ರಷ್ಯಾಗೆ ಬೆನ್ನು ತಿರುಗಿಸಿ ನಡೆದ ಜಗತ್ತು! ನಿಶ್ಶಸ್ತ್ರೀಕರಣ ಸಮಾವೇಶದಲ್ಲಿ ರಷ್ಯಾಗೆ ಮುಖಭಂಗ
ಪುಟಿನ್ ಪ್ರತಿನಿಧಿ ಮಾತನಾಡುತ್ತಿದ್ದಂತೆ ಎದ್ದು ಹೊರನಡೆದ ರಾಜತಾಂತ್ರಿಕ ಅಧಿಕಾರಿಗಳು
Team Udayavani, Mar 2, 2022, 7:20 AM IST
ಶಾಂತಿಯುತ ರಾಷ್ಟ್ರದ ಮೇಲೆ ಯುದ್ಧ ಸಾರಿ, ಅಮಾನವೀಯವಾಗಿ ವರ್ತಿಸಿರುವ ರಷ್ಯಾದ ವಿರುದ್ಧ ಜಗತ್ತೇ ತಿರುಗಿಬಿದ್ದಿದೆ. ಜಿನೇವಾದಲ್ಲಿ ಮಂಗಳವಾರ ನಿಶ್ಶಸ್ತ್ರೀಕರಣ ಸಮಾವೇಶದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.
ಹೌದು. ಸಮಾವೇಶದ ವೇಳೆ ರಷ್ಯಾ ಸಚಿವರ ವಿಡಿಯೋ ಸಂದೇಶ ತೆರೆಯ ಮೇಲೆ ಮೂಡುತ್ತಿದ್ದಂತೆ, ಅಲ್ಲಿದ್ದ ಬಹುತೇಕ ಎಲ್ಲ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಬೆನ್ನು ಹಾಕಿ, ಹೊರನಡೆದಿದ್ದಾರೆ. ಈ ಮೂಲಕ ರಷ್ಯಾಗೆ “ಬಹಿಷ್ಕಾರ’ದ ಸಂದೇಶ ರವಾನಿಸಿದ್ದಾರೆ.
“ಉಕ್ರೇನ್ ಅಣ್ವಸ್ತ್ರಗಳನ್ನು ಪಡೆಯುವುದನ್ನು ತಪ್ಪಿಸುವ ಸಲುವಾಗಿಯೇ ನಾವು ದಾಳಿ ನಡೆಸಬೇಕಾಯಿತು’ ಎಂದು ಪುಟಿನ್ ಸರ್ಕಾರದ ಸಚಿವರು ಭಾಷಣದಲ್ಲಿ ಹೇಳುತ್ತಿದ್ದರು. ಆದರೆ, ಯಾರೂ ಅದನ್ನು ಕೇಳಿಸಿಕೊಳ್ಳುವ ಗೋಜಿಗೇ ಹೋಗಲಿಲ್ಲ. ಅಮೆರಿಕ, ಬ್ರಿಟನ್, ಫ್ರಾನ್ಸ್ ಸೇರಿದಂತೆ ಬಹುತೇಕ ಅಧಿಕಾರಿಗಳು, ತಮ್ಮ ಆಸನಗಳಿಂದ ಎದ್ದು ಹೊರನಡೆದರು. ವಿಶೇಷವೆಂದರೆ, ಜಿನೇವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲೂ ಇದೇ ಮಾದರಿಯ ಘಟನೆ ನಡೆಯಿತು.
ಝೆಲೆನ್‌ಸ್ಕಿಗೆ ಎದ್ದುನಿಂತು ಗೌರವ
ಯುರೋಪಿಯನ್ ಸಂಸತ್‌ನಲ್ಲಿ ಭಾವುಕ ಭಾಷಣ ಮಾಡಿದ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರಿಗೆ ಚಪ್ಪಾಳೆಯ ಸುರಿಮಳೆಯಾಗಿದೆ. ಉಕ್ರೇನ್‌ನ ಐರೋಪ್ಯ ಒಕ್ಕೂಟದ ಸದಸ್ಯತ್ವ ನೀಡುವಂತೆ ಝೆಲೆನ್‌ಸ್ಕಿ ಕೋರಿಕೊಂಡಿದ್ದಾರೆ. “ನಾನು ಕಾಗದದಲ್ಲಿ ಬರೆದ ಭಾಷಣ ಓದುತ್ತಿಲ್ಲ, ಆ ಕಾಲ ಮುಗಿಯಿತು. ನಮಗೀಗ ಜೀವನ್ಮರಣ ಹೋರಾಟದ ಸಮಯ. ನೀವಿಲ್ಲದಿದ್ದರೆ ನಾವು ಏಕಾಂಗಿಯಾಗುತ್ತೇವೆ. ನಾವೂ ಕೂಡ ನಿಮ್ಮಂತೆಯೇ. ನಮ್ಮ ಕೈಬಿಡುವುದಿಲ್ಲ ಎಂಬ ಭರವಸೆ ನೀಡಿ. ಆಗ ಮಾತ್ರ ಸಾವನ್ನು ಬದುಕು ಜಯಿಸಲು ಸಾಧ್ಯ’ ಎಂದು ಝೆಲೆನ್‌ಸ್ಕಿ ಹೇಳುತ್ತಿದ್ದಂತೆ, ಎದ್ದುನಿಂತ ಸಂಸದರು ದೀರ್ಘಕಾಲ ಚಪ್ಪಾಳೆ ತಟ್ಟುತ್ತಾ ಅವರಿಗೆ ಗೌರವ ಸೂಚಿಸಿದ್ದಾರೆ. ಈ ವೇಳೆ ಹಲವರ ಕಣ್ಣಾಲಿಗಳೂ ತುಂಬಿಬಂದಿವೆ.
ಇದನ್ನೂ ಓದಿ:ಫೇಸ್‌ಬುಕ್‌ನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲ ಪೋಸ್ಟ್: ಆರೋಪಿ ಬಂಧನ
ಯಾರೊಬ್ಬರೂ ಮರೆಯಲ್ಲ, ಯಾರೊಬ್ಬರೂ ಕ್ಷಮಿಸಲ್ಲ
“ರಷ್ಯಾ ಒಂದು ಭಯೋತ್ಪಾದಕ ದೇಶ. ಖಾರ್ಕಿವ್ ನಗರದ ಸೆಂಟ್ರಲ್ ಸೆðàರ್‌ನಲ್ಲಿ ನಡೆಸಿದ ದಾಳಿಯು ಸ್ಪಷ್ಟವಾಗಿ ಉಗ್ರರ ದಾಳಿಯೇ ಆಗಿದೆ. ವ್ಲಾದಿಮಿರ್ ಪುಟಿನ್ ಅವರೇ ನೆನಪಿಟ್ಟುಕೊಳ್ಳಿ, “ಇದನ್ನು ಯಾರೊಬ್ಬರೂ ಮರೆಯಲ್ಲ, ಯಾರೊಬ್ಬರೂ ಕ್ಷಮಿಸಲ್ಲ…’ ಹೀಗೆಂದು ಭಾವುಕರಾಗಿ ನುಡಿದಿದ್ದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕಿ. ತನ್ನ ದೇಶದ ಹಲವು ನಗರಗಳಲ್ಲಿ ನಿರಂತರ ದಾಳಿ ಮುಂದುವರಿದ ಹಿನ್ನೆಲೆಯಲ್ಲಿ ನೊಂದ ಝೆಲೆನ್‌ಸ್ಕಿ ಈ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ಶಾಂತಿಯುತ ಉಕ್ರೇನಿಯನ್ನರನ್ನು ಕೊಂದಿರುವ ನಿಮ್ಮನ್ನು ಜಗತ್ತಿನ ಯಾರೂ ಕ್ಷಮಿಸಲಾರರು. ಉಕ್ರೇನ್‌ನಲ್ಲಿ ನೀವು ಕ್ಲಸ್ಟರ್ ಬಾಂಬ್‌ಗಳನ್ನು ಹಾಕಿದ್ದೀರಿ. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಅದರ ಬಳಕೆ ನಿಷಿದ್ಧ. ಅಂತಾರಾಷ್ಟ್ರೀಯ ನ್ಯಾಯಾಲಯವೂ ಆದಷ್ಟು ಬೇಗ ನಿಮ್ಮ ವಿರುದ್ಧ ವಿಚಾರಣೆ ಆರಂಭಿಸಲಿದೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.