ನಿಮ್ಮನ್ನೂ ನಾಶ ಮಾಡಿ ಬಿಡುತ್ತೇವೆ : ಪಾಶ್ಚಾತ್ಯ ರಾಷ್ಟ್ರಗಳಿಗೆ ಪುತಿನ್ ಎಚ್ಚರಿಕೆ
Team Udayavani, Feb 25, 2022, 7:10 AM IST
ಮಾಸ್ಕೋ: “ನಮ್ಮ ತಂಟೆಗೆ ಬಂದರೆ ಎಚ್ಚರ. ನಮ್ಮ ಕಾರ್ಯ ಕ್ಷೇತ್ರದಲ್ಲಿ ಮೂಗು ತೂರಿಸಲು ಬಂದರೆ ಹಿಂದೆಂದೂ ಅನುಭವಾ ಗದಂಥ, ನೆನಪಿನಲ್ಲಿ ಉಳಿಯುವಂತೆ ಆಘಾತ ನೀಡುತ್ತೇವೆ. ಉಕ್ರೇನ್‌ನ ಪೂರ್ವಭಾಗದಿಂದ ನಮ್ಮ ಸೇನೆ ಕೂಡಲೇ ದಾಳಿ ಮಾಡಲು, ನಿರ್ಧರಿಸಿ ಆದೇಶಿಸಿದ್ದೇನೆ’
ಹೀಗೆಂದು ಉಗ್ರ ಎಚ್ಚರಿಕೆ ನೀಡಿದ್ದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್. ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ 8.30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಪುತಿನ್ ಉಕ್ರೇನ್‌ನಿಂದ ರಷ್ಯಾಕ್ಕೆ ಬಾರೀ ಪ್ರಮಾಣದ ಬೆದರಿಕೆ ಇದೆ. ಹೀಗಾಗಿ ಸೇನಾ ಕಾರ್ಯಾಚರಣೆ ನಡೆಸದೆ ಗತ್ಯಂತರವಿಲ್ಲ. ಉಕ್ರೇನ್‌ನ ನಾಗರಿಕರ ಜೀವ ಹಾನಿ ಮಾಡುವುದು ಉದ್ದೇಶವಲ್ಲ ಎಂದು ಹೇಳಿಕೊಂಡ ಅವರು, ಆ ದೇಶದ ಸೈನಿಕರ ಶಸ್ತ್ರತ್ಯಾಗವೇ ನಮ್ಮ ಗುರಿ ಎಂದು ಘೋಷಿಸಿದ್ದರು.
ಉಕ್ರೇನ್‌ನ ಪೂರ್ವ ಭಾಗದಲ್ಲಿರುವ ಪ್ರತ್ಯೇಕತಾವಾದಿಗಳು ನಮ್ಮ ದೇಶದಿಂದ ಸೇನಾ ನೆರವು ಕೋರಿದ್ದಾರೆ. ಅವರಿಗೆ ನೆರವಾ ಗುವುದು ಕರ್ತವ್ಯ ಎಂದು ಭಾವಿಸಿದ್ದೇನೆ. ಇತರ ದೇಶಗಳು ಪ್ರತ್ಯೇಕತಾವಾದಿಗಳಿಗೆ ನೆರವು ನೀಡುವ ನಿರ್ಧಾರಕ್ಕೆ ಆಕ್ಷೇಪ ಮಾಡಿ, ಮಧ್ಯಪ್ರವೇಶ ಮಾಡಿದರೆ, ಆ ರಾಷ್ಟ್ರಗಳಿಗೆ ಹಿಂದೆಂದೂ ಅನುಭವ ಆಗದ, ನೆನಪಿನಲ್ಲಿ ಉಳಿಯುವಂಥ ಪ್ರತಿರೋಧ ರಷ್ಯಾ ಕಡೆಯಿಂದ ವ್ಯಕ್ತವಾಗಲಿದೆ ಎಂದು ಪುತಿನ್ ತಮ್ಮ ಭಾಷಣದಲ್ಲಿ ಪ್ರಬಲವಾಗಿ ಎಚ್ಚರಿಸಿದ್ದರು. ರಕ್ತಪಾತ ಉಂಟಾದರೆ, ಅದಕ್ಕೆ ಉಕ್ರೇನ್ ಆಡಳಿತವೇ ಹೊಣೆ ಎಂದಿದ್ದರು.
ಆಕ್ರಮಣ ಉದ್ದೇಶವಲ್ಲ: ಉಕ್ರೇನ್ ವಿರುದ್ಧ ಆಕ್ರಮಣ ಎಸಗಿ, ಅದನ್ನು ವಶಪಡಿಸುವುದು ಉದ್ದೇಶವೇ ಅಲ್ಲ. ಅಲ್ಲಿ ಸೇನೆಯ ಪ್ರಭಾವ ಕಡಿಮೆ ಮಾಡುವುದು ಮತ್ತು ನಾಜಿ ನಿಲುವನ್ನು ಹೊಂದಿದವರ ಪ್ರಭಾವ ಇಲ್ಲವಾಗಿಸುವುದು ಎಂದು ಪುತಿನ್ ತಮ್ಮ ಭಾಷಣದಲ್ಲಿ ಹೇಳಿಕೊಂಡರು.
ಜಗತ್ತಿನ ಲೆಕ್ಕಕ್ಕೆ ಕತ್ತರಿ ತಂದ ಯುದ್ಧ :
ವಾಷಿಂಗ್ಟನ್: ಉಕ್ರೇನ್ ವಿರುದ್ಧ ರಷ್ಯಾ ಸಾರಿರುವ ಯುದ್ಧದಿಂದ ಜಗತ್ತಿನ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀಳಲಿದೆಯೇ ಎಂಬ ಆತಂಕ ಉಂಟಾಗಿದೆ. ಏಕೆಂದರೆ ಎರಡು ವರ್ಷಗಳಿಂದ ಕೊರೊನಾ ಸೋಂಕಿನ ಕಾರಣದಿಂದಾಗಿ ಜಗತ್ತಿನಲ್ಲಿ ಸಂಕಷ್ಟದ ಸ್ಥಿತಿ ಉಂಟಾಗಿತ್ತು. ಸೋಂಕಿನ ಅಬ್ಬರ ತಗ್ಗಿರುವಂತೆಯೇ ವಿತ್ತೀಯ ಚಟುವಟಿಕೆಗಳು ಮತ್ತೆ ಗರಿಗೆದರಲಾರಂಭಿಸಿದ್ದವು. ಐರೋಪ್ಯ ಒಕ್ಕೂಟದ ಗ್ರಾಹಕರಿಂದ ಶುರುವಾಗಿ ಚೀನದಲ್ಲಿ ಸಾಲದ ಸುಳಿಗೆ ಸಿಕ್ಕಿಹಾಕಿಕೊಂಡಿರುವ ಉದ್ಯಮಿಗಳು ಮತ್ತು ಆಫ್ರಿಕಾ ಖಂಡದ ರಾಷ್ಟ್ರದಲ್ಲಿ ಆಹಾರದ ಕೊರತೆಗೆ ತುತ್ತಾಗಿರುವ ಜನರ ವರೆಗೆ ಈ ಸಂಘರ್ಷದ ಪ್ರಭಾವ ಉಂಟಾಗಲಿದೆ ಎಂದು ಭೀತಿ ಪಡಲಾಗಿದೆ.
ದಾಳಿ ಮಾಡಿದ ರಷ್ಯಾದ ವಿರುದ್ಧ ಪಾಶ್ಚಾತ್ಯ ರಾಷ್ಟ್ರಗಳು ಈಗಾಗಲೇ ದಿಗ್ಬಂಧನ ಹೇರಿವೆ ನಿಜ. ಆದರೆ ಒಂದು ಅಭಿಪ್ರಾಯದ ಪ್ರಕಾರ ಇಂಥ ಆರ್ಥಿಕ ಪ್ರತೀಕಾರದ ಕ್ರಮಗಳಿಂದಾಗಿ ಜಗತ್ತಿಗೆ ಮತ್ತೂಂದು ಆರ್ಥಿಕ ಹಿಂಜರಿತ ಉಂಟಾಗುವುದು ಅಸಾಧ್ಯ ಎಂಬ ಅಭಿಪ್ರಾಯ ಪಡಲಾಗುತ್ತಿದೆ. ಈ ವಾದಕ್ಕೆ ಪುಷ್ಟೀಕರಿಸಲು ಮುಂದಿಡುತ್ತಿರುವ ವಾದಗಳೆಂದರೆ ರಷ್ಯಾ ಮತ್ತು ಉಕ್ರೇನ್‌ನ ಎರಡೂ ಸೇರಿದರೆ ಜಗತ್ತಿನ ಒಟ್ಟು ಉತ್ಪಾದನೆ (ಜಿಡಿಪಿ)ಯ ಶೇ.2ಕ್ಕಿಂತ ಕಡಿಮೆ ಇದೆ. ಇದರ ಜತೆಗೆ ಪ್ರಾದೇಶಿಕವಾಗಿ ಇರುವ ಅರ್ಥ ವ್ಯವಸ್ಥೆ ಸದೃಢವಾಗಿ ಇರಲಿದೆ ಎಂದು ಆರ್ಥಿಕ ಹಿಂಜರಿತ ಉಂಟಾಗಲಾರದು ಎಂದು ವಾದಿಸುವವರು ಪ್ರತಿಪಾದಿಸುತ್ತಾರೆ.
ಇದರ ಹೊರತಾಗಿಯೂ ಕೂಡ ಜಗತ್ತಿನ ಕೆಲವು ದೇಶಗಳಿಗೆ ಹಾಲಿ ಸಂಘರ್ಷದಿಂದ ಆರ್ಥಿಕ ಸಂಕಷ್ಟ ಉಂಟಾಗಲಿದೆ. ಜತೆಗೆ ಕೈಗಾರಿಕ ಕ್ಷೇತ್ರಗಳಿಗೆ ಕೂಡ ಪ್ರತಿಕೂಲ ಪರಿಸ್ಥಿತಿ ಉಂಟಾಗಲಿದೆ ಎಂಬ ಭೀತಿ ಉಂಟಾಗಿದೆ. ಜಗತ್ತಿನ ಕೋಟ್ಯಂತರ ಮಂದಿಗೆ ವಿವಿಧ ರೀತಿಯಲ್ಲಿ ಸಂಕಷ್ಟಗಳು ಮುಂದೆ ಕಾಣಿಸಿಕೊಳ್ಳಲಿವೆ ಎಂಬ ಆತಂಕವೂ ಎದುರಾಗಲಿದೆ.
ಉಕ್ರೇನ್‌ನಲ್ಲಿ ಶೇ.73ರಷ್ಟು ಕೃಷಿ ಪ್ರಧಾನ ವ್ಯವಸ್ಥೆ ಇದೆ. ಹೀಗಾಗಿ ಅಲ್ಲಿ ಬೆಳೆಯುವ ಬೆಳೆಗಳು ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಿಗೆ ಆಮದಾಗುತ್ತವೆ. ಉದಾಹರಣೆಗೆ ಉಕ್ರೇನ್‌ನಿಂದ ಪ್ರತೀ ತಿಂಗಳೂ 2 ಲಕ್ಷ ಟನ್ ಸೂರ್ಯಕಾಂತಿ ಬೀಜದ ಎಣ್ಣೆ ದೇಶಕ್ಕೆ ಬರುತ್ತಿದೆ. ಈ ಸಂಕಷ್ಟದ ಸ್ಥಿತಿ ಮುಂದುವರಿದರೆ, ಅದು ಕೈಮೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
“ಮೋದಿ ಹೇಳಿದರೆ ಪುತಿನ್ ಕೇಳಬಹುದು’ :
ಹೊಸದಿಲ್ಲಿ: “ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜತೆಗೆ ಮಾತನಾಡಿದರೆ, ಯುದ್ಧ ನಿಲ್ಲಿಸಲು ಸಾಧ್ಯ’
ಹೀಗೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಹೊಸದಿಲ್ಲಿಯಲ್ಲಿರುವ ಉಕ್ರೇನ್ ರಾಯ ಭಾರಿ ಇಗೋರ್ ಪೊಲಿಖಾ. ಈ ಮೂಲಕ ಕೈಮೀರಿ ಹೋಗಿರುವ ಬಿಕ್ಕಟ್ಟು ಪರಿಹರಿಸಲು ಭಾರತ ಸರಕಾರದ ಮಧ್ಯಸ್ಥಿಕೆಯನ್ನು ಕೋರಿ ದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತವೇ ಜಗತ್ತಿನಲ್ಲಿ ಅತ್ಯಂತ ಪ್ರಭಾವಿ ರಾಷ್ಟ್ರವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಮಧ್ಯಸ್ಥಿಕೆ ವಹಿಸಿ, ಪರಿಸ್ಥಿತಿ ಕೈಮೀರಿ ಹೋಗು ವುದಕ್ಕಿಂತ ಮೊದಲು ಅವರು ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರಿಗೆ ಸಲಹೆ ನೀಡುವ ಪರಿಸ್ಥಿತಿಯಲ್ಲಿ ಇರುವುದು ಮೋದಿಯವರಿಗೆ ಮಾತ್ರ ಎಂದು ಇಗೋರ್ ಪೊಲಿಖಾ ಪ್ರತಿಪಾದಿಸಿದ್ದಾರೆ.
ನಮ್ಮ ದೇಶದ ನಾಗರಿಕರು ಮಾತ್ರವಲ್ಲ, ಅಲ್ಲಿ ಕಲಿಯುತ್ತಿರುವ 15 ಸಾವಿರಕ್ಕೂ ಅಧಿಕ ಮಂದಿ ಭಾರತೀಯ ವಿದ್ಯಾರ್ಥಿಗಳ ಹಿತ ರಕ್ಷಣೆಯೂ ಪ್ರಮುಖವಾಗಿದೆ ಎಂದು ಪೊಲಿಖಾ ಹೇಳಿಕೊಂಡಿದ್ದಾರೆ.
ಕೌಟಿಲ್ಯನ ಉಲ್ಲೇಖ :
ಐರೋಪ್ಯ ಒಕ್ಕೂಟದಲ್ಲಿ ನಾಗರಿಕತೆ ಎಂಬ ವ್ಯವಸ್ಥೆ ಇಲ್ಲದೇ ಇದ್ದಾಗ ಭಾರತದಲ್ಲಿ ಪ್ರಾಚೀನಕಾಲದಲ್ಲಿಯೇ ಅತ್ಯುತ್ತಮ ರಾಜತಾಂತ್ರಿಕ ವ್ಯವಸ್ಥೆ ಇತ್ತು ಎಂದಿದ್ದಾರೆ ಪೊಲಿಖಾ. “ಸಾವಿರಾರು ವರ್ಷಗಳ ಹಿಂದೆ ಐರೋಪ್ಯ ಒಕ್ಕೂಟದಲ್ಲಿ ಅತ್ಯುತ್ತಮ ನಾಗರಿಕತೆ ಇರಲಿಲ್ಲ. ಆದರೆ ಭಾರತದಲ್ಲಿ ಕೌಟಿಲ್ಯ ಅವರಂಥ ನುರಿತ ರಾಜತಾಂತ್ರಿಕರಿದ್ದರು. ಸದ್ಯ ಜಗತ್ತಿನಲ್ಲಿ ಭಾರತ ಅತ್ಯಂತ ಪ್ರಭಾವೀ ರಾಷ್ಟ್ರ. ಶೀತಲ ಸಮರದ ಅವಧಿಯಲ್ಲಿ ಭಾರತ ಅಲಿಪ್ತ ರಾಷ್ಟ್ರಗಳ ಒಕ್ಕೂಟದ ನೇತೃತ್ವ ವಹಿಸಿತ್ತು. ಇಂಥ ಹೆಗ್ಗಳಿಕೆ ಇರುವ ರಾಷ್ಟ್ರ ಬಿಕ್ಕಟ್ಟು ತಹಬದಿಗೆ ತರಲು ಮುಂದಾಗಬೇಕು’ ಎಂದು ಮನವಿ ಮಾಡಿದ್ದಾರೆ.
ರಷ್ಯಾ ಮಾಡಿದ್ದು ತಪ್ಪೆಂದು ಹೇಳದ ಚೀನ! :
ಬೀಜಿಂಗ್/ವಿಶ್ವಸಂಸ್ಥೆ: ರಷ್ಯಾ ಮತ್ತು ಉಕ್ರೇನ್ ದೇಶ ಗಳು ಪರಸ್ಪರ ಯುದ್ಧದಿಂದ ಹಿಂದೆ ಸರಿಯಬೇಕು. ಪರಿಸ್ಥಿತಿ ನಿಯಂತ್ರಣ ಮೀರಿ ಹೋಗದಂತೆ ನೋಡಿ ಕೊಳ್ಳಬೇಕು ಎಂದು ಚೀನ ವಿನಂತಿಸಿದೆ. ಚೀನದ ವಿದೇಶಾಂಗ ಇಲಾಖೆ ವಕ್ತಾರ ಹ್ಯು ಚುನ್ಯಿಂಗ್ ಮಾತ ನಾಡಿ, ನಾವು ಉಕ್ರೇನಿನ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಪ್ರಸ್ತುತ ಬೆಳವಣಿಗೆಯ ಹಿಂದೆ ಐತಿಹಾಸಿಕ ಕಾರಣಗಳಿವೆ. ಸಂಕೀರ್ಣ ಸಂದರ್ಭವನ್ನು ಪರಸ್ಪರ ವಿಶ್ವಾಸದಿಂದ ನಿಭಾಯಿಸಬೇಕೆಂದು ನಾವು ಹೇಳುತ್ತೇವೆ ಎಂದಿದ್ದಾರೆ.
ಆದರೆ ರಷ್ಯಾ ಸೇನೆ ಉಕ್ರೇನಿನ ಗಡಿಭಾಗವನ್ನು ದಾಟಿ ಡಾನಾºಸ್‌ಗೆ ತಲುಪಿದ್ದು ತಪ್ಪೆಂದು ಚ್ಯುನಿಂಗ್ ಹೇಳಿರು ವುದು ಗಮನಾರ್ಹ. ಅದಕ್ಕೆ ಕಾರಣ, ಚೀನ- ರಷ್ಯಾ ನಡುವೆ ಉತ್ತಮ ರಾಜತಾಂತ್ರಿಕ ಸಂಬಂಧವಿರುವುದು. ಇದಕ್ಕೂ ಮುನ್ನ ರಷ್ಯಾ ಅಧ್ಯಕ್ಷ ಪುತಿನ್ ಮಾತನಾಡಿ, ನೆರೆಯ ಉಕ್ರೇನ್‌ನಿಂದ ಬೆದರಿಕೆ ಹೆಚ್ಚುತ್ತಿರುವುದರಿಂ ದಲೇ ಸೇನಾ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ವಿಚಾರದಲ್ಲಿ ಯಾವುದೇ ದೇಶಗಳು ಮಧ್ಯಪ್ರವೇಶಿಸಲು ಯತ್ನಿಸಿದರೆ, ಊಹಿಸಲೂ ಆಗದ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಜಾಗ್ರತೆ ಎಂದಿದ್ದಾರೆ.
ಉಕ್ರೇನ್, ರಷ್ಯಾ ಬಲಾಬಲ :
ದೈತ್ಯ ಸೇನಾ ಬಲ ಹೊಂದಿರುವ ವಿಶ್ವದ ಟಾಪ್ 5 ರಾಷ್ಟ್ರಗಳಲ್ಲಿ ರಷ್ಯಾಕೂಡ ಒಂದು. ವಾರ್ಷಿಕವಾಗಿ ತನ್ನ ಬಜೆಟ್‌ನಲ್ಲಿ ಶೇ. 11.4ರಷ್ಟನ್ನು ಆ ದೇಶ, ತನ್ನ ಸೇನೆಗಾಗಿ ಖರ್ಚು ಮಾಡುತ್ತದೆ. ಇಂಥದ್ದೊಂದು ದೇಶಕ್ಕೆ ಸಡ್ಡು ಹೊಡೆದಿರುವ ಉಕ್ರೇನ್ ಕೂಡ ತಕ್ಕಮಟ್ಟಿಗಿನ ಸೇನಾ ಶಕ್ತಿಯನ್ನು ಹೊಂದಿದೆಯಾದರೂ
ಅದು ರಷ್ಯಾ ಸೇನಾಶಕ್ತಿಗೆ ಸರಿಸಮವಾಗಿಲ್ಲ.
ಉಕ್ರೇನ್ / ಸೇನಾ ಬಲ ರಷ್ಯಾ
2,09,000 ಕಾರ್ಯಾಚರಣೆ ನಿರತ ಸಿಬಂದಿ 9,00,000
9,00,000 ಮೀಸಲು ಸೈನಿಕರು 20,00,000
2,040 ಫಿರಂಗಿ 7,571
12,303 ಶಸ್ತ್ರಸಜ್ಜಿತ ವಾಹನ 30,122
2,596 ಟ್ಯಾಂಕರ್‌ಗಳು 12,420
34 ಅಟ್ಯಾಕ್ ಹೆಲಿಕಾಪ್ಟರ್ 544
98 ಫೈಟರ್/ಅಟ್ಯಾಕ್ ಯುದ್ಧ ವಿಮಾನಗಳು 1,511
44,553 ಕೋಟಿ ರೂ ಸೇನಾ ವೆಚ್ಚ 4.6 ಲಕ್ಷ ಕೋಟಿ ರೂ.
ರಷ್ಯಾ ಉಕ್ರೇನ್ ಮೇಲೆ ಮಾಡಿರುವ ದಾಳಿ ಅತ್ಯಂತ ಖಂಡನೀಯ. ಐರೋಪ್ಯ ಒಕ್ಕೂಟದ ಇತಿಹಾಸದಲ್ಲಿಯೇ ಕರಾಳ ದಿನ ಮತ್ತು ಇದೊಂದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ-ಒಲಾಫ್ ಶೋಲ್ಜ್, ಜರ್ಮನಿ ಚಾನ್ಸಲರ್
ಕೂಡಲೇ ರಷ್ಯಾ ಅಧ್ಯಕ್ಷರು ತಮ್ಮ ನಿರ್ಧಾರ ಪರಿಶೀಲಿಸಬೇಕು. ವಿಶ್ವಸಂಸ್ಥೆಯ ಅಪ್ಪಣೆ ಇಲ್ಲದೆ ಪುತಿನ್ ಸೇನೆ ದಾಳಿ ಮಾಡಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಶಾಂತಿ ಸ್ಥಾಪನೆ ಅವಕಾಶ ಮಾಡಿಕೊಡಬೇಕು. -ಆ್ಯಂಟೊನಿಯೋ ಗುಟೆರೆಸ್, ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ
ಇಂಥ ಸಂಕಷ್ಟದ ಕ್ಷಣಗಳಲ್ಲಿ ನಾವು ಉಕ್ರೇನ್‌ನ ಮಹಿಳೆಯರು ಮತ್ತು ಇತರರ ಜತೆಗೆ ನಾವಿದ್ದೇವೆ. ರಷ್ಯಾ ನಡೆಸಿದ ದಾಳಿಯಿಂದಾಗಿ ಅವರ ಜೀವನಕ್ಕೆ ಸಂಕಷ್ಟ ಉಂಟಾಗಲಿದೆ.-ಚಾರ್ಲ್ಸ್ ಮೈಕೆಲ್, ಐರೋಪ್ಯ ಮಂಡಳಿ ಅಧ್ಯಕ್ಷ
ಸಾರ್ವಭೌಮ ರಾಷ್ಟ್ರವೊಂದರ ಮೇಲೆ ನಡೆಸಲಾಗಿರುವ ದಾಳಿ ಸಮರ್ಥನೀಯವಲ್ಲ. ಕೂಡಲೇ ರಷ್ಯಾ ಸೇನೆ ವಾಪಸಾಗಲೇಬೇಕು.-ಪೆಟ್ ಫಿಯಾಲಾ, ಚೆಕ್ ಗಣರಾಜ್ಯದ ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.