ಎದೆ ಹಾಲುಣಿಸಿದ ತಂದೆ!
Team Udayavani, Jul 6, 2018, 12:54 PM IST
ವಿಸ್ಕನ್ಸಿನ್: ಮಗುವಿಗೆ ತಾಯಿ ಹಾಲುಣಿ ಸುವುದು ಸರ್ವೆಸಾಮಾನ್ಯ. ಆದರೆ, ಅಪ್ಪ ಹಾಲುಣಿಸಿದ್ದಾರೆ ಎಂದರೆ ನಂಬುತ್ತೀರಾ? ನೋ ಚಾನ್ಸ್, ಅದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡದೇ ಇರದು. ಅಮೆರಿಕದಲ್ಲಿ ಇಂಥದ್ದೊಂದು ಅಚ್ಚರಿ ನಡೆದಿದೆ. ಸ್ವತಃ ಆ ತಂದೆ, ಮ್ಯಾಕ್ಸಮಿಲಿಯನ್ ನ್ಯುಬೌಯರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಆಗಷ್ಟೇ ಜನಿಸಿದ ಮಗುವಿಗೆ ಎದೆ ಹಾಲುಣಿಸುತ್ತಿರುವ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. ಅಷ್ಟೇ ಅಲ್ಲ, ಜಗತ್ತಿನಲ್ಲೇ ಎದೆ ಹಾಲುಣಿಸಿದ ಮೊಟ್ಟ ಮೊದಲ ತಂದೆ ಎಂದೂ ಇದನ್ನು ವಿಶ್ಲೇಷಿಸಲಾಗುತ್ತಿದೆ.
ಅಷ್ಟಕ್ಕೂ, ಹಾಲುಣಿಸಿ ಮಾತೃವಾತ್ಸಲ್ಯ ತೋರಬೇಕಾದ ಏಪ್ರಿಲ್ ನ್ಯುಬೌಯರ್ ಅವರಿಗೆ ಕೆಲ ಸಮಸ್ಯೆಗಳು ತಲೆದೋರಿದ ಕಾರಣ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಸಲಹೆಯಂತೆ ಆಕೆ ತನ್ನ ಮಗುವಿಗೆ ಮೊಲೆಹಾಲುಣಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ತಮ್ಮ ಮಗುವಿಗೆ ಹಾಲುಣಿಸುವುದು ಸವಾಲಾದ ಹಿನ್ನೆಲೆಯಲ್ಲಿ ನರ್ಸ್ ಸಲಹೆಯಂತೆ ಪೈಪ್‌ವೊಂದನ್ನು ತನ್ನ ಎದೆಗೆ ಅಳವಡಿಸಿ ಆ ಮೂಲಕ ಮ್ಯಾಕ್ಸಮಿಲಿಯನ್ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಪರೂಪದ ತಂದೆ ನ್ಯುಬೌಯರ್, “”ಮಗು ಜನಿಸಿದ ತತ್ ಕ್ಷಣದಲ್ಲೇ “ಸ್ಕಿನ್ ಟು ಸ್ಕಿನ್ ಕಾಂಟೆಕ್ಟ್’ಗೆ ನಾವಿಬ್ಬರೂ ಮಗು ಜನನಕ್ಕೂ ಮೊದಲೇ ಯೋಜಿಸಿದ್ದೆವು. ಆದರೆ, ಪತ್ನಿ ಏಪ್ರಿಲ್ ಇದ ರಿಂದ ವಂಚಿತಳಾದಳು. ಆ ಕಾರಣ, ನಾನು ಈ ಪ್ರಯತ್ನಕ್ಕೆ ಮುಂದಾದೆ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.