ಚುನಾವಣೆಯಲ್ಲಿ ಗೆಲುವು; 34ರ ಹರೆಯದ ಮರಿನ್ ವಿಶ್ವದ ಅತ್ಯಂತ ಅತೀ ಕಿರಿಯ ಪ್ರಧಾನಮಂತ್ರಿ
ಭಾನುವಾರ ಪ್ರಧಾನಿ ಗಾದಿಗೆ ನಡೆದ ಮತದಾನದಲ್ಲಿ ಸನ್ನಾ ಜಯ ಸಾಧಿಸಿದ್ದರು
Team Udayavani, Dec 9, 2019, 2:02 PM IST
ಹೆಲ್ಸಿಂಕಿ: ಫಿನ್ ಲ್ಯಾಂಡ್ ನ ಸೋಶಿಯಲ್ ಡೆಮೋಕ್ರಟ್ಸ್ 34 ವರ್ಷದ ಮಾಜಿ ಸಾರಿಗೆ ಸಚಿವೆಯನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದು, ದೇಶದ ಇತಿಹಾಸದಲ್ಲಿಯೇ ಸನ್ನಾ ಮರಿನ್ ವಿಶ್ವದ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾನುವಾರ ಪ್ರಧಾನಿ ಗಾದಿಗೆ ನಡೆದ ಮತದಾನದಲ್ಲಿ ಸನ್ನಾ ತಮ್ಮ ಪ್ರತಿಸ್ಪರ್ಧಿ ಆ್ಯನ್ ಟ್ಟಿ ರಿನ್ನೆ ವಿರುದ್ಧ ಕಡಿಮೆ ಅಂತರದಲ್ಲಿ ಜಯ ಸಾಧಿಸಿದ್ದರು. ಅಂಚೆ ಸಿಬ್ಬಂದಿಗಳ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ವೈಫಲ್ಯ ಕಂಡು, ಮೈತ್ರಿಪಕ್ಷದ ಸೆಂಟರ್ ಪಾರ್ಟಿಯ ವಿಶ್ವಾಸಮತ ಕಳೆದುಕೊಂಡ ಹಿನ್ನೆಲೆಯಲ್ಲಿ ರಿನ್ನೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆ್ಯನ್ ಟ್ಟಿ ಜುಹಾನಿ ರಿನ್ನೆ ಅವರು 2019ರ ಜೂನ್ ನಿಂದ ಡಿಸೆಂಬರ್ 6ರವರೆಗೆ ಫಿನ್ ಲ್ಯಾಂಡ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. 2014ರವರೆಗೆ ಸೋಶಿಯಲ್ ಡೆಮೋಕ್ರಟಿಕ್ ಪಕ್ಷದ ಮುಖಂಡರಾಗಿದ್ದರು. ಹಣಕಾಸು ಸಚಿವರಾಗಿ, ಫಿನ್ ಲ್ಯಾಂಡ್ ಉಪಪ್ರಧಾನಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಕಿರಿಯ ವಯಸ್ಸಿನ ಹಿನ್ನೆಲೆಯಲ್ಲಿ ದಿಕ್ಕು ತಪ್ಪಿಸಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಮರಿನ್, ವಿಶ್ವಾಸವನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ನಾವು ಕಠಿಣ ಕೆಲಸ ಮಾಡಬೇಕಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
ನಾನು ನನ್ನ ವಯಸ್ಸು ಅಥವಾ ಲಿಂಗದ ಬಗ್ಗೆ ಯಾವತ್ತೂ ಆಲೋಚಿಸಿಲ್ಲ. ನಾನು ಕಾರಣಗಳ ಬಗ್ಗೆ ಚಿಂತಿಸುತ್ತೇನೆ…ಹೀಗಾಗಿ ನಾನು ರಾಜಕೀಯದಲ್ಲಿ ಅವಕಾಶ ಪಡೆದಿದ್ದೇನೆ. ಕೆಲವು ಆಲೋಚನೆಗಳ ವಿಶ್ವಾಸದಿಂದಾಗಿಯೇ ನಾವು ಚುನಾವಣೆಯಲ್ಲಿ ಗೆಲುವು ಸಾಧಿಸುವಂತೆ ಮಾಡಿರುವುದಾಗಿ ಹೇಳಿದರು.
ಮರಿನ್ (34ವರ್ಷ) ಜಗತ್ತಿನ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದು, ಉಕ್ರೈನ್ ಪ್ರಧಾನಮಂತ್ರಿ ಓಲೆಕ್ಸಿ ಹೊಂಚರುಕ್ (35) ಈ ಮೊದಲು ವಿಶ್ವದ ಕಿರಿಯ ಪ್ರಧಾನಿ ಪಟ್ಟಿಯಲ್ಲಿದ್ದರು. ಇದೀಗ ಆ ಸ್ಥಾನ ಮರಿನ್ ಅವರದ್ದಾಗಿದೆ. ಕಳೆದ ಜೂನ್ ನಿಂದ ರಿನ್ನೆ ಫಿನ್ ಲ್ಯಾಂಡ್ ನ ಸೆಂಟರ್ ಹಾಗೂ ಎಡಪಂಥೀಯ ಐದು ಪಕ್ಷಗಳ ಮೈತ್ರಿ ಸರ್ಕಾರದ ಮುಖ್ಯಸ್ಥರಾಗಿ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಏತನ್ಮಧ್ಯೆ ಅಂಚೆ ಕಚೇರಿಯ 700 ಉದ್ಯೋಗಿಗಳ ಸಂಬಳವನ್ನು ಕಡಿತ ಮಾಡುವ ಯೋಜನೆ ಜಾರಿಗೊಳಿಸಲು ಮುಂದಾದಾಗ ಈ ಬಿಕ್ಕಟ್ಟು ತೀವ್ರಗೊಂಡ ನಂತರ ರಿನ್ನೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
ಅಂಚೆ ಇಲಾಖೆ ನಡೆಸಿದ ತೀವ್ರ ಪ್ರತಿಭಟನೆಗೆ ತಲೆಬಾಗಿದ ಫಿನ್ ಲ್ಯಾಂಡ್ ಸರ್ಕಾರ ನವೆಂಬರ್ ನಲ್ಲಿ ಅಂಚೆ ಇಲಾಖೆಯ ಪರಿಷ್ಕೃತ ಯೋಜನೆಯನ್ನು ವಾಪಸ್ ಪಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.