ಸಾವಿನಂಚಿನಲ್ಲಿದ್ದ ಮನುಷ್ಯನಿಗೆ ರೋಬೋ ರೂಪ!
Team Udayavani, Oct 16, 2019, 5:40 AM IST
ಲಂಡನ್: ರೋಬೋಗಳು ಮನುಷ್ಯ ರಂತೆ ವರ್ತಿಸುವ ಹಾಗೂ ಕೆಲಸ ಮಾಡುವ ಪ್ರಯತ್ನ ಮಾಡುತ್ತಿ ರುವು ದನ್ನು ನಾವು ನೋಡಿದ್ದೇವೆ. ಆದರೆ, ಮನುಷ್ಯರೇ ರೋಬೋ ಆದರೆ! ಇಂಥ ದ್ದೊಂದು ಕಲ್ಪನೆ ಹೊಸ ದೇನಲ್ಲ.
ಇದನ್ನು ಸೈಬೋರ್ಗ್ ಎಂದು ಕರೆಯಲಾಗಿದ್ದು, ತಾನೊಬ್ಬ ಸಂಪೂರ್ಣ ಸೈಬೋರ್ಗ್ ಆಗುವ ಕೊನೆಯ ಹಂತದಲ್ಲಿದ್ದೇನೆ ಎಂದು ಇಂಗ್ಲೆಂಡ್‌ನ 61 ವರ್ಷದ ವಿಜ್ಞಾನಿ ಪೀಟರ್ ಸ್ಕಾರ್ಟ್ ಮಾರ್ಗನ್ ಹೇಳಿ ಕೊಂಡಿದ್ದಾರೆ.
ಇವರು 2 ವರ್ಷಗಳಿಂದ ಮೋಟಾರ್ ನ್ಯೂರಾನ್ ರೋಗದಿಂದ ಬಳಲುತ್ತಿ ದ್ದಾರೆ. ಈ ರೋಗ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು ಅವರು ಹೆಚ್ಚು ಕಾಲ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ತನ್ನನ್ನು ಸಂಪೂರ್ಣವಾಗಿ ರೋಬೋ ಆಗಿ ರೂಪಾಂತರಗೊಳಿಸುವ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದಾರೆ. ತನ್ನ ಇಡೀ ದೇಹವೇ ಯಾಂತ್ರಿಕವಾಗಿ ಕೆಲಸ ಮಾಡುವಂತೆ ಅವರು ರೂಪಾಂತರಗೊಂಡಿದ್ದಾರೆ. ಎಲೆಕ್ಟ್ರಿಕ್ ವೀಲ್‌ಚೇರ್ ಅನ್ನು ಅಭಿವೃದ್ಧಿಪಡಿಸಿ, ಇದರಲ್ಲಿ ಪೀಟರ್ ಕುಳಿತುಕೊಳ್ಳಬಹುದು, ಮಲಗಬಹುದು ಅಥವಾ ಎದ್ದು ನಿಲ್ಲಲೂ ಬಹುದು. ಇದಕ್ಕೆ ಚಕ್ರಗಳು ಇರುವುದರಿಂದ ಚಲಿಸಬಹುದು. ಅಷ್ಟೇ ಅಲ್ಲ, ಧ್ವನಿ ಪೆಟ್ಟಿಗೆಯನ್ನು ತೆಗೆದು, ತನ್ನ ಧ್ವನಿಯನ್ನು ಕಂಪ್ಯೂಟರಿಗೆ ಅಳವಡಿಸಿದ್ದಾರೆ. ನೈಸರ್ಗಿಕ ಧ್ವನಿಯನ್ನು ಬಳಸಿದರೆ ಎಂಜಲು ಶ್ವಾಸಕೋಶಕ್ಕೆ ಹೋಗಿ ಸಿಕ್ಕಿ ಹಾಕಿಕೊಂಡು ತೊಂದರೆಯಾಗಬಾರದು ಎಂಬ ಕಾರಣಕ್ಕೆ ಧ್ವನಿಪೆಟ್ಟಿಗೆಯನ್ನೇ ತೆಗೆದು ಹಾಕಿದ್ದಾರೆ.
ಜಠರಕ್ಕೇ ನೇರ ನಳಿಕೆ: ಹಾಗಾದರೆ ಆಹಾರ ಸೇವನೆ ಹೇಗೆ ಎಂದು ನೀವು ಪ್ರಶಿ°ಸಬಹುದು. ಅದಕ್ಕೂ ಅವರು ಪರಿಹಾರ ಕಂಡುಕೊಂಡಿದ್ದಾರೆ. ಬಾಯಿಗೆ ಆಹಾರ ಹಾಕುವ ಪ್ರಸಂಗವೇ ಇಲ್ಲ. ನೇರ ಜಠರಕ್ಕೆ ನಳಿಕೆ ಜೋಡಿಸಲಾಗಿದೆ. ಮೂತ್ರ ಹಾಗೂ ಮಲ ವಿಸರ್ಜನೆಗೆ ಪ್ರತ್ಯೇಕ ಪೈಪ್ ಅಳವಡಿಸಲಾಗಿದ್ದು, ಅದರಿಂದ ವಿಸರ್ಜನೆಯಾಗುತ್ತದೆ.
ಕಣ್ಣಿನಲ್ಲೇ ಎಲ್ಲ: ಮುಖವನ್ನು ಅವರು ಸರ್ಜರಿ ಮಾಡಿಸಿಕೊಂಡು, ಯುವಕನಾಗಿದ್ದಾಗಿನ ಮುಖವನ್ನು ಹೋಲುವಂತೆ ಮಾಡಿಕೊಂಡಿದ್ದಾರೆ. ಆರ್ಟಿಫಿಶಿ ಯಲ್ ಇಂಟಲಿಜೆನ್ಸ್ ಸಹಾಯದಿಂದ ಇದು ಸುಲಭವಾಗಿದೆ. ಕಂಪ್ಯೂಟರುಗಳನ್ನು ನಿಯಂತ್ರಿಸಲು ಇವರ ಕಣ್ಣಿನ ಚಲನೆಯೇ ಸಾಕು. ಇದಕ್ಕಾಗಿ ಲೇಸರ್ ಸರ್ಜರಿ ಮಾಡಿಸಿಕೊಂಡಿದ್ದಾರೆ.
ನಾನು ಸಾಯುತ್ತಿಲ್ಲ, ರೂಪಾಂತರಗೊಳ್ಳುತ್ತಿದ್ದೇನೆ
ತನ್ನ ಒಟ್ಟು ರೂಪಾಂತರದ ಬಗ್ಗೆ ಪೀಟರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನಾನು ಸಾಯುತ್ತಿಲ್ಲ. ಬದಲಿಗೆ ರೂಪಾಂತರಗೊಳ್ಳುತ್ತಿದ್ದೇನೆ. ಇದೆಲ್ಲವೂ ವಿಜ್ಞಾನದಿಂದ ಸಾಧ್ಯವಾಗಿದೆ’ ಎಂದು ಅವರು ಹೇಳಿದ್ದಾರೆ. ನನ್ನ ಇಡೀ ದೇಹ ಮತ್ತು ಮಿದುಳು ಬದಲಾಗಲಿದೆ. ಈ ಜಗತ್ತಿನೊಂದಿಗೆ ನನ್ನ ಪ್ರತಿ ಸಂವಹನವೂ ಯಾಂತ್ರಿಕವಾಗಲಿದೆ. ಇನ್ನು ನಾನು ಪೀಟರ್ 2.0 ಆಗಲಿದ್ದೇನೆ ಎಂದು ಅವರು ಟ್ವೀಟ್ ಮಾಡಿ ದ್ದಾರೆ. ವಿಶ್ವದ ಮೊದಲ ಸಂಪೂರ್ಣ ಸೈಬೋರ್ಗ್ ಆಗುವ ಕೊನೆಯ ಚರಣದಲ್ಲಿ ನಾನಿದ್ದೇನೆ ಎಂದು ಅ. 10ರಂದು ಕೊನೆಯದಾಗಿ ವೀಡಿಯೋವೊಂದರಲ್ಲಿ ಅವರು ಹೇಳಿದ್ದರು. ಜಠರಕ್ಕೆ ನಳಿಕೆ ಅಳವಡಿಸುವ ಪ್ರಕ್ರಿಯೆ ಅತ್ಯಂತ ಅಪಾಯ ಕಾರಿಯಾಗಿತ್ತು. ಅದರಲ್ಲೂ ಈ ರೋಗ ಹೊಂದಿರುವವರು ಈ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಕಷ್ಟ. ಆದರೆ ಈ ಸ್ಥಿತಿಯಿಂದಲೇ ನಾನು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಲು ಸಾಧ್ಯವಾಯಿತು. ನಾನು ಕೇವಲ ಬದುಕುಳಿಯುವುದರಲ್ಲಿ ನಂಬಿಕೆ ಇಟ್ಟವನಲ್ಲ ಎಂದೂ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.