ಅಮೆರಿಕದ ಕಣ್ಗಾವಲು ತಪ್ಪಿಸಿಕೊಂಡ ರೂಪಾಯಿ
Team Udayavani, May 30, 2019, 6:00 AM IST
ವಾಷಿಂಗ್ಟನ್: ಭಾರೀ ಮೌಲ್ಯ ಕುಸಿತದ ಅನಂತರ ಚೇತರಿಸಿಕೊಳ್ಳುತ್ತಿರುವ ರೂಪಾಯಿಯ ಮೇಲೆ ಅಮೆರಿಕ ಈಗ ಕಣ್ಗಾವಲು ಮಾಡುವುದನ್ನು ಕೈಬಿಟ್ಟಿದೆ. ಕಳೆದ ಮಾರ್ಚ್ನಲ್ಲಿ ಅಮೆರಿಕದ ಕರೆನ್ಸಿ ಕಣ್ಗಾವಲು ಪಟ್ಟಿಗೆ ಸೇರಿದ್ದ ರೂಪಾಯಿ ಸತತ ಎರಡು ಬಾರಿಯೂ ವಿಚಕ್ಷಣೆಯಲ್ಲಿ ಸುಧಾರಣೆ ಕಂಡಿದ್ದರಿಂದ ಈ ಪಟ್ಟಿಯಿಂದ ಕೈಬಿಡಲಾಗಿದೆ. ಈ ಕಣ್ಗಾವಲು ಪಟ್ಟಿಗೆ ಸೇರಿದ ಕರೆನ್ಸಿಯ ಮೌಲ್ಯವನ್ನು ಸರಕಾರ ಹಾಗೂ ನಿಯಂತ್ರಕಗಳು ವಿಪರೀತ ಬದಲಿಸುತ್ತವೆ ಎಂಬ ಆರೋಪ ಇರುತ್ತದೆ.
ಅಷ್ಟೇ ಅಲ್ಲ, ಇದರ ಖರೀದಿ ಮತ್ತು ಮಾರಾಟ ಪ್ರಮಾಣವೂ ಸಂಶಯಾಸ್ಪದಕ್ಕೆ ಕಾರಣವಾಗುವ ರೀತಿಯಲ್ಲಿ ಇರುತ್ತದೆ. ಆದರೆ ಸತತ ಎರಡು ಬಾರಿಯೂ ಅಮೆರಿಕ ಕರೆನ್ಸಿ ಕಣ್ಗಾವಲು ಸಮಿತಿಯ ವರದಿಯಲ್ಲಿ ಧನಾತ್ಮಕ ಪ್ರಗತಿ ಸಾಧಿಸಿದರೆ ಅವುಗಳನ್ನು ಪಟ್ಟಿಯಿಂದ ಕೈಬಿಡಲಾ ಗುತ್ತದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನಿಯಮಕ್ಕೆ ಪೂರಕವಾಗಿಯೇ ಭಾರತವು ವಿದೇಶಿ ವಿನಿಮಯ ಮೀ ಸಲು ಹೊಂದಿದೆ. ಅಲ್ಲದೆ, ಜಿಡಿಪಿಯ ಶೇ. 1.7ರಷ್ಟು ವಿದೇಶಿ ವಿನಿಮಯ ಮಾರಾಟ ಮಾಡಿದೆ. ಹೀಗಾಗಿ ದೇಶದ ಕರೆನ್ಸಿಯನ್ನು ಸ್ಥಿರ ಎಂಬುದಾಗಿ ಅಮೆರಿಕ ಪರಿಗಣಿಸಿದೆ. ಭಾರತದ ಜೊತೆಗೆ ಸ್ವಿಜರ್ಲೆಂಡ್ ಕರೆನ್ಸಿಯನ್ನೂ ಪಟ್ಟಿಯಿಂದ ಕೈಬಿಡಲಾಗಿದೆ. ಆದರೆ ಚೀನ, ಜಪಾನ್, ದಕ್ಷಿಣ ಕೊರಿಯಾ, ಜರ್ಮನಿ, ಇಟಲಿ, ಐರ್ಲೆಂಡ್, ಸಿಂಗಾಪುರ, ಮಲೇಷ್ಯಾ ಮತ್ತು ವಿಯೆಟ್ನಾಂ ಇನ್ನೂ ಈ ಪಟ್ಟಿಯಲ್ಲಿ ಮುಂದುವರಿದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.