ರಷ್ಯಾ: 2015ರ ಬಳಿಕ ಜನಿಸಿದವವರಿಗೆ ಸಿಗರೇಟ್ ಬ್ಯಾನ್
Team Udayavani, Jan 13, 2017, 3:45 AM IST
ಮಾಸ್ಕೋ: ತಂಬಾಕು ಬಳಕೆ ನಿಷೇಧಿಸಲು ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ರಷ್ಯಾದ ವ್ಲಾಡಿಮಿರ್ ಪುಟಿನ್ ನೇತೃತ್ವದ ಸರ್ಕಾರ 2015ರ ಬಳಿಕ ಜನಿಸಿದ ಯಾವುದೇ ವ್ಯಕ್ತಿಗೆ ಸಿಗರೇಟ್ ಮಾರುವಂತಿಲ್ಲ ಎಂದು ಕಾನೂನು ರೂಪಿಸಲು ಚಿಂತಿಸಿದೆ.
ಈ ಕುರಿತು ರಷ್ಯಾದ ಆರೋಗ್ಯ ಸಚಿವಾಲಯವು ಪ್ರಸ್ತಾವನೆಯನ್ನು ರೂಪಿಸಿದೆ. ಆದರೆ ಈ ಯೋಜನೆ ತಕ್ಷಣಕ್ಕೆ ಜಾರಿಗೆ ಬರುವುದಿಲ್ಲ. ಹೊಸ ಕಾಯ್ದೆ 2033ಕ್ಕೆ ಜಾರಿಗೆ ಬರಲಿದೆ. ಸದ್ಯ 18 ವರ್ಷ ಪೂರೈಸದ ಯಾವುದೇ ವ್ಯಕ್ತಿಗೆ ಸಿಗರೇಟ್ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನ ಮಾರುವಂತಿಲ್ಲ ಎಂಬ ನಿಯಮ ಇದೆ. ಜೊತೆಗೆ ಇದೀಗ ರೂಪಿಸಲು ಉದ್ದೇಶಿಸಿರುವ ನಿಯಮದ ಅನ್ವಯ 2015ರಲ್ಲಿ ಹುಟ್ಟಿದ ಮಗುವಿಗೆ 2033ರಲ್ಲಿ 18 ವರ್ಷ ತುಂಬುತ್ತದೆ. ಆಗ ಅ ವ್ಯಕ್ತಿಗೆ ಯಾರು ಕೂಡ ಸಿಗರೆಟ್ ಅನ್ನು ಮಾರಾಟ ಮಾಡುವಂತಿಲ್ಲ. ಇದು ಯಶಸ್ವಿಯಾದರೆ ವಿಶ್ವದಲ್ಲಿ ರಷ್ಯಾ ತಂಬಾಕು ಅನ್ನು ಸಂಪೂರ್ಣವಾಗಿ ನಿಷೇಧಿಸಿದ ಮೊದಲ ದೇಶ ಎಂಬ ಹೆಗ್ಗಳಿಗೆ ಪಾತ್ರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.