ಉಕ್ರೇನ್ ಮೇಲೆ ರಷ್ಯಾ ದಾಳಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮತದಾನದಿಂದ ದೂರವುಳಿದ ಭಾರತ

Team Udayavani, Feb 26, 2022, 9:16 AM IST

ಉಕ್ರೇನ್ ಮೇಲೆ ರಷ್ಯಾ ದಾಳಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮತದಾನದಿಂದ ದೂರವುಳಿದ ಭಾರತ

ನ್ಯೂಯಾರ್ಕ್: ಉಕ್ರೇನ್ ಮೇಲೆ ರಷ್ಯಾದ ಯುದ್ಧ ಮುಂದುವರಿದಿದೆ. ಪೂರ್ವ ಉಕ್ರೇನ್‌ಗೆ ಸೀಮಿತವಾಗಿದ್ದ ರಷ್ಯಾದ ಪಡೆಗಳು ಶುಕ್ರವಾರ ರಾಜಧಾನಿ ಕೀವ್‌ ನಗರವನ್ನೂ ಪ್ರವೇಶಿಸಿವೆ.

ಈ ಮಧ್ಯೆ ಉಕ್ರೇನ್ ಮೇಲಿನ ದಾಳಿ ನಿಲ್ಲಿಸುವಂತೆ ಮತ್ತು ರಷ್ಯಾ ತನ್ನ ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್ ಸೆಕ್ಯುರಿಟಿ ಕೌನ್ಸಿಲ್) ಶುಕ್ರವಾರ ಅಮೆರಿಕ ಮತ್ತು ಅಲ್ಬೇನಿಯಾ ಪ್ರಾಯೋಜಿಸಿದ ಕರಡು ನಿರ್ಣಯದ ಮೇಲೆ ಮತ ಚಲಾಯಿಸಲಾಯಿತು. ಪೋಲೆಂಡ್, ಇಟಲಿ, ಜರ್ಮನಿ, ಎಸ್ಟೋನಿಯಾ, ಲಕ್ಸೆಂಬರ್ಗ್ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹಲವಾರು ರಾಷ್ಟ್ರಗಳು ಈ ನಿರ್ಣಯವನ್ನು ಬೆಂಬಲಿಸಿವೆ.

ವಿಶ್ವಸಂಸ್ಥೆಯಲ್ಲಿ ಕಾಯಂ ಸದಸ್ಯತ್ವ ಮತ್ತು ವಿಟೋ ಅಧಿಕಾರ ಹೊಂದಿರುವ ರಷ್ಯಾ ವಿರುದ್ಧ ನಿರ್ಣಯವನ್ನು ಮತದಾನಕ್ಕೆ ಹಾಕಲಾಯಿತು. ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮತದಾನದಿಂದ ದೂರ ಉಳಿದಿವೆ. ಆದರೆ ರಷ್ಯಾ ತನ್ನ ವಿಟೋ ಅಧಿಕಾರ ಚಲಾಯಿಸಿ ವಿಶ್ವಸಂಸ್ಥೆಯ ನಿರ್ಣಯವನ್ನು ತಡೆದಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ 15 ಸದಸ್ಯರಲ್ಲಿ 11 ಸದಸ್ಯರು ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು ಖಂಡಿಸುವ ನಿರ್ಣಯದ ಪರವಾಗಿ ಮತ ಚಲಾಯಿಸಿದವು.

ಇದನ್ನೂ ಓದಿ:ಚರ್ನೋಬಿಲ್‌ ಮೇಲೆ ರಷ್ಯಾ ಕಣ್ಣೇಕೆ?

ಈ ಮಧ್ಯೆ ಉಕ್ರೇನ್ ಶಸ್ತ್ರ ತ್ಯಾಗ ಮಾಡಿದರೆ ಮಾತುಕತೆಗೆ ಸದ್ದ ಎಂದು ರಷ್ಯಾ ಹೇಳಿದೆ. ಉಕ್ರೇನ್‌ ಜೊತೆ ಮಾತುಕತೆ ನಡೆಸಲು ಬೆಲಾರಸ್‌ ನ ರಾಜಧಾನಿ ಮಿನ್‌ಸ್ಕ್‌ಗೆ ನಿಯೋಗವನ್ನು ಕಳುಹಿಸಲು ಸಿದ್ಧವಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಹೇಳಿದ್ದಾರೆ.

ಉಕ್ರೇನ್‌ ನಲ್ಲಿ ಪ್ರಜಾತಂತ್ರವನ್ನು ರಕ್ಷಿಸುವುದು ರಷ್ಯಾ ಆಕ್ರಮಣದ ಉದ್ದೇಶ ಎಂದಿರುವ ಪೆಸ್ಕೋವ್, ರಕ್ಷಣಾ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಸರ್ಕಾರದ ಪ್ರತಿನಿಧಿಗಳು ನಿಯೋಗದಲ್ಲಿ ಇರಲಿದ್ದಾರೆಂದು ಹೇಳಿದ್ದಾರೆ.

ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಷ್ಯಾದೊಂದಿಗೆ ಮಾತುಕತೆ ನಡೆಸಲು ಬಯಸುತ್ತಿರುವುದಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಭಾಷಣದಲ್ಲಿ ಶುಕ್ರವಾರ ಹೇಳಿದ್ದರು. ಈ ಸಂಬಂಧ ವ್ಲಾಡಿಮಿರ್ ಪುಟಿನ್, ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಉಕ್ರೇನ್ ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ತಮ್ಮ ದೇಶ ಹೊಂದಿಲ್ಲ. ಉಕ್ರೇನ್ ಪಡೆಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ನೇರವಾಗಿ ಮಾತುಕತೆ ನಡೆಸಲು ಮಾಸ್ಕೋ ಸಿದ್ಧವಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್‌ ಹೇಳಿದ್ದರು.

ಟಾಪ್ ನ್ಯೂಸ್

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

Kazakhstan: ಅಜೆರ್ಬೈಜಾನ್‌ ಏರ್‌ ಲೈನ್ಸ್‌ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?

Kazakhstan: ಅಜೆರ್ಬೈಜಾನ್‌ ಏರ್‌ ಲೈನ್ಸ್‌ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್‌ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ

UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್‌ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ

American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್‌’ಗೆ ಅಡ್ಡಿAmerican Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್‌’ಗೆ ಅಡ್ಡಿ

American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್‌’ಗೆ ಅಡ್ಡಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.