Saturn; ಇನ್ನು 6 ತಿಂಗಳಲ್ಲೇ ಶನಿ ಗ್ರಹದ ಉಂಗುರ ಮಾಯ!
Team Udayavani, Sep 4, 2024, 7:08 AM IST
ಲಂಡನ್: ಹಲವು ಶತಮಾನಗಳಿಂದಲೂ ಖಗೋಳಾಸಕ್ತರ ಕೌತುಕವನ್ನು ಕೆರಳಿಸಿರುವ ಶನಿ ಗ್ರಹದ ಉಂಗುರವು ಇನ್ನು ಕೇವಲ 6 ತಿಂಗಳಲ್ಲೇ ಕಣ್ಮರೆಯಾಗಲಿದೆ!
ಅರೆ, ಶನಿ ತನ್ನ ಉಂಗುರವನ್ನೇ ಕಳೆದುಕೊಳ್ಳುತ್ತಾನಾ ಎಂದು ಯೋಚಿಸುತ್ತಿದ್ದೀರಾ? ವಾಸ್ತವದಲ್ಲಿ ಶನಿಯ ಉಂಗುರವೇನೂ ಕಳಚಿ ಬೀಳುವುದಿಲ್ಲ. ಆದರೆ ಅದು ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ ಅಷ್ಟೆ. ಇದು ಕೂಡ ಖಗೋಳ ಕೌತುಕಗಳಲ್ಲಿ ಒಂದು.
2025ರ ಮಾರ್ಚ್‌ನಲ್ಲಿ ಶನಿಯ ಸುಂದರ ಉಂಗುರಗಳು ಭೂಮಿಯಿಂದ ನೋಡುವವರ ಕಣ್ಣಿಗೆ ಗೋಚರಿಸುವುದಿಲ್ಲ. ಶನಿಯ ಅಕ್ಷದ ವಿಶಿಷ್ಟ ವಾಲುವಿಕೆ(26.7 ಡಿಗ್ರಿ)ಯಿಂದಾಗಿ ಈ ವಿದ್ಯಮಾನ ಸಂಭವಿಸುತ್ತದೆ. ಗ್ರಹದ ಅಕ್ಷವು ವಾಲುವಾಗ ಶನಿಯ ಉಂಗುರಗಳು ನಮ್ಮ ದೃಷ್ಟಿಯಿಂದ ಮರೆಯಾಗುತ್ತವೆ. ಹಾಗಂತ ಇದು ಶಾಶ್ವತವಾದ ಬದಲಾವಣೆಯಲ್ಲ. ಶನಿಯು ಸೂರ್ಯನ ಸುತ್ತ ಸುತ್ತುವ ಕಾರಣ ಪ್ರತೀ 29.5 ವರ್ಷಗಳಿಗೆ ಒಮ್ಮೆ ಇಂಥ ವಿದ್ಯಮಾನ ಮರುಕಳಿಸುತ್ತದೆ. 2025ರ ಮಾರ್ಚ್‌ನ ಬಳಿಕ ಉಂಗುರ ಮತ್ತೆ ಕಾಣಿಸಿ, ನವೆಂಬರ್‌ನಲ್ಲಿ ಮತ್ತೂಮ್ಮೆ ಮರೆಯಾಗುತ್ತದೆ. ಶನಿಯ ಉಂಗುರಗಳು ಮತ್ತೆ ಪೂರ್ಣಪ್ರಮಾಣದಲ್ಲಿ ಕಾಣಿಸಬೇಕೆಂದರೆ 2032ರ ವರೆಗೆ ಕಾಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Karnataka: ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್: ಸಿಎಂ ಸಿದ್ದರಾಮಯ್ಯ
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.