7 ಕೆಜಿ ತೂಕದ ಅಪರೂಪದ ಉಲ್ಕೆಯ ಆವಿಷ್ಕಾರ
Team Udayavani, Jan 19, 2023, 7:00 PM IST
ವಾಷಿಂಗ್ಟನ್: ಅಮೆರಿಕ ಮತ್ತು ಬೆಲ್ಜಿಯಂನ ವಿಜ್ಞಾನಿಗಳು ಅಂಟಾರ್ಕ್ಟಿಕಾದಲ್ಲಿ 7.6 ಕೆಜಿ ತೂಕದ ಅತ್ಯಂತ ಅಪರೂಪದ ಉಲ್ಕೆ ಸೇರಿದಂತೆ ಒಟ್ಟು 5 ಹೊಸ ಉಲ್ಕಾ ಶಿಲೆಗಳನ್ನು ಪತ್ತೆಹಚ್ಚಿದ್ದಾರೆ.
ಅಂಟಾರ್ಕ್ಟಿಕಾ ಎನ್ನುವುದು ಜಗತ್ತಿನಲ್ಲೇ ಉಲ್ಕೆಗಳ ಬೇಟೆಗೆ ಪ್ರಶಸ್ತ ತಾಣ ಎಂದು ಪ್ರಸಿದ್ಧಿ ಪಡೆದಿದೆ. ಅಂಟಾರ್ಕ್ಟಿಕಾವು ಮರುಭೂಮಿ ಪ್ರದೇಶವಾಗಿದ್ದು, ಒಣ ಹವೆಯನ್ನು ಹೊಂದಿರುವ ಕಾರಣ ಉಲ್ಕೆಗಳು ಸುಲಭವಾಗಿ ಗೋಚರಿಸುತ್ತವೆ. ಈ ವಿಜ್ಞಾನಿಗಳು ಅಂಟಾರ್ಕ್ಟಿಕಾದ ಬ್ಲೂ ಐಸ್ ಪ್ರದೇಶದ ಆಳದಲ್ಲಿ ಉಲ್ಕೆಗಳನ್ನು ಪತ್ತೆಹಚ್ಚಿದ್ದಾರೆ.
ಐದು ಉಲ್ಕೆಗಳ ಪೈಕಿ ಒಂದು 7.6 ಕೆ.ಜಿ. ದ್ರವ್ಯರಾಶಿ ಹೊಂದಿದೆ. ಕಳೆದೊಂದು ಶತಮಾನದಲ್ಲಿ ಅಂಟಾರ್ಕ್ಟಿಕಾದಲ್ಲಿ ಸುಮಾರು 45 ಸಾವಿರ ಉಲ್ಕೆಗಳು ಪತ್ತೆಯಾಗಿವೆ. ಈ ಪೈಕಿ ಕೇವಲ ನೂರರಷ್ಟು ಉಲ್ಕೆಗಳು ಮಾತ್ರ ಈ ಗಾತ್ರದ್ದು. ವಿಜ್ಞಾನಿಗಳು ಉಪಗ್ರಹ ಚಿತ್ರಗಳನ್ನು ಆಧರಿಸಿ ಹೊಸ ಉಲ್ಕೆಗಳಿರುವ ಪ್ರದೇಶಗಳನ್ನು ಕಂಡುಕೊಂಡಿದ್ದಾರೆ.
ದೊಡ್ಡ ಗಾತ್ರದ ಅಪರೂಪದ ಉಲ್ಕೆಗಳ ಮೂಲಕ ನಾವು ಭೂಮಿಯ ಸೃಷ್ಟಿಯ ಕುರಿತು ಅಧ್ಯಯನ ನಡೆಸಲು ಸಾಧ್ಯವಾಗಲಿದೆ ಎಂದೂ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.