ಪರ್ವೇಜ್ ಮುಶರಫ್ ಗೆ ತೀವ್ರ ಅನಾರೋಗ್ಯ, ದುಬೈ ಆಸ್ಪತ್ರೆಗೆ ದಾಖಲು
Team Udayavani, Mar 18, 2019, 6:47 AM IST
ದುಬೈ : ಪಾಕಿಸ್ಥಾನದ ದೇಶಭ್ರಷ್ಟ ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಶರಫ್ ಅತ್ಯಪರೂಪದ ಕಾಯಿಲೆಯೊಂದರಿಂದ ಬಳಲುತ್ತಿದ್ದು ಇದರಿಂದ ಉಂಟಾಗಿರುವ ತೀವ್ರ ದುಷ್ಪರಿಣಾಮದ ಕಾರಣ ಅವರನ್ನು ದುಬೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಶರಫ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರಿಗೆ ಪೂರ್ಣ ಬೆಡ್ ರೆಸ್ಟ್ ಕಡ್ಡಾಯಗೊಳಿಸಿದ್ದಾರೆ.
ಪಾಕ್ ದೈನಿಕ ಡಾನ್ ವರದಿಯ ಪ್ರಕಾರ 75ರ ಹರೆಯದ ಮುಶರಫ್ ಆರೋಗ್ಯ ಕಳೆದ ವಾರಾಂತ್ಯ ತೀವ್ರ ಹದಗೆಟ್ಟ ಕಾರಣ ಅವರನ್ನು ದುಬೈ ಆಸ್ಪತ್ರೆಗೆ ಸೇರಿಸಲಾಗಿತ್ತು. ಮುಶರಫ್ ಅವರು ಕಳೆದ ಕೆಲ ಸಮಯದಿಂದ ಅತ್ಯಪರೂಪದ ಆ್ಯಮಿಲಾಯ್‌ಡೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಯ ದುಷ್ಕಪರಿಣಾಮ ತೀವ್ರವಾಗಿ ಕಾಡಿ ಮುಶರಫ್ ಆರೋಗ್ಯ ದಿಢೀರನೆ ಕುಸಿದ ಕಾರಣ ಅವರನ್ನು ದುಬೈ ಆಸ್ಪತ್ರೆಗೆ ದಾಖಲಾಯಿಸಿಯಿತು.
ಕಳೆದ ವರ್ಷ ಅಕ್ಟೋಬರ್ ನಲ್ಲಿ ನಡೆಸಲಾದ ವೈದ್ಯಕೀಯ ಪರೀಕ್ಷೆಯಲ್ಲಿ ಮುಶರಫ್ ಅಪರೂಪದ ಕಾಯಿಲೆಯೊಂದರಿಂದ ಬಳಲುತ್ತಿರುವುದು ದೃಢಪಟ್ಟಿತ್ತು. ಇದರಿಂದ ಅವರ ನರಮಂಡಲ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗಿರುವುದನ್ನು ಪತ್ತೆ ಹಚ್ಚಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.