ರಷ್ಯಾ ಅಧ್ಯಕ್ಷರಿಗೆ ಈಗ ನಿಲ್ಲಲೂ ಕಷ್ಟ? ಪುತಿನ್ ಆರೋಗ್ಯದ ಬಗ್ಗೆ ಮತ್ತೊಂದು ವರದಿ
Team Udayavani, Jun 16, 2022, 6:45 AM IST
ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರ ಆರೋಗ್ಯದ ಬಗ್ಗೆ ಪಾಶ್ಚಿಮಾತ್ಯ ಮತ್ತು ಐರೋಪ್ಯ ಒಕ್ಕೂಟದ ಕೆಲವು ಮಾಧ್ಯಮಗಳಲ್ಲಿ ಸಂಶ ಯಾತ್ಮಕವಾದ ವರದಿಗಳು ಪ್ರಕಟವಾಗುತ್ತಿವೆ.
ಅದಕ್ಕೆ ಸೇರ್ಪಡೆ ಎಂಬಂತೆ ವರದಿಯೊಂದು ಪ್ರಕಟ ವಾಗಿದೆ. ಅದರ ಪ್ರಕಾರ ಪುತಿನ್ ಅವರಿಗೆ ನಿಂತುಕೊಂಡು ಮಾತನಾಡಲು ಅಸಾಧ್ಯವಾಗುತ್ತಿದೆ. ಕಳೆದ ರವಿವಾರ (ಜೂ.12) ನಡೆದಿದ್ದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ವೀಡಿಯೋದಲ್ಲಿ ಭಾಷಣ ಮಾಡುತ್ತಿರಬೇಕಾದರೆ, ಅವರ ಕಾಲುಗಳು ನಡುಗುತ್ತಿದ್ದದ್ದು ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಪುತಿನ್ ಅವರಿಗೆ ಹೆಚ್ಚಿನ ಸಮಯದ ವರೆಗೆ ನಿಂತುಕೊಂಡು ಭಾಷಣ ಮಾಡುವ ಕಾರ್ಯಕ್ರಮಗಳಲ್ಲಿ ಮಾತನಾಡುವುದು ಬೇಡ ಎಂದು ವೈದ್ಯರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಆ ವರದಿಯಲ್ಲಿ ಉಲ್ಲೇಖೀ ಸಲಾಗಿದೆ.
ರಷ್ಯಾ ಸಂಸತ್ ಕ್ರೆಮ್ಲಿನ್ ವಿರೋಧಿಗಳು ಹೊಂದಿರುವ ಟೆಲಿಗ್ರಾಂ ಚಾನೆಲ್ ಮೂಲಕ ಬಂದಿರುವ ವೀಡಿಯೋ ಆಧರಿಸಿ ಈ ಅಂಶವನ್ನು ವರದಿ ಮಾಡಲಾಗಿದೆ. ಫೆ.24ರ ಬಳಿಕ ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾ ಅಧ್ಯಕ್ಷರ ಆರೋಗ್ಯದ ಬಗ್ಗೆ ಹಲವು ರೀತಿಯ ವರದಿಗಳು ಪ್ರಕಟವಾಗಿದೆ. ಈ ಪೈಕಿ ಒಂದರಲ್ಲಿ ಪುತಿನ್ ಅವರಿಗೆ ಈಗಾಗಲೇ ಕ್ಯಾನ್ಸರ್ ಇದೆ ಎಂದೂ ಹೇಳಿಕೊಳ್ಳಲಾಗಿತ್ತು. ಆದರೆ ಈ ಬಗ್ಗೆ ರಷ್ಯಾ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.