ರಷ್ಯಾದ ವಿಕ್ಟರಿ ಪರೇಡ್ನಲ್ಲಿ ಭಾರತೀಯ ಯೋಧರ ಹೆಜ್ಜೆ
Team Udayavani, Jun 25, 2020, 9:25 AM IST
ಮಾಸ್ಕೋ: 2ನೇ ಮಹಾಯುದ್ಧ ವಿಜಯದ ಹಿನ್ನೆಲೆಯಲ್ಲಿ ರಷ್ಯಾ ಆಯೋಜಿಸಿದ್ದ 75ನೇ ವಾರ್ಷಿಕ ಸಂಭ್ರಮದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಲ್ಗೊಂಡಿದ್ದವು. ಬುಧವಾರ ನಡೆದ ವಿಜಯ ದಿನದ ಪರೇಡ್ನಲ್ಲಿ ಭಾರತೀಯ ಸೇನೆಯ 75 ವೀರಯೋಧರ ಶಿಸ್ತುಬದ್ಧ ಪಥಸಂಚಲನ ಆಕರ್ಷಕವಾಗಿತ್ತು.
ಮಾಸ್ಕೋದ ರೆಡ್ ಸ್ಕ್ವೇರ್ನಲ್ಲಿ ನಡೆದ ವಿಕ್ಟರಿ ಡೇ ಪರೇಡ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಕ್ಷಿಯಾಗಿದ್ದರು. 2ನೇ ವಿಶ್ವಯುದ್ಧದಲ್ಲಿ ರಷ್ಯಾ ಮತ್ತು ಮಿತ್ರ ರಾಷ್ಟ್ರಗಳ ಯೋಧರು ಪ್ರದರ್ಶಿಸಿದ್ದ ವೀರತ್ವ ಮತ್ತು ತ್ಯಾಗವನ್ನು ಈ ವೇಳೆ ಗಣ್ಯರು ಸ್ಮರಿಸಿದರು.
ಪರೇಡ್ಗೂ ಮೊದಲು ಸಿಂಗ್, “1941- 45ರ ವಿಶ್ವಯುದ್ಧದಲ್ಲಿ 75ನೇ ವಿಜಯೋತ್ಸವದ ನೆನಪಿಗಾಗಿ ವಿಕ್ಟರಿ ಪರೇಡ್ ಆಯೋಜಿಸಲಾಗಿದೆ. ಈ ಮೆರವಣಿಗೆಯಲ್ಲಿ ಭಾರತೀಯ ಸಶಸ್ತ್ರ ಪಡೆಯ ಮೂರೂ ದಳಗಳೂ ಭಾಗವಹಿಸಿವೆ. ಇದು ಭಾರತಕ್ಕೆ ಹೆಮ್ಮೆಯ ಸಂಗತಿ’ ಎಂದು ಟ್ವಿಟ್ಟರಿನಲ್ಲಿ ಹರ್ಷ ಹಂಚಿಕೊಂಡಿದ್ದರು. 2ನೇ ವಿಶ್ವಯುದ್ಧದಲ್ಲಿ ಜರ್ಮನಿಯ ಸರ್ವಾ ಧಿಕಾರಿ ಹಿಟ್ಲರ್ನನ್ನು ಹಿಮ್ಮೆಟ್ಟಿಸಿದ ನೆನಪಿಗಾಗಿ ರಷ್ಯಾ ಪ್ರತಿವರ್ಷ ಮೇ 9ರಂದು ವಿಕ್ಟರಿ ಪರೇಡ್ ಆಯೋಜಿಸುತ್ತದೆ. ಕೊರೊನಾದಿಂದಾಗಿ ಈ ವರ್ಷ ಪರೇಡ್ ತಡವಾಗಿ ಆಯೋಜಿಸಲ್ಪಟ್ಟಿದೆ. ರಷ್ಯಾದ 13,000 ಸೈನಿಕರು ಪರೇಡ್ನಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.