ಚೆಸ್ ಆಟದ ವೇಳೆ ಬಾಲಕನ ಬೆರಳುಗಳನ್ನು ಮುರಿದ ರೋಬೋಟ್
Team Udayavani, Jul 26, 2022, 11:32 AM IST
ಮಾಸ್ಕೋ: ಇತ್ತೀಚೆಗೆ ನಡೆದ ಮಾಸ್ಕೋ ಚೆಸ್ ಓಪನ್ ಪಂದ್ಯಾವಳಿಯಲ್ಲಿ ಚೆಸ್ ಆಡುತ್ತಿದ್ದ ರೋಬೋಟ್, ತನ್ನ ಎದುರಾಳಿ 7 ವರ್ಷದ ಮಗುವಿನ ಬೆರಳನ್ನು ಮುರಿದಿರುವ ವಿಲಕ್ಷಣ ಘಟನೆ ನಡೆದಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿದೆ.
ಈ ಹಿಂದೆ ರೋಬೋಟ್ ಹಲವು ಪಂದ್ಯಾವಳಿಗಳನ್ನು ಆಡಿದೆ. ಯಾವುದೇ ಅವಘಡಗಳು ಸಂಭವಿಸಿಲ್ಲ. ಆದರೆ 7 ವರ್ಷದ ಮಗುವಿನ ಬೆರಳನ್ನು ಮುರಿದಿರುಗುವ ಘಟನೆ ಕೆಟ್ಟ ಬೆಳವಣಿಗೆಯಾಗಿದೆ” ಎಂದು ಮಾಸ್ಕೋ ಚೆಸ್ ಫೆಡರೇಶನ್ ಅಧ್ಯಕ್ಷ ಸೆರ್ಗೆಯ್ ಲಾಜರೆವ್ ತಿಳಿಸಿದ್ದಾರೆ.
ಚೆಸ್ ಪಂದ್ಯಾವಳಿಯ ವೇಳೆ ರೋಬೋಟ್ ನ ಕಾರ್ಯ ನಿರ್ವಹಣೆಗೆ ನಿರ್ದಿಷ್ಟ ಅವಧಿಯನ್ನು ನೀಡಲಾಗುತ್ತದೆ. ಆದರೆ ಈ ಪಂದ್ಯಾವಳಿಯಲ್ಲಿ ನಿರ್ದಿಷ್ಟ ಸಮಯವನ್ನು ನಿಗದಿ ಪಡಿಸಿರಲಿಲ್ಲ. ಹಾಗಾಗಿ ಸ್ಪರ್ಧಿಯು ರೋಬೋಟ್ ಪ್ರತಿಕ್ರಿಯೆಗೆ ಕಾಯದೇ ಆಡಲು ಮಂದಾಗಿದ್ದಾನೆ. ಈ ವೇಳೆ ರೋಬೋಟ್ ಬಾಲಕನ ಬೆರಳುಗಳನ್ನು ಮುರಿದಿದೆ. ಈ ಕುರಿತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಆಯೋಜಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಪಬ್ ನಲ್ಲಿ ವಿದ್ಯಾರ್ಥಿಗಳ ಫೇರ್ ವೆಲ್ ಪಾರ್ಟಿ; ಸಂಘಟನೆ ಕಾರ್ಯಕರ್ತರಿಂದ ದಾಳಿ
ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ರೋಬೋಟ್ ತನ್ನ ಎದುರಾಳಿಯ ಬೆರಳುಗಳನ್ನು ಮುರಿಯುವ ದೃಶ್ಯ ಸೆರೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.