ಆಸಿಯಾ ಬೀಬಿ ವಿದೇಶಕ್ಕೆ ಪಲಾಯನ ಮಾಡಿಲ್ಲ: ಪಾಕ್ ಸರಕಾರ
Team Udayavani, Nov 12, 2018, 5:18 PM IST
ಲಾಹೋರ್ : ಪಾಕ್ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿನ ಫಲವಾಗಿ ಧರ್ಮ ನಿಂದನೆಯ ಆರೋಪದಿಂದ ಮುಕ್ತಳಾಗಿ ಎಂಟು ವರ್ಷಗಳ ಸುದೀರ್ಘ ಒಂಟಿ ಸೆರೆಯಿಂದ ಹೊರಬಂದು ವಿಶ್ವಾದ್ಯಂತ ಸುದ್ದಿಯಾಗಿದ್ದ ಪಾಕ್ ಕ್ರೈಸ್ತ ಮಹಿಳೆ ಆಸಿಯಾ ಬೀಬಿ ವಿದೇಶಕ್ಕೆ ಪಲಾಯನ ಮಾಡಿದ್ದಾಳೆ ಎಂಬ ವರದಿಯನ್ನು ಪಾಕ್ ಸರಕಾರ ಇಂದು ಸೋಮವಾರ ಸುಳ್ಳೆಂದು ಹೇಳಿದೆ.
ಆಸಿಯಾ ಬೀಬಿಯನ್ನು ವಿದೇಶದಲ್ಲಿ ಅಭಿನಂದಿಸುತ್ತಿರುವ ಸುದ್ದಿ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಅವೆಲ್ಲವೂ ಫೇಕ್ ಎಂದು ಪಾಕ್ ಸರಕಾರ ಹೇಳಿದೆ.
ಕಳೆದ ವಾರ ಮುಲ್ತಾನ್ ಜೈಲಿನಿಂದ ಬಿಡುಗಡೆಗೊಂಡಿರುವ 47ರ ಹರೆಯದ ಆಸಿಯಾ ಬೀಬಿ ಈಗಲೂ ಪಾಕಿಸ್ಥಾನದಲ್ಲೇ ಇದ್ದಾಳೆ ಎಂದು ಪಾಕ್ ಸರಕಾರ ಹೇಳಿದೆ.
ನೆರೆಮನೆಯೊಂದಿಗಿನವರ ಜತೆಗಿನ ಜಗಳದಲ್ಲಿ ಆಸಿಯಾ ಬೀಬಿ ಇಸ್ಲಾಂ ಧರ್ಮ ನಿಂದನೆಯ ಮಾತುಗಳನ್ನು ಆಡಿದ್ದಳು ಎಂಬ ಆರೋಪದ ಮೇಲೆ ಬಂಧಿತಳಾಗಿ ಜೈಲು ಸೇರಿ 8 ವರ್ಷಗಳ ಒಂಟಿ ಸೆರೆಯನ್ನು ಅನುಭವಿಸಿ ಕಳೆದ ವಾರ ಪಾಕ್ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿನಿಂದಾಗಿ ಖುಲಾಸೆಗೊಂಡು ಜೈಲಿನಿಂದ ಹೊರಬಂದ್ದಿಳು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.