![Arrest](https://www.udayavani.com/wp-content/uploads/2025/02/Arrest-6-415x249.jpg)
![Arrest](https://www.udayavani.com/wp-content/uploads/2025/02/Arrest-6-415x249.jpg)
Team Udayavani, Mar 11, 2022, 5:01 PM IST
ಕೀವ್: ಉಕ್ರೇನಿಯನ್ ಬಂದರು ನಗರವಾದ ಮರಿಯು ಪೊಲ್‌ನಲ್ಲಿರುವ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆ ಮೇಲೆ ಬುಧವಾರ ರಷ್ಯಾ ನಡೆಸಿರುವ ವೈಮಾನಿಕ ದಾಳಿ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ದಾಳಿಯಲ್ಲಿ ಯಾವುದೇ ಮಕ್ಕಳಿಗೆ ಹಾನಿಯಾಗಿಲ್ಲವಾದರೂ 17ಮಂದಿ ಗಾಯಗೊಂಡಿದ್ದಾರೆ. ಆದರೆ, ಮಕ್ಕಳ ಆಸ್ಪತ್ರೆಯ ಮೇಲೆ ಕರುಣೆಯನ್ನೂ ತೋರದ ರಷ್ಯಾ, ಯುದ್ಧ ಅಪರಾಧಗಳನ್ನು ಮಾಡುತ್ತಿದೆ ಎಂದು ವಿಶ್ವದ ಅನೇಕ ನಾಯಕರು ಕಿಡಿಕಾರಿದ್ದಾರೆ. ಉಕ್ರೇನ್ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿರುವುದು ಯುದ್ಧಾಪರಾಧ ಎಂದು ಯುಕೆ ರಕ್ಷಣ ಸಚಿವ ಜೇಮ್ಸ್ ಹೆಪ್ಪಿ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ರಷ್ಯಾದ ಜನರಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
ಉಕ್ರೇನ್‌ನ ಮರಿಯು ಪೊಲ್‌ನಲ್ಲಿರುವ ಹೆರಿಗೆ ಆಸ್ಪತ್ರೆಯ ಮೇಲೆ ರಷ್ಯಾ ಯುದ್ಧ ವಿಮಾನಗಳು ದಾಳಿ ನಡೆಸಿದ್ದು ಒಂದು ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎನ್ನುವ ವರದಿ ಹಿನ್ನೆಲೆಯಲ್ಲಿ ಹೆಪ್ಪಿ ಈ ಹೇಳಿಕೆ ನೀಡಿದ್ದಾರೆ. ಇದು ಯುದ್ಧಾಪರಾಧ ಎಂದು ಸಾಬೀತುಪಡಿಸಲು ಪುರಾವೆಗಳನ್ನು ಸಂಗ್ರಹಿಸಬೇಕು. ಪುಟಿನ್ ನಡೆಸುತ್ತಿರುವುದು ಯುದ್ಧವಲ್ಲ. ಅವರು ತಮ್ಮ ಸೇನೆಯ
ಮೂಲಕ ಉಕ್ರೇನ್‌ನ ನಗರಗಳಿಗೆ ಮುತ್ತಿಗೆ ಹಾಕಿ, ದಾಳಿ ನಡೆಸುತ್ತಿದ್ದು ನಾಗರಿಕರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇದು ಸಂಪೂರ್ಣ ಹೇಯ ಕೃತ್ಯವಾಗಿದೆ ಎಂದಿದ್ದಾರೆ.
ಝೆಲೆನ್‌ಸ್ಕಿ ಖಂಡನೆ:
ಘಟನೆಯನ್ನು ಖಂಡಿಸಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಇದು ರಷ್ಯಾ ಸೇನೆ ನಡೆಸಿದ ದೌರ್ಜನ್ಯ ಎಂದು
ಕಿಡಿಕಾರಿದ್ದಾರೆ. ಅಲ್ಲದೆ ಟ್ವಿಟರ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ಆಸ್ಪತ್ರೆಯ ಕಿಟಕಿ, ಗೋಡೆಗಳು ಕಿತ್ತು ಹೋಗಿರುವ ದೃಶ್ಯಗಳಿವೆ.
ರಷ್ಯಾ ದಾಳಿಯಿಂದ ನಗರದ ಮಧ್ಯ ಭಾಗದಲ್ಲಿರುವ ಹೆರಿಗೆ ಆಸ್ಪತ್ರೆ ಸಂಪೂರ್ಣ ನಾಶವಾಗಿದೆ. ಇದರಲ್ಲಿ ಮಕ್ಕಳ ಘಟಕವೂ ಸೇರಿದೆ, ಆದರೆ ಎಂದು ಸ್ಥಳೀಯ ಅಧಿಕಾರಿ ಪಾವ್ಲೊ ಕಿರಿಲೆಂಕೊ ಹೇಳಿದ್ದಾರೆ. ಮರಿಯುಪೊಲ್ ನಗರವನ್ನು ರಷ್ಯಾ ಪಡೆಗಳು ಸುತ್ತುವರಿದಿದ್ದು ಕದನ ವಿರಾಮದ ಭರವಸೆಯ ಹೊರತಾಗಿಯೂ ನಗರದ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ ಎಂದವರು ದೂರಿದರು. ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಈ ದಾಳಿಯನ್ನು ಖಂಡಿಸಿದ್ದಾರೆ.
ರಷ್ಯಾದಲ್ಲಿ ಕಡ್ಡಾಯ ಮಿಲಿಟರಿ ಸೇವೆ: ಬಯಲಾದ ಸತ್ಯ!
ಮಾಸ್ಕೋ ಮೊದಲ ಬಾರಿಗೆ ಕಡ್ಡಾಯ ಮಿಲಿಟರಿ ಸೇವೆಯಿಂದ ತಮ್ಮ ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ತಾಯಂದಿರ ಆರೋಪದ ಬಳಿಕ ರಷ್ಯಾವು 19- 27 ವರ್ಷದ ಎಲ್ಲ ಪುರುಷರಿಗೂ ಕಡ್ಡಾಯವಾಗಿ 12 ತಿಂಗಳ ಮಿಲಿಟರಿ ಸೇವೆಯನ್ನು ಹೊಂದಿರುವುದು ಜಗಜ್ಜಾಹೀರವಾಗಿದೆ. ರಷ್ಯಾದ ಸೈನ್ಯವು ಉಕ್ರೇನ್ ವಿರುದ್ಧ ವಿಶೇಷ ಕಾರ್ಯಾಚರಣೆಗಾಗಿ ಸೈನಿಕರನ್ನು ನಿಯೋಜಿಸಿದೆ ಎನ್ನುವ ಉಕ್ರೇನ್‌ನ ಆರೋಪವನ್ನು ನಿರಾಕರಿಸಿದೆ. ಮೂರು ದಿನಗಳ ಹಿಂದೆಯಷ್ಟೇ ಈ ಆರೋಪವನ್ನು ವ್ಲಾದಿಮಿರ್ ಪುತಿನ್ ನಿರಾಕರಿಸಿದ್ದರು. ಎಲ್ಲ ಸೈನಿಕರು ಹೋರಾಟದಲ್ಲಿ ಭಾಗವಹಿಸುವುದಿಲ್ಲ.
ಹೆಚ್ಚುವರಿ ಸೇರ್ಪಡೆಯೂ ಇರುವುದಿಲ್ಲ. ವೃತ್ತಿಪರ ಸೈನಿಕರಷ್ಟೇ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದ್ದರು. ಉಕ್ರೇನಿಯನ್‌ನ ರಾಷ್ಟ್ರೀಯತಾವಾದಿಗಳು ಖಾರ್ಕಿವ್‌ನ ವಾಯವ್ಯದಲ್ಲಿರುವ ಝೋಲೋಚಿವ್‌ನ ಜನನಿಬಿಡ ಪ್ರದೇಶಕ್ಕೆ ಸುಮಾರು 80 ಟನ್ ಅಮೋನಿಯಾವನ್ನು ತಲುಪಿಸಿದರು. ರಾಷ್ಟ್ರೀಯವಾದಿಗಳು ರಾಸಾಯನಿಕ ದಾಳಿಯ ಸಮಯದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಅವರಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಇಂಟರ್ ಫ್ಯಾಕ್ಸ್ ವರದಿ ಮಾಡಿದೆ. ಆದರೆ ಈ ವರದಿಯನ್ನು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ಪಾಸ್ಕಿ ನಿರಾಕರಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.