![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 14, 2022, 4:12 PM IST
ಸೌದಿಅರೇಬಿಯಾ: ರಾಣಿ ಎಲಿಜಬೆತ್ II ಅವರ ಆತ್ಮಕ್ಕೆ ಶಾಂತಿ ಸಿಗಬೇಕು, ಅವರಿಗೆ ಸ್ವರ್ಗ ಪ್ರಾಪ್ತಿಯಾಗಬೇಕೆಂದು ಮೆಕ್ಕಾಗೆ ʼಉಮ್ರಾ ಯಾತ್ರೆʼ ಯನ್ನು ಕೈಗೊಳ್ಳುವುದಾಗಿ ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಆತನನ್ನು ಸೌದಿ ಪೊಲೀಸರು ಬಂಧಿಸಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪಂಜಾಬ್:ಆಮ್ ಆದ್ಮಿ ಪಕ್ಷದ 10 ಶಾಸಕರನ್ನು ಬಿಜೆಪಿ ಸಂಪರ್ಕಿಸಿ, ಆಫರ್ ನೀಡಿತ್ತು: ಕೇಜ್ರಿವಾಲ್
ಯೆಮೆನ್ ಎಂಬಾತ ಮೆಕ್ಕಾದ ಗ್ರ್ಯಾಂಡ್ ಮಸೀದಿಯ ಬಳಿ ದಿವಂಗತ ರಾಣಿಯ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಉಮ್ರಾ ಯಾತ್ರೆ ಕೈಗೊಂಡಿದ್ದೇನೆ ಎಂದು ಬರೆದಿರುವ ಬ್ಯಾನರ್ ಅನ್ನು ಹಿಡಿದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದನು.
ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದಂತೆ ಯೆಮೆನ್ ಬಂಧನಕ್ಕೆ ಆಗ್ರಹಗಳು ಕೇಳಿಬಂದಿದ್ದವು. ಪವಿತ್ರ ಸ್ಥಳಗಳು ರಾಜಕೀಯ ವಿಮರ್ಶೆಯ ಅಖಾಡವಲ್ಲ, ಕೂಡಲೇ ಆತನನ್ನು ಬಂಧಿಸಿ ಶಿಕ್ಷೆ ನೀಡಿ ಎಂದು ನೆಟ್ಟಿಗರು ಆಗ್ರಹಿಸಿದ್ದರು.
? ? A man who dedicated an Umrah pilgrimage to the late Queen Elizabeth II from the Grand Mosque of Mecca was arrested by Saudi policehttps://t.co/oKxRHRtOLA
— Middle East Eye (@MiddleEastEye) September 14, 2022
ಯೆಮೆನ್ ಕಾನೂನು ಉಲ್ಲಂಘಿಸಿ ಗ್ರ್ಯಾಂಡ್ ಮಸೀದಿಯೊಳಗೆ ಬ್ಯಾನರ್ ಹಿಡಿದುಕೊಂಡು ಬಂದ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವುದಾಗಿ ಸೌದಿ ಸಾರ್ವಜನಿಕ ಭದ್ರತಾ ನಿರ್ದೇಶನಾಲಯವು ಈ ಕುರಿತು ತನ್ನ ಟ್ವಿಟ್ಟರ್‌ನಲ್ಲಿ ತಿಳಿಸಿದೆ.
ಸೌದಿ ಅರೇಬಿಯಾದಲ್ಲಿ ಮೆಕ್ಕಾ ಯಾತ್ರಿಕರು ಬ್ಯಾನರ್‌ಗಳನ್ನು ಅಥವಾ ಘೋಷಣೆಗಳನ್ನು ಹಾಕುವುದನ್ನು ನಿಷೇಧಿಸಿದೆ . ಅಷ್ಟೇ ಅಲ್ಲದೇ , ಇಲ್ಲಿ ನಿಧನ ಹೊಂದಿದ ಮುಸ್ಲಿಮರ ಪರವಾಗಿ ಉಮ್ರಾ ಮಾಡುವುದು ಸ್ವೀಕಾರಾರ್ಹವಾಗಿದ್ದರೂ , ಇದು ರಾಣಿಯಂತಹ ಮುಸ್ಲಿಮೇತರರಿಗೆ ಅನ್ವಯಿಸುವುದಿಲ್ಲ. ಅವರು ಚರ್ಚ್ ಆಫ್ ಇಂಗ್ಲೆಂಡ್‌ನ ಸರ್ವೋಚ್ಚ ಗವರ್ನರ್ ಆಗಿದ್ದರೂ ಮಸೀದಿಗೆ ಸಂಬಂಧಿಸಿದ ನಿಯಮಗಳಿಗೆ ಇದು ವಿರುದ್ಧವಾಗಿದೆ . ಹೀಗಾಗಿ ಈ ನಿಯಮಗಳನ್ವಯ ಬ್ಯಾನರ್ ಹಿಡಿದು ಬಂದಿದ್ದ ಯೆಮನ್ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.