ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!
ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರಿಂದ ಹೊಸ ತಂತ್ರಗಾರಿಕೆ
Team Udayavani, Jan 18, 2022, 7:20 AM IST
ನ್ಯೂಯಾರ್ಕ್: ಜಗತ್ತಿನ ನಾನಾ ದೇಶಗಳಲ್ಲಿ ಹ್ಯೂಮನ್ ಇಮ್ಯುನೋಡೆಫಿಷಿಯನ್ಸಿ ವೈರಾಣು (ಎಚ್‌ಐವಿ) ನಿರ್ಮೂಲನೆ ಕುರಿತಂತೆ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ (ಯುಸಿಎಲ್‌ಎ) ವಿಜ್ಞಾನಿಗಳು ಕಿಕ್ ಆ್ಯಂಡ್ ಕಿಲ್ ಎಂಬ ಹೊಸ ತಂತ್ರಗಾರಿಕೆಯೊಂದನ್ನು ರೂಪಿಸಿದೆ.
ಮನುಷ್ಯನ ದೇಹದಲ್ಲಿ ಅಡಗಿರಬಹುದಾದ ಎಚ್‌ಐವಿ ಸೋಂಕಿತ ಜೀವಕಣಗಳನ್ನು ಹುಡುಕಿ ನಾಶಪಡಿಸುವಂಥ ವಿಶಿಷ್ಟ ತಂತ್ರಗಾರಿಕೆ ಇದಾಗಿದೆ. “ನೇಚರ್ ಕಮ್ಯೂನಿಕೇಷನ್ಸ್’ ಎಂಬ ವೈಜ್ಞಾನಿಕ ಸಂಶೋಧನೆಗಳನ್ನು ಪ್ರಕಟಿಸುವ ನಿಯತಕಾಲಿಕೆಯಲ್ಲಿ ಈ ಕುರಿತ ಲೇಖನ ಪ್ರಕಟವಾಗಿದೆ.
ಏನಿದರ ವಿಶೇಷ?
ಇದೊಂದು ರೀತಿಯಲ್ಲಿ ಮುಳ್ಳನ್ನು ಮುಳ್ಳಿನಿಂದಲೇ ತಗೆಯುವಂಥ ಪ್ರಕ್ರಿಯೆ. ನಿರ್ದಿಷ್ಟ ಮಾನವನ ದೇಹದ ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯಡಿ ಸಹಜವಾಗಿ ಉತ್ಪತ್ತಿಯಾಗುವ ಆರೋಗ್ಯವಂತ ಜೀವಕಣಗಳನ್ನು ಸೂಕ್ತ ಔಷಧಿಗಳ ಮೂಲಕ ಹುರಿಗೊಳಿಸಿ, ಅದೇ ದೇಹದ ನಾನಾ ಅಂಗಾಂಗಗಳಲ್ಲಿ ಹುದುಗಿಕೊಂಡಿರುವ ಎಚ್‌ಐವಿ ಸೋಂಕಿತ ಜೀವಕಣಗಳನ್ನು ಪತ್ತೆ ಹಚ್ಚಿ ಕೊಲ್ಲುವಂಥ ತಂತ್ರಗಾರಿಕೆ ಇದಾಗಿದೆ. ಸದ್ಯಕ್ಕಿದು ಸೈದ್ಧಾಂತಿಕ ಮಾದರಿಯಲ್ಲಿದ್ದು, ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ವಿಜ್ಞಾನಿಗಳು ಸಜ್ಜಾಗಿದ್ದಾರೆ. ಅಂದುಕೊಂಡಂತೆ ಇದು ಯಶಸ್ವಿಯಾದರೆ ಎಚ್‌ಐವಿ ನಿರ್ಮೂಲನೆಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ.
ಈ ಹೊಸ ತಂತ್ರಗಾರಿಕೆಯಿಂದ ಎಚ್‌ಐವಿ ಸೋಂಕಿತರಲ್ಲಿನ ಎಚ್‌ಐವಿ ವೈರಾಣುಗಳನ್ನು ಗಣನೀಯ ಮಟ್ಟದಲ್ಲಿ ಇಳಿಕೆ ಮಾಡಲು ಸಹಾಯವಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ವೈರಾಣುಗಳನ್ನು ನಾಶಪಡಿಸಲು ಪ್ರಾಯಶಃ ಇದರಿಂದ ಸಾಧ್ಯವಿದೆ. ಈ ತಂತ್ರಗಾರಿಕೆ ಭವಿಷ್ಯದಲ್ಲಿ ಮತ್ತಷ್ಟು ಹೊಸ ವೈದ್ಯಕೀಯ ತಂತ್ರಗಾರಿಕೆಗಳ ಆವಿಷ್ಕಾರಕ್ಕೆ ನಾಂದಿ ಹಾಡಬಹುದು.
– ಡಾ. ಜೋಸ್‌ಲೀನ್ ಕಿಮ್,
ಸಹಾಯಕ ಪ್ರಾಧ್ಯಾಪಕ, ಕ್ಯಾಲಿಫೋರ್ನಿಯಾ ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.