ಪಾಕ್ ಪ್ರಯಾಣ ಮರು ಪರಿಶೀಲಿಸಿ: ಅಮೆರಿಕನ್ನರಿಗೆ ಸೂಚನೆ
Team Udayavani, Jan 11, 2018, 11:55 AM IST
ವಾಷಿಂಗ್ಟನ್ : ಪಾಕಿಸ್ಥಾನ ಜತೆಗಿನ ತನ್ನ ದ್ವಿಪಕ್ಷೀಯ ಸಂಬಂಧಗಳು ಈಚಿನ ದಿನಗಳಲ್ಲಿ ತೀವ್ರವಾಗಿ ಹದಗೆಟ್ಟಿರುವುದರಿಂದ ಆ ದೇಶದ ಉಗ್ರರಿಂದ ತನ್ನ ಪ್ರಜೆಗಳಿಗೆ ಇರುವ ಬೆದರಿಕೆಗಳ ಪುನರವಲೋಕನ ನಡೆಸಿರುವ ಅಮೆರಿಕ, ಪಾಕ್ ಪ್ರವಾಸ ಕೈಗೊಳ್ಳುವ ತನ್ನ ಪ್ರಜೆಗಳಿಗೆ ತಮ್ಮ ಪ್ರಯಾಣವನ್ನು ಮರು ಪರಿಶೀಲಿಸುವಂತೆ ಕೇಳಿಕೊಂಡಿದೆ.
ಅಮೆರಿಕದ ವಿದೇಶಾಂಗ ಇಲಾಖೆ ತನ್ನ ಪ್ರಜೆಗಳಿಗೆ ನೀಡಿರುವ ಈ ಮಾರ್ಗದರ್ಶಿ ಸೂತ್ರಗಳು ಕೇವಲ ಪಾಕ್ ಪ್ರವಾಸಕ್ಕೆ ಮಾತ್ರವೇ ಸಂಬಂಧಿಸಿಲ್ಲ; ಬದಲು ಅದರ ಇತರ ಪ್ರಾಂತ್ಯಗಳಾಗಿರುವ ಬಲೂಚಿಸ್ಥಾನ, ಖೈಬರ್ ಫಕೂ¤ನ್ ಖ್ವಾ ಮತ್ತು ಪಾಕ್ ಒಕ್ಕೂಟ ಆಡಳಿತೆಗೆ ಒಳಪಟ್ಟ ಬುಡಕಟ್ಟು ಪ್ರದೇಶಗಳಿಗೆ ಕೂಡ ಸಂಬಂಧಿಸಿದೆ.
ಪಾಕಿಸ್ಥಾನ ಮತ್ತು ಅದರ ಇತರ ಪ್ರಾಂತ್ಯಗಳಲ್ಲಿ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ; ಅವರು ಯಾವುದೇ ಪೂರ್ವ ಎಚ್ಚರಿಕೆಗಳನ್ನು ನೀಡದೆಯೇ ವಿದೇಶಿ ಪ್ರವಾಸಿಗರ ಮೇಲೆ ಇದ್ದಕ್ಕಿದ್ದಂತೆಯೇ ದಾಳಿ ನಡೆಸುವ ಅಪಾಯವಿದೆ; ಆದುದರಿಂದ ಪಾಕ್ ಸಹಿತ ಅದರ ಇತರ ಪ್ರಾಂತ್ಯಗಳಿಗೆ ಪ್ರಯಾಣಿಸುವದನ್ನು ಅಮೆರಿಕನ್ ಪ್ರಜೆಗಳು ಪುನರ್ ಪರಿಶೀಲಿಸಬೇಕು ಎಂದು ವಿದೇಶಾಂಗ ಇಲಾಖೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.