ರಷ್ಯಾ 400 ಇರಾನ್ ಡ್ರೋನ್‌ಗಳನ್ನು ಬಳಸಿದೆ: ವೊಲೊಡಿಮಿರ್ ಝೆಲೆನ್ಸ್ಕಿ
Team Udayavani, Oct 27, 2022, 8:18 AM IST
ಕೀವ್ : ಯುದ್ಧದ ತೀವ್ರತೆಯ ಮಧ್ಯೆ, ಉಕ್ರೇನ್‌ನ ನಾಗರಿಕರ ವಿರುದ್ಧ ರಷ್ಯಾ ಸುಮಾರು 400 ಇರಾನಿನ ಡ್ರೋನ್‌ಗಳನ್ನು ಬಳಸಿದೆ ಎಂದು ಉಕ್ರೇನ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬುಧವಾರ ನೀಡಿದ ಮಾಧ್ಯಮ ಪ್ರಕಟಣೆಯ ಪ್ರಕಾರ ದಿ ಕೀವ್ ಇಂಡಿಪೆಂಡೆಂಟ್ ವರದಿ ಮಾಡಿದೆ.
ಕೀವ್ ನಲ್ಲಿ ನಡೆದ ಬಹು ಸ್ಫೋಟಗಳಲ್ಲಿ ಸುಮಾರು 400 ಇರಾನಿನ ನಿರ್ಮಿತ ಶಾಹೆದ್-136 ಕಾಮಿಕೇಜ್ ಡ್ರೋನ್‌ಗಳನ್ನು ಬಳಸಲಾಗಿದೆ ಮತ್ತು ದೇಶದ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಇದನ್ನೂ ಓದಿ : ರಷ್ಯಾ ಪರಮಾಣು ಪಡೆಗಳ ಅಭ್ಯಾಸ ಉಡಾವಣೆ :ಮೇಲ್ವಿಚಾರಣೆ ಮಾಡಿದ ಪುಟಿನ್!
ಇದಕ್ಕೂ ಮೊದಲು ಅಕ್ಟೋಬರ್ 17 ರಂದು ರಷ್ಯಾ 43 ಡ್ರೋನ್‌ಗಳೊಂದಿಗೆ ಉಕ್ರೇನ್ ಮೇಲೆ ಕ್ರೂರ ದಾಳಿಯನ್ನು ಪ್ರಾರಂಭಿಸಿತು. ನಂತರ, ಮಾಸ್ಕೋದ ಪಡೆಗಳು ಆ ದಿನ ಕೀವ್ ಮೇಲೆ ದಾಳಿ ಮಾಡಲು 28 ಡ್ರೋನ್‌ಗಳನ್ನು ಬಳಸಿದವು, ಐದು ಜನರು ಸಾವನ್ನಪ್ಪಿದರು ಎಂದು ದಿ ಕೀವ್ ಇಂಡಿಪೆಂಡೆಂಟ್ ವರದಿ ಮಾಡಿದೆ.
ಟೆಹ್ರಾನ್ ಮತ್ತು ಮಾಸ್ಕೋ ನಡುವೆ ಸಂಬಂಧಗಳು ಗಾಢವಾಗುತ್ತಿರುವುದರಿಂದ ಇರಾನ್ ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದನ್ನು ನಿರಾಕರಿಸುತ್ತಲೇ ಇದೆ, ಈ ಕ್ರಮವು ಪ್ರಪಂಚದಾದ್ಯಂತ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.