ಪ್ರಬಲ ಪ್ರತಿರೋಧಕ್ಕೆ ಥರಗುಟ್ಟಿದ ರಷ್ಯಾ; ಕೀವ್ ವಶ ಪ್ರಯತ್ನವೂ ವಿಫಲ
ಪುತಿನ್ ಸೇನೆಯ ಸ್ಥೈರ್ಯ ಕುಗ್ಗಿಸುತ್ತಿರುವ ಉಕ್ರೇನ್ ಪಡೆ
Team Udayavani, Mar 1, 2022, 8:20 AM IST
ಸೈಪ್ರಸ್‌ನಲ್ಲಿ ಉಕ್ರೇನ್ ಪರ ಪೋಸ್ಟರ್ ಪ್ರದರ್ಶನ.
ಕೀವ್/ಮಾಸ್ಕೋ: ಯುದ್ಧ ಆರಂಭವಾಗಿ 5 ರಾತ್ರಿಗಳು ಕಳೆದಿವೆ. ರಷ್ಯಾದಂಥ ಪ್ರಬಲ ರಾಷ್ಟ್ರ ನಡೆಸಿರುವ ಆಕ್ರಮಣಕ್ಕೆ ಉಕ್ರೇನ್ ನಲುಗಿಹೋಗಿದ್ದರೂ ಪ್ರತಿರೋಧ ಮಾತ್ರ ತಗ್ಗಿಲ್ಲ. ರಾಜಧಾನಿ ಕೀವ್ ಅನ್ನು ತಮ್ಮ ಮುಷ್ಟಿಗೆ ಪಡೆಯಬೇಕು ಎನ್ನುವು ರಷ್ಯಾ ಪಡೆಯ ನಿರಂತರ ಪ್ರಯತ್ನಕ್ಕೆ ಉಕ್ರೇನ್ ಸೈನಿಕರು ಮತ್ತು ನಾಗರಿಕರು ಅಡ್ಡಗಾಲು ಹಾಕುತ್ತಲೇ ಇದ್ದಾರೆ. ಉಕ್ರೇನ್‌ನ ಪ್ರಬಲ ಪ್ರತಿರೋಧದ ಪರಿಣಾಮ, ರಷ್ಯಾ ಪಡೆಯ ನೈತಿಕ ಸ್ಥೆರ್ಯ ಕುಂದುತ್ತಿದೆ.
ಕೀವ್ ನಗರವು ರಷ್ಯಾದ ಕಾಪೆìಟ್ ಬಾಂಬ್‌ಗ (ನಿರಂತರ ಬಾಂಬ್ ದಾಳಿ) ಒಳಗಾದರೂ ಆ ನಗರವು ರಷ್ಯನ್ನರ ಹಿಡಿತಕ್ಕೆ ಸಿಗುತ್ತಿಲ್ಲ. ಒಂದರ್ಥದಲ್ಲಿ ಈ ಹೋರಾಟದಲ್ಲಿ ರಷ್ಯಾ ಸೇನೆಯೇ ಭಾರೀ ನಷ್ಟ ಅನುಭವಿಸುತ್ತಿದೆ. ರವಿವಾರ ತಡರಾತ್ರಿ ಕೀವ್‌ನ ಹೊರವಲಯದಲ್ಲಿ ಭಾರೀ ಪ್ರಮಾಣದ ದಾಳಿ ನಡೆದರೂ ರಾಜಧಾನಿ ಪ್ರವೇಶಿಸುವ ರಷ್ಯಾದ ಎಲ್ಲ ಪ್ರಯತ್ನವೂ ವಿಫಲವಾಗಿದೆ ಎಂದು ಉಕ್ರೇನ್‌ನ ಕಮಾಂಡರ್‌ಗಳು ತಿಳಿಸಿದ್ದಾರೆ.
ಕೀವ್‌ನಲ್ಲಿ ಸದ್ಯ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ. ರಷ್ಯನ್ನರನ್ನು ಹಿಮ್ಮೆಟ್ಟಿಸುವಲ್ಲಿ ನಾವು ಇಲ್ಲಿಯವರೆಗೂ ಯಶಸ್ವಿಯಾಗಿದ್ದೇವೆ. ಕರೆಯದೇ ಬಂದ ಅತಿಥಿಗಳಿಂದ ನಮ್ಮ ನೆಲವನ್ನು ರಕ್ಷಿಸಲು ನಮ್ಮಿಂದ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದು ಕೀವ್ ನಗರ ರಕ್ಷಣೆಯ ಉಸ್ತುವಾರಿ ಹೊತ್ತಿರುವ ಕರ್ನಲ್ ಜನರಲ್ ಅಲೆಕ್ಸಾಂಡರ್ ಸಿಸ್ಕಿ ಹೇಳಿದ್ದಾರೆ.
ಆದರೆ ದಕ್ಷಿಣದಲ್ಲಿ ಬಂದರು ನಗರಿ ಬರ್ಡಿಯಾಂಸ್ಕ್ ಅನ್ನು ವಶಕ್ಕೆ ಪಡೆದಿರುವುದಾಗಿ ರಷ್ಯಾ ಹೇಳಿಕೊಂಡಿದೆ. ರಷ್ಯಾದ ಸೇನಾ ವಾಹನಗಳು ನಗರದಲ್ಲಿ ಸಂಚರಿಸುತ್ತಿರುವ ಫೋಟೋಗಳೂ ಬಿಡುಗಡೆಯಾಗಿವೆ. ಸೇನೆಯು ಮರಿಯು ಪೋಲ್ ನಗರದತ್ತ ಹೊರಟಿದ್ದು, ಆ ನಗರವನ್ನೂ ಸುತ್ತುವರಿಯುವ ಭೀತಿ ಆರಂಭವಾಗಿದೆ.
ಇದನ್ನೂ ಓದಿ:ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯೆಯಿಂದ ವಿಡಿಯೋ ಚಿತ್ರಿಕರಣ : ವಿಪಕ್ಷ ಸದಸ್ಯರಿಂದ ಸಭಾತ್ಯಾಗ
ಮುಂದುವರಿದ ದಾಳಿ: ಸೋಮವಾರ ಮುಂಜಾನೆ ಕೀವ್‌ನಲ್ಲಿ ಅಲ್ಪಕಾಲ ಕರ್ಫ್ಯೂ ತೆರವು ಮಾಡಲಾಗಿತ್ತು. ಜನರಿಗೆ ಆಹಾರ ವಸ್ತುಗಳನ್ನು ಖರೀದಿಸಲು ಮತ್ತು ವಾಯು ವಿಹಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಜನರು ಹೊರ ಬರುತ್ತಿದ್ದಂತೆಯೇ, ಏಕಾಏಕಿ ಸೈರನ್‌ಗಳು ಮೊಳಗಿದವು. ರಷ್ಯಾ ಪಡೆಗಳು ಬೆಳಗಿನ ಜಾವವೇ ನಿರಂತರ ಬಾಂಬ್ ದಾಳಿ ಮಾಡಿದವು. ಕೀವ್ ಮಾತ್ರವಲ್ಲದೇ, ಝೈಟೋಮಿರ್, ಝಪೋರಿಝಿಯಾ ಮತ್ತು ಚೆರ್ನಿಹಿವ್ ನಗರಗಳ ಮೇಲೂ ವೈಮಾನಿಕ ದಾಳಿಗಳು ನಡೆದವು. ಕ್ಷಿಪಣಿಗಳು ಹಲವು ಕಟ್ಟಡಗಳನ್ನು ಚಿಂದಿ ಮಾಡಿದವು. ಖಾರ್ಕಿವ್‌ನಲ್ಲಿ ರಾಕೆಟ್ ದಾಳಿಯಿಂದ 12ಕ್ಕೂ ಅಧಿಕ ಮಂದಿ ಅಸುನೀಗಿದರು.
352 ನಾಗರಿಕರು,
5,300 ರಷ್ಯನ್ನರ ಸಾವು
ಯುದ್ಧ ಆರಂಭವಾದಾಗಿನಿಂದ ರಷ್ಯಾದ 5,300 ಸೈನಿಕರನ್ನು ಹತ್ಯೆಗೈದಿರುವುದಾಗಿ ಉಕ್ರೇನ್ ರಕ್ಷಣಇಲಾಖೆ ಹೇಳಿದೆ. ಇನ್ನೊಂ ದೆಡೆ, ರಷ್ಯಾದ ದಾಳಿಯಿಂದ 14 ಮಕ್ಕಳೂ ಸೇರಿದಂತೆ 352 ಉಕ್ರೇನ್ ನಾಗರಿಕರು ಅಸುನೀಗಿದ್ದಾಗಿಯೂ ಮಾಹಿತಿ ನೀಡಿದೆ.
ರಷ್ಯಾಗೆ ಸಾಥ್
ನೀಡಲಿದೆ ಬೆಲಾರಸ್!
ಉಕ್ರೇನ್ ವಿರುದ್ಧ ಆಕ್ರಮಣ ನಡೆಸಲು ತನ್ನ ದೇಶದ ನೆಲವನ್ನು ರಷ್ಯಾಗೆ ಬಿಟ್ಟುಕೊಟ್ಟಿದ್ದ ಬೆಲಾರಸ್, ಈಗ ಯುದ್ಧದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಿದ್ಧತೆ ನಡೆಸುತ್ತಿದೆ. ರಷ್ಯಾ ಸೇನೆಗೆ ಪರೋಕ್ಷ ಬೆಂಬಲ ನೀಡುತ್ತಿದ್ದ ಬೆಲಾರಸ್ ಈವರೆಗೆ ನೇರವಾಗಿ ಯುದ್ಧದಲ್ಲಿ ಪಾಲ್ಗೊಂಡಿ ರಲಿಲ್ಲ. ಆದರೆ ಈಗ ಉಕ್ರೇನ್‌ಗೆ ತನ್ನ ಸೇನೆ ಯನ್ನೂ ಕಳುಹಿಸಿಕೊಟ್ಟು ರಷ್ಯಾಗೆ ನೆರವಾ ಗಲು ಬೆಲಾರಸ್ ಚಿಂತನೆ ನಡೆಸಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ದೇಶದ ವಿರುದ್ಧವೇ ತಿರುಗಿಬಿದ್ದ ರಷ್ಯನ್ನರು
ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ವಿರುದ್ಧ ರಷ್ಯನ್ನರೇ ತಿರುಗಿಬಿದ್ದಿದ್ದಾರೆ. ಪ್ರತಿಭಟನಕಾರರ ಮೇಲೆ ಕಠಿನ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಪುತಿನ್‌ಎಚ್ಚರಿಕೆ ನೀಡಿರುವ ನಡುವೆಯೇ, ಸೋಮವಾರ ಮಾಸ್ಕೋದಿಂದ ಸೈಬೀರಿಯಾದವರೆಗೆ ಸಾವಿರಾರು ಪ್ರತಿಭಟನಕಾರರು ಬೀದಿಗಿಳಿದಿದ್ದಾರೆ. “ನೋ ಟು ವಾರ್’ ಎಂಬ ಫಲಕಗಳನ್ನು ಹಿಡಿದು ಯುದ್ಧ ಬೇಡ ಎಂದು ಘೋಷಣೆ ಕೂಗಿದ್ದಾರೆ. ಯುದ್ಧವಿರೋಧಿ ಮನವಿ ಪತ್ರಗಳಿಗೆ ಸಹಿ ಹಾಕುವ ಅಭಿಯಾನವೂ ಆರಂಭವಾಗಿದೆ. ಅನೇಕ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆ, ರಷ್ಯಾದ ಮಿತ್ರರಾಷ್ಟ್ರ ಬೆಲಾರಸ್‌ನಲ್ಲೂ ಪ್ರತಿಭಟನೆಗಳು ನಡೆದಿದ್ದು, 500ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ನಾನು ಅಧ್ಯಕ್ಷ ಸ್ಥಾನಕ್ಕೇರು ವಾಗಲೇ, ಉಕ್ರೇನ್‌ನಲ್ಲಿರುವ ಪ್ರತಿಯೊ ಬ್ಬರೂ “ಅಧ್ಯಕ್ಷ’ರೇ ಎಂದು ನಾನು ಹೇಳಿದ್ದೆ. ಏಕೆಂದರೆ, ನಮ್ಮ ಈ ಸುಂದರ ದೇಶಕ್ಕೆ ನಾವೆಲ್ಲರೂ ಹೊಣೆಗಾರರು. ಆ ಮಾತಿನಂತೆಯೇ, ಈಗ ಪ್ರತಿಯೊಬ್ಬ ನಾಗರಿಕನೂ ದೇಶ ಕಾಯುವ ಯೋಧನಾಗಿದ್ದಾನೆ. ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ.
-ಝೆಲೆನ್‌ಸ್ಕಿ,
ಉಕ್ರೇನ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.