ಪಾಕ್‌ನಿಂದ ಮತ್ತೆ 100 ಭಾರತೀಯರ ಬಿಡುಗಡೆ
Team Udayavani, Apr 15, 2019, 6:00 AM IST
ಇಸ್ಲಾಮಾಬಾದ್: ಭಾರತ ಪಾಕಿಸ್ಥಾನದ ನಡುವಿನ ಸೌಹಾರ್ದದ ದ್ಯೋತಕವಾಗಿ ಪಾಕಿಸ್ಥಾನದಲ್ಲಿ ಬಂಧಿತರಾಗಿದ್ದ 100 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ.
ಈ ಹಿಂದೆಯೇ ಪಾಕಿಸ್ಥಾನವು ಭಾರತದ 360 ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ನಾಲ್ಕು ಹಂತಗಳಲ್ಲಿ ಇದೇ ತಿಂಗಳು ಎಲ್ಲರನ್ನೂ ಭಾರತಕ್ಕೆ ಕಳುಹಿಸುವುದಾಗಿ ಹೇಳಿತ್ತು. ಎ.17ರಂದು ಮೊದಲ ಹಂತವಾಗಿ 100 ಮೀನುಗಾರರನ್ನು ಬಿಡುಗಡೆ ಮಾಡ ಲಾಗಿತ್ತು. ಈಗ ಮತ್ತೆ 100 ಜನರ 2ನೇ ತಂಡವನ್ನು ಶನಿವಾರ ಭಾರತಕ್ಕೆ ಮರಳಿಸಿದೆ.
ಪಾಕ್‌ನ ಮಾಲಿರ್ ಜೈಲಿನಲ್ಲಿದ್ದ 100 ಮೀನುಗಾರರು ಶನಿವಾರ ಬಿಡುಗಡೆ ಆಗಿದ್ದಾರೆ. ಅವರನ್ನು ರೈಲಿನ ಮೂಲಕ ಲಾಹೋರ್‌ಗೆ ಕರೆದುಕೊಂಡು ಹೋಗಿ ನಂತರ ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎ. 22 ಮತ್ತು 29ರಂದು ಬಾಕಿ ಸೆರೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ. ಇದೇ ವೇಳೆ, ಲೋಕಸಭೆ ಚುನಾವಣೆಯ ನಂತರ ಭಾರತದೊಂದಿಗೆ ಮಾತುಕತೆ ಆರಂಭಿಸಲು ಪಾಕಿಸ್ಥಾನ ಎದುರು ನೋಡುತ್ತಿದೆ. ಮಾತುಕತೆಯಿಂದ ಉಭಯ ದೇಶಗಳು ಸಮಸ್ಯೆ ನಿವಾರಿಸಲು ನೆರವಾಗಲಿದೆ, ಅಲ್ಲದೇ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲೂ ಇದು ಸಹಾಯಕ ಎಂದು ಪಾಕ್ ಹೈಕಮಿಷನರ್ ಸೊಹೇಲ್ ರವಿವಾರ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.