ಆರ್‌ಸಿಇಪಿ ಒಪ್ಪಂದ 2020ಕ್ಕೆ ಮುಂದೂಡಿಕೆ?
ಕೊನೆ ಕ್ಷಣದಲ್ಲಿ ಭಾರತದಿಂದ ಹಲವು ಬೇಡಿಕೆ, ಸ್ಪಷ್ಟೀಕರಣ ಕೇಳಿಕೆ
Team Udayavani, Nov 3, 2019, 8:32 PM IST
ಬ್ಯಾಂಕಾಕ್: ದೇಶಾದ್ಯಂತ ಉದ್ದಿಮೆ, ಕೃಷಿ ವಲಯದ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಇದರೊಂದಿಗೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ 2020ಕ್ಕೆ ಮುಂದೂಡುವ ಸಾಧ್ಯತೆಗಳು ಇದೀಗ ದಟ್ಟವಾಗಿವೆ.
ಚೀನ ಸರಕುಗಳು ದಂಡಿಯಾಗಿ ಭಾರತದ ಮಾರುಕಟ್ಟೆಗೆ ಬೀಳುವುದರೊಂದಿಗೆ ಇಲ್ಲಿನ ಸಣ್ಣ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ ಎಂಬ ಹಿನ್ನೆಲೆಯಲ್ಲಿ ಭಾರತ ಕೆಲವೊಂದು ಹೊಸ ಬೇಡಿಕೆಗಳನ್ನು ಮುಂದಿಟ್ಟಿದ್ದು ಒಪ್ಪಂದ ಪ್ರಕ್ರಿಯೆ ಮುಂದೆ ಹೋಗಲಿದೆ ಎನ್ನಲಾಗಿದೆ.
ಭಾರತದ ಆತಂಕ
ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಆಸಿಯಾನ್ ದೇಶಗಳ ಸಮ್ಮೇಳನದಲ್ಲಿ ಆರ್‌ಸಿಇಪಿ ಕುರಿತು 10 ದೇಶಗಳು ಬಹುತೇಕ ಅಂತಿಮ ಒಪ್ಪಂದಕ್ಕೆ ಬರಲಿವೆ ಎಂದು ಹೇಳಲಾಗಿತ್ತು. ಆದರೆ ಭಾರತ ಕೆಲವೊಂದು ಪ್ರಶ್ನೆಗಳನ್ನು, ಬೇಡಿಕೆಗಳನ್ನು ಕೊನೆ ಕ್ಷಣದಲ್ಲಿ ಇಟ್ಟಿದ್ದರಿಂದ ಒಪ್ಪಂದ ಮುಂದಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ.
ಒಪ್ಪಂದದ ಎಲ್ಲ 20 ಅಧ್ಯಾಯಗಳು ಪೂರ್ಣಗೊಂಡಿವೆ. ಆದರೆ, ಒಂದು ದೇಶ ಮಾತ್ರ ನಿರ್ಧಾರಕ್ಕೆ ಬರಬೇಕಿದೆ. ಅದು ಭಾರತವೆಂದು ನಂಬಲಾಗಿದೆ ಎಂದು ಒಪ್ಪಂದದ ಬಗ್ಗೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಆಸಿಯಾನ್ ರಾಷ್ಟ್ರದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೇರವಾಗಿ ಆರ್‌ಸಿಇಪಿ ಒಪ್ಪಂದವನ್ನು ಪ್ರಸ್ತಾವಿಸದಿದ್ದರೂ, ಎಲ್ಲ ದೇಶಗಳ ಮಾರುಕಟ್ಟೆಗಳ ಸಂಪರ್ಕ ಅರ್ಥವತ್ತಾಗಿ, ಸಮಾಂತರವಾಗಿರಬೇಕು ಎಂಬರ್ಥದ ಮಾತುಗಳನ್ನು ಆಡಿದ್ದರು. ಆದಾಗ್ಯೂ ಈ ವರ್ಷದೊಳಗೆ ಒಪ್ಪಂದದ ವಿಚಾರಗಳ ಬಗ್ಗೆ ನಾವು ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಥೈಲೆಂಡ್ ಪ್ರಧಾನಿ ಹೇಳಿದ್ದಾರೆ.
ತೆರಿಗೆ ವಿನಾಯ್ತಿ ಲಾಭಕ್ಕೆ ಚೀನ ಹವಣಿಕೆ
ಭಾರತದಿಂದ ನ್ಯೂಜಿಲೆಂಡ್‌ವರೆಗೆ 16 ದೇಶಗಳು ಆರ್‌ಸಿಇಪಿ ಒಪ್ಪಂದದಲ್ಲಿವೆ. ಪಾಶ್ವಿಮಾತ್ಯ ರಾಷ್ಟ್ರಗಳ ಹೊರತಾದ ಮಾರಾಟ ಒಪ್ಪಂದ ಇದಾಗಿದ್ದು ಜಗತ್ತಿನ ಅರ್ಧದಷ್ಟು ಜನಸಂಖ್ಯೆಯನ್ನು ಒಳಗೊಳ್ಳುತ್ತದೆ. ಚೀನ-ಅಮೆರಿಕ ವ್ಯಾಪಾರ ಯುದ್ಧದಿಂದ ಹೆಚ್ಚಿನ ಸಮಸ್ಯೆಗಳಾಗುವುದನ್ನು ತಪ್ಪಿಸಲು ಈ ಒಪ್ಪಂದ ಪೂರಕವಾಗಲಿದೆ ಎಂದು ಹೇಳಲಾಗಿತ್ತು. ಈ ಒಪ್ಪಂದದಲ್ಲಿ ಚೀನ ನಿರ್ಣಾಯಕ ಸ್ಥಾನವನ್ನು ಹೊಂದಿದೆ. ಜತೆಗೆ ಒಪ್ಪಂದ ಅನ್ವಯ ದೇಶಗಳ ನಡುವೆ ಶೇ.90ರಷ್ಟು ತೆರಿಗೆ ವಿನಾಯಿತಿಯಲ್ಲಿ ಸರಕು ಮಾರಾಟ ನಡೆಯಲಿದೆ.
ಸದ್ಯ ಚೀನದ ಸರಕುಗಳ ಮೇಲೆ ಶೇ.70-80ರಷ್ಟು ತೆರಿಗೆ ಇದೆ. ಇನ್ನು ಆರ್‌ಸಿಇಪಿ ಒಪ್ಪಂದಕ್ಕೆ ಚೀನ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದು, ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳಿಗೆ ತನ್ನ ಸರಕಗಳನ್ನು ಬೇಕಾದಷ್ಟು ರಫ್ತುಮಾಡುವ ಉತ್ಸಾಹದಲ್ಲಿದೆ. ಇದರಿಂದ ತನ್ನ ಆರ್ಥಿಕತೆ ಇನ್ನಷ್ಟು ಬಲಿಷ್ಠವಾಗಬಹುದು ಎಂಬ ಲೆಕ್ಕಾಚಾರವನ್ನು ಅದು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 95ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ
ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಮಾದಕ ವಸ್ತು ಸೇವನೆ ಆರೋಪ: ಯುವಕ ವಶಕ್ಕೆ
Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ
Malpe: ಹೊಡೆದಾಟ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.