ಒಂದು ಲೋಟ ಚಹಾಗೆ 100 ರೂ.!; ಸ್ವರ್ಣ ಲಂಕೆಯ ಈಗಿನ ಪರಿಸ್ಥಿತಿಗೆ ಕಾರಣವೇನು?
Team Udayavani, Apr 2, 2022, 1:00 PM IST
ಕೊಲಂಬೊ: ಪುರಾಣದಲ್ಲಿ ಬರುವ ಸ್ವರ್ಣ ಲಂಕೆ ಇಂದು ಅಕ್ಷರಶಃ ದಿವಾಳಿಯಾಗಿದೆ. ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದೆ, ಗ್ಯಾಸ್ ಇಲ್ಲ, ದಿನಕ್ಕೆ 13 ಗಂಟೆ ಲೋಡ್ ಶೆಡ್ಡಿಂಗ್, ಡೀಸೆಲ್ ಇಲ್ಲದೆ ಬಸ್ ಗಳು ಮೂಲೆ ಸೇರಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಲಂಕಾದ ಜನತೆ ದಂಗೆಯೆದ್ದಿದ್ದಾರೆ. ಶುಕ್ರವಾರ ರಾತ್ರಿ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ತನ್ನ ವಿರುದ್ಧ ಘೋಷಣೆ ಕೂಗುವವರನ್ನು ಯಾವುದೇ ವಿಚಾರಣೆಯಿಲ್ಲದೆ ದೀರ್ಘಾವಧಿಗೆ ಬಂಧನದಲ್ಲಿ ಇಡುವಂತೆ ಕಾನೂನು ರೂಪಿಸಿದ್ದಾರೆ.
“ಆಹಾರ ಪದಾರ್ಥಗಳು ಸಿಗುತ್ತಿಲ್ಲ, ಅಗತ್ಯ ಔಷಧಗಳ ಬೆಲೆ ಗಗನಕ್ಕೇರಿದೆ. ಸದ್ಯ, ನಮ್ಮಲ್ಲಿ ಯಾವುದೇ ಗ್ಯಾಸ್, ಪೆಟ್ರೋಲ್ ಅಥವಾ ಸೀಮೆ ಎಣ್ಣೆ ಇಲ್ಲ. ಯಾವುದೇ ಔಷಧಿಗಳಿಲ್ಲ. ನನ್ನ ವಯಸ್ಸು 69 ಆದರೆ ನನ್ನ ಜೀವನದಲ್ಲಿ ಈ ರೀತಿಯ ಘಟನೆಯನ್ನು ನೋಡುತ್ತಿರುವುದು ಇದೇ ಮೊದಲು” ಎನ್ನುತ್ತಾರೆ ಸ್ಥಳೀಯ ಪ್ರಜೆ ಥೋಮಸ್.
ಇದನ್ನೂ ಓದಿ:ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ: ಎನ್ ಸಿಬಿಯ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಸಾವು
“ನಮಗೆ ಜೀವನ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹಣವೂ ಮತ್ತು ಸಂಬಳ ಕೂಡಾ ಸಿಗುತ್ತಿಲ್ಲ. ನಮ್ಮ ಬಳಿ ಹಣವಿದ್ದರೂ ಸಾಮಾಗ್ರಿಗಳಿಲ್ಲ. ನಾವು ಕೊಲಂಬೊದ ಕೆಲವು ಅಂಗಡಿಗಳಿಗೆ ಹೋದಾಗ, ಅವರು ದಾಲ್ ಇಲ್ಲ, ಅಕ್ಕಿ ಇಲ್ಲ, ಬ್ರೆಡ್ ಇಲ್ಲ ಎಂದು ಹೇಳುತ್ತಾರೆ. ಒಂದು ಪೌಂಡ್ ಬ್ರೆಡ್‌ನ ಬೆಲೆ 100 ಶ್ರೀಲಂಕಾದ ರೂಪಾಯಿಗಳು. ಒಂದು ಕಪ್ ಚಹಾದ ಬೆಲೆ 100 ಶ್ರೀಲಂಕಾ ರೂಪಾಯಿ ಆಗಿದೆ. ಪ್ರಮುಖ ವಸ್ತುಗಳ ಬೆಲೆ ಏರಿಕೆಯಾಗಿದೆ” ಎನ್ನುತ್ತಾರೆ ಥೋಮಸ್.
ಅಷ್ಟಕ್ಕೂ ದಕ್ಷಿಣ ಏಷ್ಯಾದ ದ್ವೀಪ ರಾಷ್ಟ್ರದ ಪರಿಸ್ಥಿತಿಗೆ ಕಾರಣವೇನು? ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಲು ಕಾರಣವೇನು?
ಬೃಹತ್ ಪ್ರಮಾಣದ ಸಾಲಗಳು ಮತ್ತು ಕ್ಷೀಣಿಸುತ್ತಿರುವ ವಿದೇಶಿ ರಿಸರ್ವ್ ಕಾರಣದಿಂದ ಆಮದು ಪದಾರ್ಥಗಳಿಗೆ ಪಾವತಿಸಲು ಹಣ ಹೊಂದಿಸಲೂ ಲಂಕಾ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದು ವಿದೇಶಿ ಮೂಲವನ್ನೇ ಅವಲಂಭಿಸಿರುವ ಇಂಧನ ಸೇರಿದಂತೆ ಹಲವಾರು ಸರಕುಗಳ ಕೊರತೆಗೆ ಕಾರಣವಾಗಿದೆ.
ಶ್ರೀಲಂಕಾದ ಆರ್ಥಿಕ ಸಂಕಷ್ಟಗಳಿಗೆ ಸತತ ಸರ್ಕಾರಗಳು ಒಂದೇ ರೀತಿಯ ರಫ್ತುಗಳನ್ನು ಅವಲಂಭಿಸಿರುವುದು ಮತ್ತು ಬೇರೆ ರೂಪದ ಸರಕುಗಳ ರಫ್ತಿಗೆ ಉತ್ತೇಜನ ನೀಡದೇ ಇರುವುದು ಒಂದು ಕಾರಣ. ಸಾಂಪ್ರದಾಯಿಕ ಆರ್ಥಿಕ ಮೂಲಗಳಾದ ಚಹಾ, ಉಡುಪುಗಳು ಮತ್ತು ಪ್ರವಾಸೋದ್ಯಮವನ್ನು ಅವಲಂಬಿಸಿರುವುದು ಕೂಡಾ ಲಂಕೆಗೆ ಮುಳುವಾಯಿತು.
ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದ ವಿಶ್ವದ ಎಲ್ಲಾ ದೇಶಗಳು ಆರ್ಥಿಕ ಸಂಕಷ್ಟ ಅನುಭವಿಸಿದೆ. ಆದರೆ ಮೊದಲೇ ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದ ಶ್ರೀಲಂಕಾ ಕೋವಿಡ್ ಕಾರಣದಿಂದ ಮತ್ತೆ ಹೊಡೆತ ತಿಂದಿತ್ತು.
ಎರಡು ವರ್ಷಗಳಲ್ಲಿ ದೇಶದ ವಿದೇಶಿ ವಿನಿಮಯ ರಿಸರ್ವ್ ನಲ್ಲಿ ಶೇ. 70 ರಷ್ಟು ಅಗಾಧ ಕುಸಿತ ಉಂಟಾಗಿ ಅದು ಸದ್ಯ ಕೇವಲ 2.31 ಬಿಲಿಯನ್ ಡಾಲರ್ ಮೊತ್ತಕ್ಕೆ ಬಂದು ತಲುಪಿದ್ದು ದೇಶವು ಅವಶ್ಯಕವಾದ ಆಹಾರ ಮತ್ತು ಇಂಧನದಂತಹ ವಸ್ತುಗಳನ್ನೂ ಸಹ ಆಮದು ಮಾಡಿಕೊಳ್ಳಲು ಪರದಾಡುತ್ತಿದೆ.
ಶ್ರೀಲಂಕಾದ ಜೆಡಿಪಿಗೆ ಪ್ರಮುಖ ಮೂಲವಾಗಿದ್ದ ಪ್ರವಾಸೋದ್ಯಮ ಕೂಡಾ ಕೋವಿಡ್ ಕಾರಣದಿಂದ ನೆಲಕಚ್ಚಿತ್ತು. ಸುತ್ತಲೂ ಸಮುದ್ರದಿಂದ ಸುತ್ತುವರಿದಿರುವ ಶ್ರೀಲಂಕಾಕ್ಕೆ ಹಲವಾರು ದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಕೋವಿಡ್ ಕಾರಣದಿಂದ ಇದಕ್ಕೆ ಬಲವಾದ ಪೆಟ್ಟು ಬಿದ್ದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.