![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 23, 2022, 7:00 AM IST
ಯುದ್ಧಭೀತಿಯಿಂದಾಗಿ ಉಕ್ರೇನ್ ಪ್ರಜೆಗಳು ಸುರಕ್ಷಿತ ಸ್ಥಳಕ್ಕೆ ಧಾವಿಸುತ್ತಿದ್ದಾರೆ.
ಮಾಸ್ಕೋ/ಕೀವ್: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧೋನ್ಮಾದ ತಣ್ಣಗಾಗ ಬಹುದು ಎಂಬ ಜಗತ್ತಿನ ಭಾವನೆ ಸುಳ್ಳಾಗಿದೆ. ಎರಡೂ ದೇಶಗಳ ನಡುವೆ ದೊಡ್ಡ ಮಟ್ಟದ ಸಂಘರ್ಷಕ್ಕೆ ರಷ್ಯಾ ಮುನ್ನುಡಿ ಬರೆದಿದೆ.
ಉಕ್ರೇನ್ ಮೇಲೆ ಆಕ್ರಮಣಗೈಯ್ಯಲು ತುದಿಗಾಲಲ್ಲಿ ನಿಂತಿದ್ದ ರಷ್ಯಾ ಸೋಮವಾರ ರಾತೋರಾತ್ರಿ ಆ ದೇಶದ 2 ಪ್ರದೇಶಗಳನ್ನು “ಸ್ವತಂತ್ರ’ ಎಂದು ಘೋಷಿಸುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ. ಅಷ್ಟೇ ಅಲ್ಲ, ಸ್ವತಂತ್ರವೆಂದು ಘೋಷಿಸಲಾದ ದೊನೆಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಿಗೆ ನುಗ್ಗುವಂತೆ ತನ್ನ ಪಡೆ ಗಳಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಆದೇಶಿಸಿ ದ್ದಾರೆ. ಅದರಂತೆ ರಷ್ಯಾದ ಸೇನೆಯು ಉಕ್ರೇನ್‌ನತ್ತ ನುಗ್ಗಿದೆ.
ಪುತಿನ್ ನಡೆಗೆ ಜಗತ್ತಿ ನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸೋಮವಾರ ರಾತ್ರಿ ವಿಶ್ವಸಂಸ್ಥೆಯ ಭದ್ರತ ಮಂಡಳಿ ತುರ್ತು ಸಭೆ ನಡೆಸಿ ಉಕ್ರೇನ್‌ನ ಪ್ರಾದೇಶಿಕ ಸಾರ್ವ ಭೌಮತೆಯನ್ನು ಉಲ್ಲಂಘಿಸಿರುವ ರಷ್ಯಾದ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.
ಪುತಿನ್‌ಗೆ ಪೂರ್ಣ ಅಧಿಕಾರ
ಉಕ್ರೇನ್ ಮೇಲೆ ದಾಳಿ ನಡೆಸುವ ನಿರ್ಣಯ ಕೈಗೊಳ್ಳಲು ಸಂಪೂರ್ಣ ಅಧಿಕಾರವನ್ನು ಅಧ್ಯಕ್ಷ ಪುತಿನ್‌ಗೆ ಸಂಸತ್ತು ನೀಡಿದ್ದು, ಯುದ್ಧಕ್ಕೆ ಮತ್ತಷ್ಟು ಸನಿಹವಾದಂತಾಗಿದೆ.
ದಿಗ್ಬಂಧನದ ಬಿಸಿ
ಮಂಗಳವಾರ ಪಾಶ್ಚಾತ್ಯ ರಾಷ್ಟ್ರಗಳು ಒಂದೊಂದಾಗಿ ರಷ್ಯಾಗೆ ಆರ್ಥಿಕ ದಿಗ್ಬಂಧನದ ಬಿಸಿ ಮುಟ್ಟಿಸಲು ಆರಂಭಿಸಿವೆ. ರಷ್ಯಾದ ನಡೆಯು ಅಂತಾರಾಷ್ಟ್ರೀಯ ಬದ್ಧತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ನಾವು ಈ ಸ್ಥಿತಿಯನ್ನು ನಿರೀಕ್ಷಿಸಿದ್ದೆವು. ಅದಕ್ಕೆ ತಕ್ಕ ಪ್ರತ್ಯುತ್ತರವನ್ನೂ ಸದ್ಯದಲ್ಲೇ ನೀಡಲಿದ್ದೇವೆ. ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ಹೇರಲು ಚಿಂತನೆ ನಡೆಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಬೈಡೆನ್ ಹೇಳಿದ್ದಾರೆ. ಜತೆಗೆ ದೊನೆಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಲ್ಲಿ ವ್ಯಾಪಾರ, ಹೂಡಿಕೆಗೆ ನಿರ್ಬಂಧ ಹೇರಿದ ಕಾರ್ಯಾದೇಶಕ್ಕೆ ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಇಂಗ್ಲೆಂಡ್, ಜರ್ಮನಿ ಕೂಡ ರಷ್ಯಾ ವಿರುದ್ಧ ನಿರ್ಬಂಧ ಹೇರಿವೆ.
ಯುದ್ಧ ತೀವ್ರಗೊಂಡರೆ, ಭಾರೀ ಪ್ರಮಾಣದ ಸಾವು-ನೋವು, ಇಂಧನ ಕೊರತೆ, ಜಾಗತಿಕ ಅರ್ಥವ್ಯವಸ್ಥೆಗೆ ದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿದೆ.
ನಾವು ಬಲಿಷ್ಠರಾಗಬೇಕು: ಮೋದಿ
ಉತ್ತರಪ್ರದೇಶದ ಬಹ್ರೈಚ್‌ನಲ್ಲಿ ಮಂಗಳವಾರ ಚುನಾವಣ ರ್‍ಯಾಲಿ ನಡೆಸಿದ ಪ್ರಧಾನಿ ಮೋದಿ ಅವರು ಉಕ್ರೇನ್-ರಷ್ಯಾ ಬಿಕ್ಕಟ್ಟನ್ನು ಪ್ರಸ್ತಾವಿಸಿದ್ದಾರೆ. ಜಗತ್ತು ಈಗ ಪ್ರಕ್ಷುಬ್ಧವಾಗಿದೆ. ಬೇರೆ ಬೇರೆ ದೇಶಗಳಲ್ಲಿ ಏನೇನಾಗುತ್ತಿದೆ ಎಂಬುದನ್ನು ನೀವು ನೋಡುತ್ತಿರಬಹುದು. ಇಂತಹ ಸ್ಥಿತಿಯಲ್ಲಿ, ಭಾರತವು ತನಗಾಗಿ ಮತ್ತು ಇಡೀ ಮನುಕುಲಕ್ಕಾಗಿ ಬಲಿಷ್ಠವಾಗಬೇಕಾದ ಅಗತ್ಯವಿದೆ. ನೀವು ನೀಡುವ ಒಂದೊಂದು ಮತವೂ ಭಾರತವನ್ನು ಬಲಿಷ್ಠಗೊಳಿಸಲಿದೆ ಎಂದು ಮೋದಿ ಹೇಳಿದ್ದಾರೆ.
ದಿಗ್ಬಂಧನದ ಸರದಿ
-ರಷ್ಯಾದಿಂದ ಸ್ವತಂತ್ರಗೊಂಡ ಉಕ್ರೇನ್‌ನ ಭಾಗಗಳಲ್ಲಿ ವ್ಯಾಪಾರ, ಹೂಡಿಕೆಗೆ ನಿರ್ಬಂಧ ಹೇರಿದ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಹಿ
-ರಷ್ಯಾದ 5 ಬ್ಯಾಂಕ್‌ಗಳು ಮತ್ತು 3 ಶ್ರೀಮಂತ ವ್ಯಕ್ತಿಗಳ ವಿರುದ್ಧ ಮೊದಲ ಸುತ್ತಿನ ಆರ್ಥಿಕ ದಿಗ್ಬಂಧನ ಹೇರಿದ ಇಂಗ್ಲೆಂಡ್
-ರಷ್ಯಾ ಮತ್ತು ಜರ್ಮನಿಯನ್ನು ಸಂಪರ್ಕಿ ಸುವ ನಾರ್ಡ್ ಸ್ಟ್ರೀಮ್ 2 ಎಂಬ 750 ಮೈಲು ಉದ್ದದ ಪೈಪ್ ಲೈನ್‌ಗೆ ಪ್ರಮಾಣೀಕರಣ ನೀಡುವು ದಿಲ್ಲ ಎಂದು ಜರ್ಮನಿ ಘೋಷಣೆ
ರಷ್ಯಾ-ಉಕ್ರೇನ್ ತಮ್ಮ ನಡುವಣ ಬಿಕ್ಕಟ್ಟನ್ನು ಮಾತುಕತೆ ಮೂಲಕವೇ ಬಗೆಹರಿಸಿ ಕೊಳ್ಳಬೇಕು. ಭಾರತವು ಯಾವತ್ತೂ ಶಾಂತಿಯನ್ನೇ ಬಯಸುತ್ತದೆ.
– ರಾಜನಾಥ್ ಸಿಂಗ್,
ರಕ್ಷಣ ಸಚಿವ
ಶಾಂತಿ ಸ್ಥಾಪಿಸುವ ಪ್ರಯತ್ನವೆಲ್ಲವನ್ನೂ ರಷ್ಯಾ ನಾಶಪಡಿಸಿತು. ಹಾಗೆಂದು ನಾವು ಯಾರಿಗೂ ಯಾವು ದಕ್ಕೂ ಹೆದರುವುದಿಲ್ಲ. ನಾವು ಯಾರಿಗೂ ಏನನ್ನೂ ಬಾಕಿಯೂ ಉಳಿಸಿಕೊಂಡಿಲ್ಲ. ನಾವು ನಮ್ಮ ನೆಲವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ.
– ವೋಲ್ಡಿಮಿರ್ ಝೆಲೆನ್‌ಸ್ಕಿ,
ಉಕ್ರೇನ್ ಅಧ್ಯಕ್ಷ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.