50 ವರ್ಷ ಹಿಂದೆ ಪತನಗೊಂಡ ವಿಮಾನ ಪ್ರಯಾಣಿಕರ ಅಂಗಾಂಗ ಪತ್ತೆ?
Team Udayavani, Jul 30, 2017, 7:10 AM IST
– ಫ್ರಾನ್ಸ್‌ನ ಮೌಂಟ್ ಬ್ಲಾಂಕ್ ಪರ್ವತ ಪ್ರದೇಶದಲ್ಲಿ ಸಿಕ್ಕಿತು ಜೆಟ್ ಎಂಜಿನ್, ಮನುಷ್ಯರ ಕೈ- ಕಾಲುಗಳ ಅವಶೇಷ
– 1966ರಲ್ಲಿ ಪತನಗೊಂಡ ಏರ್‌ಇಂಡಿಯಾ ವಿಮಾನದ ಎಂಜಿನ್ ಹಾಗೂ ಪ್ರಯಾಣಿಕರ ದೇಹದ ಭಾಗಗಳು ಎಂಬ ಶಂಕೆ
ಗ್ರೆನೋಬಲ್: ಕೇವಲ 10 ದಿನಗಳ ಕೆಳಗೆ ಯುರೋಪ್‌ನ ಆಲ್ಫ್ಸ್ ಪರ್ವತಗಳಲ್ಲಿ 75 ವರ್ಷಗಳ ಕೆಳಗೆ ನಾಪತ್ತೆಯಾಗಿದ್ದ ದಂಪತಿಯ ಮೃತದೇಹ ಪತ್ತೆಯಾಗಿತ್ತು. ಅದು ಈಗಲೂ ಗುರುತು ಹಿಡಿಯುವಂಥ ಸ್ಥಿತಿಯಲ್ಲೇ ಇದ್ದು, ಎಲ್ಲರ ಅಚ್ಚರಿಗೂ ಕಾರಣವಾಗಿತ್ತು. ಅದರ ಬೆನ್ನಲ್ಲೇ ಇದೀಗ ಸುಮಾರು 50 ವರ್ಷಗಳ ಕೆಳಗೆ ಇದೇ ಶ್ರೇಣಿಯ ‘ಮೌಂಟ್ ಬ್ಲಾಂಕ್’ ಪರ್ವತದಲ್ಲಿ ಪತನವಾಗಿದ್ದ ಏರ್‌ಇಂಡಿಯಾ ವಿಮಾನಗಳ ಪ್ರಯಾಣಿಕರದ್ದು ಎನ್ನಲಾದ ಶರೀರದ ಭಾಗಗಳು ಪತ್ತೆಯಾಗಿವೆ.
‘ಮೌಂಟ್ ಬ್ಲಾಂಕ್’ ಪರ್ವತಗಳಲ್ಲಿ ಸಂಭವಿಸಿದ ವಿಮಾನ ದುರಂತಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಡೇನಿಯಲ್ ರೋಶ್ ಎಂಬ ವ್ಯಕ್ತಿಗೆ ಈ ಭಾಗಗಳು ದೊರೆತಿವೆ. ಜೊತೆಗೆ ಒಂದು ವಿಮಾನದ ಎಂಜಿನ್ ಕೂಡ ಇಲ್ಲಿ ಸಿಕ್ಕಿದೆ. ಇಲ್ಲಿ ಸಿಕ್ಕಿರುವಂಥ ಕೈ ಹಾಗೂ ಕಾಲಿನ ಭಾಗಗಳನ್ನು ವೈದ್ಯಕೀಯ ಕೇಂದ್ರದಲ್ಲಿ ಪರೀಕ್ಷಿಸಿದಾಗ, ಇವು ಇಬ್ಬರು ಬೇರೆ ಬೇರೆ ವ್ಯಕ್ತಿಗಳ ಅಂಗಾಂಗಗಳು ಎಂದು ತಿಳಿದು ಬಂದಿದೆ.
ಪತನಗೊಂಡಿದ್ದವು ಏರ್‌ಇಂಡಿಯಾ ವಿಮಾನಗಳು
1966ರ ಜನವರಿಯಲ್ಲಿ ಮುಂಬಯಿಯಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್‌ಇಂಡಿಯಾ ಬೋಯಿಂಗ್ 707 ಮೌಂಟ್ ಬ್ಲಾಂಕ್ ಪರ್ವತ ಪ್ರದೇಶದಲ್ಲಿ ಪತನವಾಗಿತ್ತು. ಆ ಸಮಯದಲ್ಲಿ ವಿಮಾನದಲ್ಲಿ 117 ಮಂದಿ ಪ್ರಯಾಣಿಕರಿದ್ದರು. ಅದಕ್ಕೂ ಮೊದಲು, ಅಂದರೆ 1950ರಲ್ಲಿ ಇದೇ ಪರ್ವತದಲ್ಲಿ ಮತ್ತೂಂದು ಏರ್‌ಇಂಡಿಯಾ ವಿಮಾನ ಪತನವಾಗಿ, 48 ಪ್ರಯಾಣಿಕರು ಸಾವಿಗೀಡಾಗಿದ್ದರು. ಈಗ ದೊರೆತಿರುವ ಮೃತದೇಹಗಳ ಭಾಗಗಳು 1966ರಲ್ಲಿ ಆದ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರದ್ದು ಎಂದು ರೋಶ್ ಅಭಿಪ್ರಾಯಪಟ್ಟಿದ್ದಾರೆ. ದೇಹದ ಭಾಗಗಳು ಪತ್ತೆಯಾದೊಡನೆ ರೋಶ್ ಅವರು ಸ್ಥಳೀಯ ತುರ್ತು ಸೇವಾ ಸಂಸ್ಥೆಯನ್ನು ಸಂಪರ್ಕಿಸಿದ್ದು, ಹೆಲಿಕಾಪ್ಟರ್ ಮೂಲಕ ಅವುಗಳನ್ನು ಸಾಗಿಸಿ, ತಜ್ಞರು ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಹಿಮಗಲ್ಲಿನ ಪರ್ವತಶ್ರೇಣಿಯಲ್ಲಿ ಅಕ್ಕಪಕ್ಕವೇ ದಂಪತಿಯ ಮೃತದೇಹಗಳು ಪತ್ತೆಯಾಗಿದ್ದವು. ಡಿಎನ್‌ಎ ಪರೀಕ್ಷೆ ನಡೆಸಿದಾಗ, ಅವು 75 ವರ್ಷಗಳ ಹಿಂದೆ ಮೃತಪಟ್ಟ ಮಾರ್ಸೆಲಿನ್ ಡ್ಯುಮೋಲಿನ್ ಮತ್ತು ಪತ್ನಿ ಫ್ರಾನ್ಸಿನ್ ಅವರ ಮೃತದೇಹ ಎಂಬುದು ದೃಢಪಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.