಿವೇಶದಲ್ಲಿ ದೇಮಾತಗೋಡ ದಲ್ಲಿನ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ (ಸಿಪಿಸಿ) ಇದರ ಆವರಣದಲ್ಲಿ ಪೊಲೀಸರು ಒಬ್ಬ ಭದ್ರತಾ ಸಿಬಂದಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಅರ್ಜುನ ರಣತುಂಗ ಅವರನ್ನು ಇಂದು ಸೋಮವಾರ ಬಂಧಿಸಲಾಗಿದೆ. ರಣತುಂಗ ಅವರ ಸಚಿವಾಲಯದ ಆವರಣದೊಳಗೆ ಅವರ ಭದ್ರತಾ ಸಿಬಂದಿ ಪೆಟ್ರೋಲಿಯಂ ಕಾರ್ಮಿಕನೋರ್ವನನ್ನು ಗುಂಡಿಕ್ಕಿ ಕೊಂದ ಕಾರಣ ರಣತುಂಗ ಅವರ ಬಂಧನ ನಡೆದಿದೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Major security breach: ಬ್ರಿಟನ್‌ನ ಅರಮನೆ ಆವರಣಕ್ಕೇ ನುಗ್ಗಿ ವಾಹನ ಕದ್ದೊಯ್ದ ಕಳ್ಳರು!
G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್ ಚರ್ಚೆ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.