ವಾಟ್ಸಾಪ್ನಲ್ಲೂ ಲೀಕ್ ಲೋಪ ಪತ್ತೆಹಚ್ಚಿದ ಜರ್ಮನಿ ಸಂಶೋಧಕರು
Team Udayavani, Jan 12, 2018, 6:55 AM IST
ಜ್ಯೂರಿಚ್ (ಸ್ವಿಜರ್ಲೆಂಡ್): ವಾಟ್ಸ್ ಆ್ಯಪ್ ಮೂಲಕ ಕಳುಹಿಸುವ ಮಾಹಿತಿ ಸುರಕ್ಷಿತ ಎಂದುಕೊಂಡಿದ್ದೀರಾ? ಹಾಗಿದ್ದರೆ ನಿಮ್ಮ ಊಹೆ ತಪ್ಪು. “ಎಂಡ್-ಟು-ಎಂಡ್ ಎನ್ಕ್ರಿಪ್ಶನ್’ ವ್ಯಾಪ್ತಿಯಡಿ ಕಳುಹಿಸುವ ಎಲ್ಲಾ ಮಾಹಿತಿ, ಸಂದೇಶಗಳೂ ಸುರಕ್ಷಿತ ಎಂದು ಬಿಂಬಿಸಿರುವ ವಾಟ್ಸಾಪ್ನ ತಂತ್ರಜ್ಞಾನದಲ್ಲಿನ ದೊಡ್ಡ ಲೋಪವೊಂದನ್ನು ಜರ್ಮನಿಯ ರುಹರ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಸ್ವಿಜರ್ಲೆಂಡ್ನ ಜ್ಯೂರಿಚ್ನಲ್ಲಿ ನಡೆದ “ರಿಯಲ್ ವರ್ಲ್ಡ್ ಕ್ರಿಪ್ಟೋ ಸೆಕ್ಯೂರಿಟಿ ಕಾನ್ಫರೆನ್ಸ್’ನಲ್ಲಿ ಈ ಸಂಶೋಧಕರ ತಂಡದ ಮುಖ್ಯಸ್ಥ ಪಾಲ್ ರೋಸ್ಲರ್ ಈ ಬಗ್ಗೆ ವಿವರಣೆ ನೀಡಿದ್ದಾರೆ.
ಏನಿದು ಲೋಪ?: ವಾಟ್ಸಾಪ್ನ ಗ್ರೂಪ್ ಚಾಟ್ಗಳು ಸುರಕ್ಷಿತವಾಗಿಲ್ಲ ಎಂಬುದು ಪಾಲ್ ತಂಡದ ಪ್ರತಿಪಾದನೆ. ಯಾವುದೇ ವಾಟ್ಸ್ ಆ್ಯಪ್ ಗ್ರೂಪ್ನ ಅಡ್ಮಿನ್ಗೆ ಮಾತ್ರ ಆಯಾ ಗ್ರೂಪ್ಗೆ ಹೊಸ ಸದಸ್ಯರನ್ನು ಸೇರಿಸುವ ಅಧಿಕಾರವಿರುತ್ತದೆ. ಆದರೆ, ಯಾವುದೇ ಹ್ಯಾಕರ್, ವಾಟ್ಸಾಪ್ನ ಸರ್ವರ್ ಮೇಲೆ ಹಿಡಿತ ಸಾಧಿಸಿಬಿಟ್ಟನೆಂದರೆ ಯಾವುದೇ ಗ್ರೂಪ್ನ ಸದಸ್ಯನಾಗಿ ಅಡ್ಮಿನ್ನ ಗಮನಕ್ಕೂ ಬಾರದೆ ಗುಪ್ತವಾಗಿ ಸೇರಿಕೊಂಡು ಆ ಇಡೀ ಗ್ರೂಪ್ನ ಸದಸ್ಯರ ನಡುವೆ ವಿನಿಮಯವಾಗುವ ಸಂದೇಶಗಳನ್ನು ಓದಬಹುದು. ದುರಂತವೆಂದರೆ, ಹೀಗೊಬ್ಬ ಅನಧಿಕೃತ ವ್ಯಕ್ತಿ ತಮ್ಮ ಗುಂಪು ಪ್ರವೇಶಿಸಿ ರುವುದು ಮೇಲ್ನೋಟಕ್ಕೆ ಆ ಗ್ರೂಪ್ನ ಯಾರೊಬ್ಬರ ಗಮನಕ್ಕೂ ಬರುವುದಿಲ್ಲ ಎಂದು ಪಾಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.