ಮೊಜಾಂಬಿಕ್‌ನಲ್ಲಿ ‘Made In India’ ರೈಲಿನಲ್ಲಿ ಸವಾರಿ ಮಾಡಿದ ಸಚಿವ S Jaishankar
Team Udayavani, Apr 14, 2023, 12:32 PM IST
ಮಾಪುಟೊ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮೊಜಾಂಬಿಕಾ ರಾಜಧಾನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಸವಾರಿ ಮಾಡಿದರು.
ರೈಲು ಜಾಲಗಳಲ್ಲಿ ವಿದ್ಯುತ್ ಬಳಕೆ ಮತ್ತು ಜಲಮಾರ್ಗ ಸಂಪರ್ಕವನ್ನು ವಿಸ್ತರಿಸಲು ಸಹಾಯ ಮಾಡುವಲ್ಲಿ ಭಾರತದ ಪಾಲುದಾರಿಕೆಯ ಬಗ್ಗೆ ಮೊಜಾಂಬಿಕಾ ಸಾರಿಗೆ ಸಚಿವರೊಂದಿಗೆ ಚರ್ಚಿಸಿದರು.
ಶ್ರೀ ಜೈಶಂಕರ್ ಅವರು ಮೂರು ದಿನಗಳ ಭೇಟಿಗಾಗಿ ಗುರುವಾರ ಮೊಜಾಂಬಿಕ್ ನ ರಾಜಧಾನಿಗೆ ಆಗಮಿಸಿದರು ಮತ್ತು ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಆಫ್ರಿಕನ್ ದೇಶದ ಸಂಸತ್ತಿನ ಅಧ್ಯಕ್ಷರನ್ನು ಭೇಟಿ ಮಾಡಿದರು.
ಎಪ್ರಿಲ್ 13 ರಿಂದ 15 ರವರೆಗೆ ಮೊಜಾಂಬಿಕಾ ಭೇಟಿಯು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರೊಬ್ಬರು ಆ ದೇಶಕ್ಕೆ ನೀಡಿರುವ ಮೊದಲ ಭೇಟಿಯಾಗಿದೆ.
“ಮೊಜಾಂಬಿಕನ್ ಸಾರಿಗೆ ಮತ್ತು ಸಂವಹನ ಸಚಿವ ಮತ್ತು ಮೊಜಾಂಬಿಕನ್ ಬಂದರು, ರೈಲು ಪ್ರಾಧಿಕಾರದ ಅಧ್ಯಕ್ಷ ಮೇಟಿಯುಸ್ ಮಗಾಲಾ ಅವರೊಂದಿಗೆ ನಡೆಸಿದ ಹಸಿರು ಸಾರಿಗೆ ಸಂಭಾಷಣೆ ಅದ್ಭುತವಾಗಿದೆ.
Took a ride in a ‘Made in India’ train from Maputo to Machava with Mozambican Transport Minister Mateus Magala.
Appreciate CMD RITES Rahul Mithal joining us on the journey. @AshwiniVaishnaw pic.twitter.com/NhfIGwGHQj
— Dr. S. Jaishankar (@DrSJaishankar) April 13, 2023
ರೈಲು ಜಾಲಗಳು, ವಿದ್ಯುತ್ ಚಲನಶೀಲತೆ ಮತ್ತು ಜಲಮಾರ್ಗಗಳ ಸಂಪರ್ಕವನ್ನು ವಿಸ್ತರಿಸುವ ಕುರಿತು ಮಾತನಾಡಿದೆವು. ಈ ನಿಟ್ಟಿನಲ್ಲಿ ಭಾರತವು ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿದೆ” ಎಂದು ಸಚಿವ ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ.
ಮೊಜಾಂಬಿಕನ್ ಸಾರಿಗೆ ಸಚಿವ ಮೇಟಿಯುಸ್ ಮಾಗಾಲಾ ಅವರೊಂದಿಗೆ ಮಾಪುಟೊದಿಂದ ಮಚಾವಾಗೆ ‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಜೈಶಂಕರ್ ಸವಾರಿ ಮಾಡಿದರು.
ಸಿಎಂಡಿ ರೈಟ್ಸ್ ರಾಹುಲ್ ಮಿಥಾಲ್ ಅವರು ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿಕೊಂಡಿದ್ದನ್ನು ಶ್ಲಾಘಿಸಿ ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ. ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.