ಉಕ್ರೇನ್ನ ಖೆರ್ಸಾನ್ನಲ್ಲಿ ಇನ್ನು ಮುಂದೆ ರಷ್ಯಾ ಕರೆನ್ಸಿ
Team Udayavani, Apr 29, 2022, 7:50 AM IST
ಸಾಂದರ್ಭಿಕ ಚಿತ್ರ
ಕೀವ್/ಮಾಸ್ಕೋ: ಉಕ್ರೇನ್ನ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ ಗುರುವಾರ ಹೊಸ ದೊಂದು ಘೋಷಣೆ ಮಾಡಿದೆ. ರಷ್ಯಾ ಪಡೆಯು ಪೂರ್ತಿಯಾಗಿ ವಶಪಡಿಸಿಕೊಂಡಿರುವ ಉಕ್ರೇನ್ನ ಖೆರ್ಸಾನ್ ಪ್ರಾಂತ್ಯದಲ್ಲಿ ಮೇ 1ರಿಂದ ರಷ್ಯಾದ ರುಬೆಲ್ ಅಧಿಕೃತ ಕರೆನ್ಸಿಯಾಗಿರಲಿದೆ. ಅಲ್ಲಿನ ಜನರಿಗೆ ಕರೆನ್ಸಿ ಬದಲಾವಣೆ ಮಾಡಿಕೊಳ್ಳಲು 4 ತಿಂಗಳ ಕಾಲಾವಕಾಶ ಕೊಡಲಾಗು ವುದು ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.
ಹಾಗೆಯೇ ರಷ್ಯಾದ ಭೂ ಪ್ರದೇಶದ ಮೇಲೆ ದಾಳಿ ನಡೆಸಲು ಉಕ್ರೇನ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳು ಬೆಂಬಲಿಸುತ್ತಿರುವ ಬಗ್ಗೆಯೂ ರಷ್ಯಾ ಕೆಂಡ ಕಾರಿದೆ. ಇದೇ ರೀತಿ ಬೆಂಬಲ ಮುಂದುವರಿಸಿದರೆ, ಪಾಶ್ಚಿ ಮಾತ್ಯ ರಾಷ್ಟ್ರಗಳು ಅದಕ್ಕೆ ತಕ್ಕ ಸ್ಪಂದನೆಯನ್ನು ನಮ್ಮಿಂದ ಅನುಭವಿಸಬೇಕಾಗುತ್ತದೆ ಎಂದು ಕಟು ವಾಗಿ ಎಚ್ಚರಿಸಿದೆ.
ಫೆ.24ರಿಂದ ಈಚೆಗೆ ರಷ್ಯಾ 8,500ಕ್ಕೂ ಅಧಿಕ ಯುದ್ಧಾಪರಾಧ ಮಾಡಿದೆ ಎಂದು ಉಕ್ರೇನ್ ದೂರಿದೆ. ಈ ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆಸು ತ್ತಿರುವುದಾಗಿಯೂ ತಿಳಿಸಿದೆ. ಈ ನಡುವೆ, ಉಕ್ರೇನ್ ರಾಜಧಾನಿಯ ಕೀವ್ನ ಬೊರೊಡಿಯಾಕಾ ಎಂಬ ಲ್ಲಿಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರೆಸ್ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೂಡಲೇ ಕಾಳಗ ನಿಲ್ಲಬೇಕು ಎಂದು ಪ್ರತಿಪಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada ಮಾರಾಟಕ್ಕಿಲ್ಲ: ಟ್ರಂಪ್ಗೆ ಎನ್ಡಿಪಿ ನಾಯಕ ಸಿಂಗ್ ಚಾಟಿ
Los Angeles;ಕಾಳ್ಗಿಚ್ಚು ಆರಿಸಲು ಸೂಪರ್ ಸ್ಕೂಪರ್:ಬೆಂಕಿಯ ಕೆನ್ನಾಲಿಗೆಗೆ ಬದುಕು ಭಸ್ಮ!
ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್
Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು
Japan; ಕ್ಯುಶು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ!
MUST WATCH
ಹೊಸ ಸೇರ್ಪಡೆ
Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ
Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.