30 ಮಂದಿ ತಿಂದ ದಂಪತಿ; ರಷ್ಯಾದ ಕ್ರಸ್ನೊಡಾರ್ ನಗರದ ನರಭಕ್ಷಕ ಜೋಡಿ
Team Udayavani, Sep 28, 2017, 7:15 AM IST
ಮಾಸ್ಕೊ: ಮನುಷ್ಯರೇ ಮನುಷ್ಯರನ್ನು ಕೊಂದು ತಿನ್ನುವ ಬಗ್ಗೆ ನೀವು ಎಲ್ಲೋ ಓದಿರಬಹುದು. ಇಲ್ಲವೇ ಸಿನಿಮಾದಲ್ಲಿ ನೋಡಿರಬಹುದು. ಆದರೆ ರಷ್ಯಾದಲ್ಲಿ ಮನುಷ್ಯರ ಮಾಂಸವನ್ನೇ ತಿಂದು ಬದುಕಿರುವ ದಂಪತಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹೇಳುವಂತೆ ಈ ನರಭಕ್ಷಕ ದಂಪತಿ ಇದುವರೆಗೂ ಕನಿಷ್ಠ 30 ಮಂದಿಯನ್ನು ಕೊಂದು, ತಿಂದಿದ್ದಾರೆ!
ರಷ್ಯಾದ ಕ್ರಸ್ನೊಡಾರ್ ನಗರದಲ್ಲಿ ಕೆಲ ವರ್ಷಗಳಿಂದ ನಗರವಾಸಿಗಳು ನಿಗೂಢವಾಗಿ ನಾಪತ್ತೆಯಾಗುವುದು ಸಾಮಾನ್ಯವಾಗಿತ್ತು. ಆದರೆ ಕಾಣೆಯಾದವರಾರೂ ಮತ್ತೆ ಕಾಣಿಸಿಕೊಂಡಿಲ್ಲ. ಅವರ ದೇಹಗಳೂ ಪೊತ್ತೆಯಾಗಿರಲಿಲ್ಲ. ಈ ರಹಸ್ಯದ ಬೆನ್ನುಹತ್ತಿದ ಪೊಲೀಸರು, ಅನುಮಾನದ ಮೇಲೆ ನತಾಲಿಯಾ ಮತ್ತು ಆಕೆಯ 35 ವರ್ಷದ ಪತಿ, ಡಿಮಿಟ್ರಿ ಬಕಿÏàವ್ ಹೆಸರಿನ ದಂಪತಿಯನ್ನು ಬಂಧಿಸಿದ್ದು, ಇವರ ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ದೊರೆತಿದೆ.
ಒಬ್ಬಂಟಿ ವ್ಯಕ್ತಿಗಳನ್ನು ಅನಾಮತ್ತಾಗಿ ಅಪಹರಿಸುತ್ತಿದ್ದ ಈ ದಂಪತಿ, ರಹಸ್ಯ ಸ್ಥಳವೊಂದಕ್ಕೆ ಅವರನ್ನು ಕರೆದೊಯ್ದು, ಮಾದಕ ದ್ರವ್ಯಗಳನ್ನು ನೀಡಿ ಮತ್ತು ಬರಿಸುತ್ತಿದ್ದರು. ನಂತರ ಜೀವಂತವಾಗಿರುವಾಗಲೇ ಅವರ ಚರ್ಮ ಸುಲಿದು, ಕೊಂದು ದೇಹದ ಅಂಗಾಂಗಗಳನ್ನು ಬೇಯಿಸಿ ತಿನ್ನುತ್ತಿದ್ದರು. ತಿಂದುಳಿದ ಅಂಗಾಂಗಗಳನ್ನು ಲವಣಯುಕ್ತ ದ್ರಾವಣವಿರುವ ಬಾಟಲಿಗಳಲ್ಲಿ ಶೇಖರಿಸಿಟ್ಟು, ನಂತರ ಅದನ್ನೇ ಆಹಾರವಾಗಿ ಸೇವಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ ಇಷ್ಟೊಂದು ಅಪಹರಣ, ಕೊಲೆ ನಡೆದರೂ, ಇವರೇ ಹಂತಕರೆಂದು ಗೊತ್ತಾಗಿರಲಿಲ್ಲ. ರಸ್ತೆಯೊಂದರಲ್ಲಿ ಬಿದ್ದಿದ್ದ ಮೊಬೈಲ್ ಫೋನ್ ನೀಡಿದ ಸುಳಿವಿನ ಮೇರೆಗೆ ನರಭಕ್ಷಕ ದಂಪತಿಯನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.